ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಕ್ಯಾಬ್ ಬಳಕೆದಾರರಿಗಾಗಿ ಒಂದು ಸಮೀಕ್ಷೆ

By Prasad
|
Google Oneindia Kannada News

ಬೆಂಗಳೂರು, ಮೇ 5 : ನೀವು ಪ್ರತಿದಿನ ಮನೆಯಿಂದ ಕಚೇರಿಗೆ, ಕಚೇರಿಯ ಕೆಲಸಕ್ಕಾಗಿ ವಿವಿಧ ಸ್ಥಳಗಳಿಗೆ, ಸ್ವಂತ ಕೆಲಸಕ್ಕಾಗಿ ಅಡ್ಡಾಡಲು ಎಂಥ ವಾಹನವನ್ನು ಉಪಯೋಗಿಸುತ್ತೀರಿ? ಸಾರ್ವಜನಿಕ ಸಾರಿಗೆ ಸೇವೆಯನ್ನಾ? ಸ್ವಂತ ವಾಹನವನ್ನಾ? ಅಥವಾ ಜಂಜಾಟವೇ ಬೇಡವೆಂದು ಕ್ಯಾಬ್ ಸೇವೆಯನ್ನಾ?

ಬೆಂಗಳೂರಿನಲ್ಲಿ ವಾಹನ ಚಲಾಯಿಸುವುದು ಎಷ್ಟು ಕಷ್ಟದ ಕೆಲಸವೆಂದು ಎಲ್ಲರಿಗೂ ತಿಳಿದ ವಿಚಾರ. ಇರುವೆ ಸಾಲಿನಂತಿರುವ ವಾಹನ ದಟ್ಟಣೆಯ ನಡುವೆ ವಾಹನವನ್ನು ಪಾರು ಮಾಡಿಕೊಂಡು ಮನೆ ಅಥವಾ ಕಚೇರಿ ಅಥವಾ ಗಮ್ಯವನ್ನು ತಲುಪಬೇಕೆಂದರೆ ಸುಸ್ತು ಹೊಡೆದುಹೋಗಿರುತ್ತೇವೆ. ಹೀಗಾಗಿ, ಉಳ್ಳವರು ಇಂದು ಕ್ಯಾಬ್ ಮೊರೆ ಹೋಗುತ್ತಿದ್ದಾರೆ.

ಕ್ಯಾಬ್ ಗಳು ಇಂದು ನಗರ ಸಂಚಾರದ ಅವಿಭಾಜ್ಯ ಅಂಗವಾಗಿವೆ. ವಿವಿಧ ಸ್ಥಳಗಳಿಗೆ ಜನರನ್ನು ತಲುಪಿಸುವ ಸೇವೆಯಲ್ಲಿ ನಿರತವಾಗಿವೆ. ನಾಗರಿಕರಿಗೆ ಅನುಕೂಲವಾಗಲೆಂದು ಸರ್ವ ರೀತಿಯ ಸೇವೆಗಳನ್ನು ಒದಗಿಸುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ಫೋನ್ ಮಾಡಿ ಇದ್ದಲ್ಲಿಯೇ ಕರೆಯಿಸಿಕೊಂಡು ಎಲ್ಲೆಂದರಲ್ಲಿ ಸಂಚರಿಸುವ ಸೌಲಭ್ಯವಿರುತ್ತದೆ. [ಕ್ಯಾಬ್ ಬಳಕೆದಾರರಾಗಿದ್ದರೆ ಇಲ್ಲಿ ಕ್ಲಿಕ್ಕಿಸಿ]

Bangalore cab users participate in this survey

ನಿಮ್ಮ ಅನುಕೂಲತೆಗೆಂದು ಖಾಸಗಿ ವಾಹನದ ಬದಲು ಕ್ಯಾಬನ್ನು, ಪ್ರತಿನಿತ್ಯ ಅಲ್ಲದಿದ್ದರೂ ಆಗಾಗ ಖಂಡಿತ ಬಳಸುತ್ತಿರುತ್ತೀರಿ. ಕ್ಯಾಬ್ ಸವಾರಿ ಆಟೋಗಿಂತ ಸ್ವಲ್ಪ ದುಬಾರಿ ಅನಿಸಿದರೂ, ಬಸ್ಸುಗಳಲ್ಲಿ ಸಂಚರಿಸುವ ಕಿರಿಕಿರಿಗಳಿರುವುದಿಲ್ಲ, ವಾಹನ ದಟ್ಟಣೆಯ ನಡುವೆ ಖುದ್ದಾಗಿ ನಾವೇ ವಾಹನ ಓಡಿಸುವ ಪಿರಿಪಿರಿಯಿರುವುದಿಲ್ಲ.

ಪ್ರತಿನಿತ್ಯ ಅಥವಾ ಆಗಾಗ ಕ್ಯಾಬ್ ಸೇವೆಯನ್ನು ಬಳಸುತ್ತಿರುವವರ ಮನದಲ್ಲೇನಿದೆ, ಅವರಿಗೆ ಇನ್ನೂ ಎಂಥ ಉತ್ತಮ ಸೇವೆಯನ್ನು ನೀಡಬಹುದು, ಬಳಕೆದಾರರಿಂದ ಇನ್ನೂ ಯಾವ ಬಗೆಯ ಸೇವೆ ನಿರೀಕ್ಷಿಸಬಹುದು, ಯಾವ ರೀತಿಯ ಸುರಕ್ಷತೆಯನ್ನು ಮಹಿಳೆಯರಿಗೆ ಒದಗಿಸಬಹುದು ಎಂದು ತಿಳಿಯುವ ನಿಟ್ಟಿನಲ್ಲಿ ಒಂದು ಸಮೀಕ್ಷೆಯನ್ನು ನೋವಿಯೆನ್ಸ್ ಕನ್ಸಲ್ಟಿಂಗ್ ಸಂಸ್ಥೆ ನಡೆಸುತ್ತಿದೆ.

ಇದರಲ್ಲಿ ಕೇವಲ ಹದಿನೈದು ಪ್ರಶ್ನೆಗಳಿದ್ದು, ಮೂರೇಮೂರು ನಿಮಿಷದಲ್ಲಿ ಇಡೀ ಸಮೀಕ್ಷೆಯನ್ನೂ ಪೂರ್ತಿ ಮಾಡಬಹುದಾಗಿದೆ. ಕ್ಯಾಬ್ ಬಳಕೆದಾರರಾಗಿದ್ದರೆ ನಿಮ್ಮ ಅಭಿಮತವನ್ನು ಅಭಿವ್ಯಕ್ತಪಡಿಸಿ. ಕ್ಯಾಬ್ ಬಳಕೆದಾರರಲ್ಲದಿದ್ದರೂ ಈ ಸಮೀಕ್ಷೆಯಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.

ಇದರಲ್ಲಿ ನೀವು ನೀಡುವ ಎಲ್ಲ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿಡಲಾಗುವುದು ಮತ್ತು ಸಮೀಕ್ಷೆಯನ್ನು ಪೂರ್ತಿಗೊಳಿಸಿದ ಕ್ಯಾಬ್ ಬಳಕೆದಾರರಿಗೆ 100 ರು. ಕೂಪನ್ ಕೂಡ ನೀಡಲಾಗುವುದು. ಇಲ್ಲಿ ಕ್ಲಿಕ್ಕಿಸಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿರಿ.

English summary
Are you regular cab user in Bangalore? Are you happy with the service provided by the service providers? Do you have any suggestion to improve the service? If you are one please participate in the survey conducted by www.knowience.com.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X