ವಿಶ್ವಾಸಾರ್ಹ ಡಿಜಿಟಲ್ ವ್ಯವಹಾರದಲ್ಲಿ ಬೆಂಗಳೂರು ನಂ.1

Posted By:
Subscribe to Oneindia Kannada

ನವೆಂಬರ್ ೦9, ನವದೆಹಲಿ : ಬೆಂಗಳೂರಿಗರಿಗೆ ಇದು ಶುಭ ಸುದ್ದಿ, ಬೆಂಗಳೂರು ಡಿಜಿಟಲ್ ವ್ಯವಹಾರದಲ್ಲಿ ವಿಶ್ವಾಸವಿಟ್ಟಿರುವ ಬೆಂಗಳೂರು ಪ್ರಪಂಚಕ್ಕೇ ಮಾದರಿಯಾಗಿದೆ. ವಿಶ್ವಾಸಾರ್ಹ ಡಿಜಿಟಲ್ ವ್ಯವಹಾರ ಮಾಡುವ ನಗರಗಳ ಪಟ್ಟಯಲ್ಲಿ ಇಡೀ ವಿಶ್ವದಲ್ಲಿ ಬೆಂಗಳೂರೇ ಈಗ ನಂ. 1.

ಎಕಾನಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಎಂಬ ಸಂಸ್ಥೆ ಮಾಡಿರುವ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದ್ದು, ಬೆಂಗಳೂರು ಅಮೆರಿಕಾದ ಸ್ಯಾನ್ ಪ್ರಾನ್ ಸಿಸ್ಕೋವನ್ನೂ ಹಿಂದೆ ಹಾಕಿದೆ. ಇಷ್ಟೆ ಅಲ್ಲ ಈ ಪಟ್ಟಿಯಲ್ಲಿ ಅಗ್ರ ನಾಲ್ಕು ನಗರಗಳಲ್ಲಿ ಭಾರತದ ಮೂರು ನಗರಗಳು ಗುರುತಿಸಿಕೊಂಡಿವೆ. ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿ ಮುಂಬಯಿ ಹಾಗೂ ದಿಲ್ಲಿ ನಗರಗಳು ಇವೆ.

Bangalore beats San Francisco in confidence to go digital

ಮೂಲಭೂತ ಸೌಕರ್ಯ ಕೊರತೆ, ಮಾಲಿನ್ಯ, ಬಡತನ ಹಾಗೂ ಇತರೆ ತೊಂದರೆಗಳಿಂದ ಭಾರತೀಯ ನಗರಗಳು ಹೆಚ್ಚು ಬಳಲುತ್ತಿರಬಹುದು. ಆದರೆ ಡಿಟಿಟಲ್ ರೂಪಾಂತರದ ವಾತಾವರಣದ ವಿಷಯಕ್ಕೆ ಬಂದಾಗ, ಭಾರತದ ನಗರಗಳು ವಿಶ್ವದ ಇತರ ನಗರಗಳಿಗಿಂತಲೂ ಬಹುಬೇಗ ಡಿಜಿಟಲ್ ವ್ಯವಹಾರಗಳಿಗೆ ಒಗ್ಗಿಕೊಳ್ಳುತ್ತಿವೆ ಮತ್ತು ವಿಶ್ವಾಸಾರ್ಹವಾಗಿ ಡಿಜಿಟಲ್ ವ್ಯವಹಾರದಲ್ಲಿ ತೊಡಗಿವೆ ಎಂದು ಸಮೀಕ್ಷೆ ನಡೆಸಿರುವ ಸಂಸ್ಥೆ ಹೇಳಿದೆ.

ಡಿಜಿಟಲ್ ಮಾದರಿಯಲ್ಲಿ ವಿಶ್ವಾಸಾರ್ಹ ವ್ಯವಹಾರ ಮಾಡುವ ಅಗ್ರ 10ರ ನಗರಗಳ ಪಟ್ಟಿಯಲ್ಲಿ ಏಳು ಏಷ್ಯಾದಿಂದಲೇ ಗುರುತಿಸಿಕೊಂಡಿರುವುದು ವಿಶೇಷ. ಸ್ಯಾನ್‌ ಫ್ರಾನ್ಸಿಸ್ಕೊ ಎರಡನೇ ಸ್ಥಾನದಲ್ಲಿದ್ದರೆ ಬೀಜಿಂಗ್ ಐದರಲ್ಲಿದೆ, ಲಂಡನ್ ನಗರ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the race to go digital, businesses judge Bangalore the best host among 45 cities worldwide. India's cities may suffer more than most from infrastructure deficits, pollution, poverty and other ills, but when it comes to the environment for digital transformation, their executives are remarkably optimistic analysts led by Denis McCauley wrote in the report.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ