ಇನ್ನೂ ಎರಡು ದಿನ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 2: ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ. ಬೆಳಗ್ಗೆ ಹನ್ನೊಂದರ ವೇಳೆಗೂ ಚಳಿ, ಮಳೆಯ ಜುಗಲ್ ಬಂದಿ. ಗುರುವಾರ ರಾತ್ರಿ ಹಲವೆಡೆ ಮಳೆಯಾಗಿದ್ದು, ನಾಡಾ ಚಂಡಮಾರುತ ದುರ್ಬಲವಾಗಿದೆ ಎಂಬ ಮಾಹಿತಿ ಇದ್ದರೂ ಬೆಂಗಳೂರು ವಾತಾವರಣದ ಮೇಲೆ ಅದರ ಪ್ರಭಾವ ಆಗಿರುವುದು ಅನುಭವಕ್ಕೆ ಬರುತ್ತಿದೆ.

ಶಾಲೆ-ಕಾಲೇಜುಗಳಿಗೆ ತೆರಳುವವರು ಮೈ ಬೆಚ್ಚನೆಯ ಸ್ವೆಟರ್, ಜರ್ಕಿನ್ ಹಾಕಿಕೊಂಡಿದ್ದಿದ್ದು ಸಾಮಾನ್ಯವಾಗಿತ್ತು. ಇನ್ನು ಕಚೇರಿಗಳಿಗೆ ತೆರಳುತ್ತಿದ್ದವರು ಜಿಟಿಜಿಟಿ ಮಳೆಗೆ ತೋಯ್ದುಕೊಂಡು ಹೋಗುತ್ತಿದ್ದರು. ಮುಂದಿನ ಇಪ್ಪತ್ನಾಲ್ಕು ಗಂಟೆಯಲ್ಲಿ ಮಧ್ಯಮ ಪ್ರಮಾಣದ ಮಳೆಯಾಗಬಹುದು ಎಂಬುದು ಹವಾಮಾನ ಇಲಾಖೆ ಅಂದಾಜು.[ತಮಿಳುನಾಡಿಗೆ 'ನಾಡಾ' ಚಂಡಮಾರುತ , ಕರ್ನಾಟಕದಲ್ಲೂ ಮಳೆ]

Bangalore is most likely to remain cloudy

ಮೋಡ ಮುಸುಕಿದ ವಾತಾವರಣವಂತೂ ಬೆಂಗಳೂರಿನಲ್ಲಿ ಮುಂದುವರಿಯಲಿದೆ. ತಾಪಮಾನದಲ್ಲೂ ಗಣನೀಯವಾಗಿ ಇಳಿಕೆಯಾಗಲಿದೆ. ಬೆಂಗಳೂರಿನಲ್ಲಿ ಕಡೆಯದಾಗಿ ಮಳೆ ದಾಖಲಾಗಿದ್ದು ನವೆಂಬರ್ ನ ಆರಂಭದಲ್ಲಿ. ಆಗ ಕೂಡ ಸಣ್ಣ ಪ್ರಮಾಣದಲ್ಲಿ ಮಳೆಯಾಗಿತ್ತೇ ವಿನಾ ಆ ನಂತರ ಒಣಹವೆ ಮುಂದುವರಿದಿತ್ತು.[ಒಳ್ಳೆ ಸುದ್ದಿ : 'ನಾಡಾ' ಚಂಡಮಾರುತದ ಆಯಸ್ಸು 12 ಗಂಟೆ ಮಾತ್ರ]

ಸದ್ಯಕ್ಕೆ ನಾಡಾ ಚಂಡಮಾರುತ ದುರ್ಬಲವಾದರೂ ಅದರಿಂದ ತೀವ್ರ ವಾಯುಭಾರ ಕುಸಿತಕ್ಕೆ ಕಾರಣವಾಗಿದೆ. ತಮಿಳುನಾಡಿನಲ್ಲಿ ಭೂ ಕುಸಿತಕ್ಕೆ ಕೂಡ ಕಾರಣವಾಗಿದೆ. ಅಕ್ಟೋಬರ್ 1ರಿಂದ ನವೆಂಬರ್ 23ರವರೆಗಿನ ಮಳೆ ಪ್ರಮಾಣದ ಅಂಕಿ-ಅಂಶಗಳ ಆಧಾರದಲ್ಲೇ ಹೇಳುವುದಾದರೆ ಕರ್ನಾಟಕದಲ್ಲಿ ಮಳೆ ತುಂಬಾ ಕಡಿಮೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ 93, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ 73ರಷ್ಟು ಮಳೆ ಕೊರತೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The sky of Bangalore is most likely to remain cloudy. The temperature of the city is likely to drop and mild winds are expected to blow.
Please Wait while comments are loading...