ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 25 ಸ್ಕೈವಾಕ್ ನಿರ್ಮಾಣ, ಎಲ್ಲೆಲ್ಲಿ?

|
Google Oneindia Kannada News

ಬೆಂಗಳೂರು, ಜೂ. 11 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೆಣ್ಣೂರು ಜಂಕ್ಷನ್ ಬಳಿಯ ಕಮ್ಮನಹಳ್ಳಿ ಹಾಗೂ ಬಾಬುಸಾಬ್‌ ಪಾಳ್ಯ ಬಳಿ ಸ್ಕೈವಾಕ್ ನಿರ್ಮಾಣಕ್ಕೆ ಚಾಲನೆ ನೀಡಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಸೇರಿದಂತೆ ನಗರದ ಏಳು ಕಡೆ ಸ್ಕೈ ವಾಕ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.

ಬಿಡಿಎ ನಿಗದಿ ಪಡಿಸಿರುವ ಷರತ್ತುಗಳನ್ನು ಪೂರೈಸುವ ಗುತ್ತಿದಾರರಿಗೆ ಸ್ಕೈ ವಾಕ್ ನಿರ್ಮಾಣ ಕಾಮಗಾರಿಯ ಟೆಂಡರ್ ನೀಡಲಾಗುತ್ತದೆ. ಪ್ರತಿಯೊಂದು ಸ್ಕೈವಾಕ್ ನಿರ್ಮಾಣಕ್ಕೆ 8 ತಿಂಗಳ ಅವಧಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. [ಸಿಎಂ ಬೆಂಗಳೂರು ರೌಂಡ್ಸ್ : ಪೀಣ್ಯ ಅಭಿವೃದ್ಧಿಗೆ 100 ಕೋಟಿ]

sky walk

2015-16ನೇ ಆರ್ಥಿಕ ವರ್ಷದ ಅಂತ್ಯದೊಳಗೆ ಎಲ್ಲಾ 25 ಸ್ಕೈವಾಕ್‌ಗಳನ್ನು ಲೋಕಾರ್ಪಣೆ ಮಾಡುವ ಗುರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊಂದಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಷರತ್ತಿನಂತೆಯೇ ಟೆಂಡರ್ ನೀಡಲಾಗುತ್ತಿದೆ. [ಬಿಡಿಎಯಲ್ಲಿ 3000 ಕೋಟಿ ಠೇವಣಿ ಹಗರಣ!]

ಎಲ್ಲೆಲ್ಲಿ ಸ್ಕೈ ವಾಕ್ ನಿರ್ಮಾಣ : ಕಲ್ಯಾಣ ನಗರ (ಕಮ್ಮನಹಳ್ಳಿ ಜಂಕ್ಷನ್), ಬಾಬುಸಾಬ್‌ ಪಾಳ್ಯ, ಕೃಷ್ಣರಾಜಪುರಂ (ಸಂತೆ ಮೈದಾನ ಬಳಿ), ರಾಮಮೂರ್ತಿನಗರ, ಕಸ್ತೂರಿ ನಗರ, ದೇವಿನಗರ ಕ್ರಾಸ್, ಹೆಬ್ಬಾಳ ಬಳಿ ಯೋಗೇಶ್ ನಗರ ಕ್ರಾಸ್, ಲುಂಬಿನಿ ಗಾರ್ಡ್‌ನ್, ಮಾನ್ಯತಾ ಟೆಕ್ ಪಾರ್ಕ್, ಎಚ್‌ಬಿಆರ್ ಬಡಾವಣೆ (ಅಂಬೇಡ್ಕರ್ ಮೈದಾನ ಬಳಿ).

ಬಾಣಸವಾಡಿ ಕೆಳಸೇತುವೆ, ವಿಜಯಾ ಬ್ಯಾಂಕ್ ಕಾಲೋನಿ, ದೇವರಬೀಸನಹಳ್ಳಿ (ಇಕೋಸ್ಪೇಸ್ ಮುಂಭಾಗ),
ಇಬ್ಬಲೂರು ಜಂಕ್ಷನ್, ಮಾರತ್‌ಹಳ್ಳಿ (ಇನ್ನೋವೇಟಿವ್ ಮಲ್ಟಿಪೆಕ್ಸ್ ಬಳಿ), ಕಾಡುಬೀಸನಹಳ್ಳಿ (ನ್ಯೂ ಹೊರೈಜನ್ ಕಾಲೇಜ್ ಬಳಿ), ಮಾರತ್‌ಹಳ್ಳಿ (ಕಲಾ ಮಂದಿರ ಬಳಿ), ಎಚ್‌ಎಸ್‌ಆರ್ ಲೇಔಟ್ (ಸ್ವಾತಿ ರೆಸ್ಟೋರೆಂಟ್ ಬಳಿ).

ಸೆಂಟ್ರಲ್ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣ, ಬಿಇಎಲ್ ಕೆಳಸೇತುವೆ, ಕಂಠೀರವ ಸ್ಟುಡಿಯೋ ಜಂಕ್ಷನ್, ನಾಗರಬಾವಿ 1ನೇ ಹಂತ (ಐಟಿಐ ಬಡಾವಣೆ), ನಾಗರಬಾವಿ 2ನೇ ಹಂತ(ರವಿ ಜಿಮ್ ಬಳಿ) ಮತ್ತು ಸುಮನಹಳ್ಳಿ.

English summary
The Bangalore Development Authority (BDA) plan to build a 25 sky-walk in city. Project will be completed within 8 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X