ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೈರಸಂದ್ರ ಕೆರೆ ಬಾಗ್ಮನೆ ಒತ್ತುವರಿ ಸರಕಾರದ ವಶಕ್ಕೆ

By Srinath
|
Google Oneindia Kannada News

Bangalore DC Prakash acquires Bagmane Byrasandra tank encroachment land
ಬೆಂಗಳೂರು, ಸೆಪ್ಟೆಂಬರ್ 28: ಕಗ್ಗದಾಸಪುರ- ಭೈರಸಂದ್ರ ಕೆರೆ ಭಾಗದಲ್ಲಿ ಒತ್ತುವರಿಯಾಗಿದ್ದ 4 ಎಕರೆ ಜಮೀನನ ಪೈಕಿ 3 ಎಕರೆಯನ್ನು ಇಂದು ಬೆಳಗ್ಗೆ ಮತ್ತೆ ಸರಕಾರದ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ ಸುಮಾರು 20 ಕೋಟಿ ರೂ. ಎನ್ನಲಾಗಿದೆ.

ನ್ಯಾಯಾಲಯದ ಆದೇಶದಂತೆ ನಗರದ ಜಿಲ್ಲಾಧಿಕಾರಿ ಪ್ರಕಾಶ್ ಅವರು ಶನಿವಾರ ಬೆಳಗ್ಗೆಯಿಂದ ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಮೂರು ಎಕರೆಯ ಪೈಕಿ ಬಾಗ್ಮನೆ ಡೆವಲಪರ್ಸ್ ಸಂಸ್ಥೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ 9 ಗುಂಟೆ ಜಮೀನನ್ನು ಸಹ ತೆರವುಗೊಳಿಸಲಾಗಿದೆ.

ಆದರೆ ಇನ್ನೂ 1 ಎಕರೆ ಜಮೀನು ಒತ್ತುವರಿಯಾಗಿದ್ದು, ಅದರ ತೆರವು ಕಾರ್ಯ ನಡೆಯಬೇಕಿದೆ. ಆದರೆ ನ್ಯಾಯಾಲಯದಿಂದ ಆ ಒಂದು ಎಕರೆ ಜಮೀನಿನ ತೆರವಿಗೆ ತಡಯಾಜ್ಞೆ ತರಲಾಗಿದೆ.

ಇದರೊಂದಿಗೆ ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಹತ್ತಿರದ ಸಂಬಂಧಿ ಮಾಲೀಕತ್ವದ ವಿವಾದಿತ ಬಾಗ್ಮನೆ ಜಾಗವನ್ನು ಕೊನೆಗೂ ತೆರವುಗೊಳಿಸಿದಂತಾಗಿದೆ.

ಶನಿವಾರ ಬೆಳಗ್ಗೆ ಭೈರಸಂದ್ರ ಕೆರೆಯತ್ತ ತೆರಳಿದ ಜಿಲ್ಲಾಡಳಿತ ಜೆಸಿಬಿ ಯಂತ್ರಗಳಿಂದ ಒತ್ತುವರಿಯನ್ನು ತೆರವುಗೊಳಿಸಿತು. ಈ ಜಾಗದಲ್ಲಿ ಅಪಾರ್ಟ್ ಮೆಂಟ್ ಗಳು, ದೇವಸ್ಥಾನ, ಮನೆಗಳು, ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದವರು ಜಿಲ್ಲಾಡಳಿತ ಮೊದಲೇ ನೋಟಿಸ್ ನೀಡಿದ್ದರಿಂದ ಯಾವುದೇ ಪ್ರತಿರೋಧ ತೋರದೆ ತೆರವು ಕಾರ್ಯಾಚರಣೆಗೆ ಶಾಂತಯುತವಾಗಿ ಸಹಕರಿಸಿದರು.

English summary
Bangalore District Commissioner Prakash acquires 3 acres of land encroached at Bagmane Byrasandra tank today morning in a swift operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X