ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎಯಿಂದ ನಿವೇಶನ ಹಂಚಿಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ಸಾಕಷ್ಟು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕೆಂಪೇಗೌಡ ಬಡಾವಣೆಯ ನಿವೇಶನ ಹಂಚಿಕೆಗೆ ಜೀವ ಬಂದಿದೆ.

ಮುಂದಿನ ವಿಧಾನಸಭೆ ಚುನಾವಣೆಗೆ ಕೇವಲ ಆರು ತಿಂಗಳು ಬಾಕಿ ಇರುವಾಗಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹೊಸ ವರ್ಷ ಅಂಗವಾಗಿ 8 ಸಾವಿರ ನಿವೇಶನ ಹಂಚಿಕೆಗೆ ಮುಂದಾಗಿದೆ.

ಈಗಾಗಲೇ ಬಿಡಿಎ ಮೊದಲ ಹಂತದಲ್ಲಿ ೫ ಸಾವಿರ ನಿವೇಶನವನ್ನು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಿದ್ದು ೨೨೦೦ ನಿವೇಶನಗಳನ್ನು ಯೋಜನೆಗಾಗಿ ಮುಂಬರುವ ಜನವರಿಯಲ್ಲಿ ಮತ್ತೊಮ್ಮೆ ಅರ್ಜಿಗಳನ್ನು ಆಹ್ವಾನಿಸಲಾಗವುದು.

Bangalore Authority will offer 8 thousand plots in Kempegowda layout

ಆ ವೇಳೆ 5 ಸಾವಿರ ನಿವೇಶನಗಳನ್ನು ಆಸಕ್ತರಿಗೆ ನೀಡಲು ಆಲೋಚಿಸಲಾಗಿತ್ತು ಈ ಪೈಕಿ 3 ಸಾವಿರ ನಿವೇಶನಗಳನ್ನು ಭೂಮಿ ಕಳೆದುಕೊಂಡವರಿಗೆ ನೀಡಲಾಗುವುದು ಎಂದು ಬಿಡಿಎ ಆಯುಕ್ತ ರಾಕೇಶ್ ಸಿಂಗ್ ತಿಳಿಸಿದರು.

ಅರ್ಕಾವತಿ ಬಡಾವಣೆ ಯೋಜನೆಯ ಡಿನೋಟಿಫಿಕೇಷನ್ ವೇಳೆ ಭೂಮಿ ಕಳೆದುಕೊಂಡವರಿಗೂ ಕೂಡ ಕೆಂಪೇಗೌಡ ಬಡಾವಣೆಗೆ ಅರ್ಜಿ ಸಲ್ಲಿಸಬಹುದು. ಅವರ ಅರ್ಜಿಗಳನ್ನೂ ಕೂಡ ಪರಿಗಣಿಸಲಾಗುತ್ತದೆ. 5 ಸಾವಿರ ಬಿಡಿಎ ನಿವೇಶನಗಳ ಪೈಕಿ ಅರ್ಧದಷ್ಟು ಜೆನರಲ್ ಕೆಟಗರಿಯಲ್ಲಿ ನೀಡಲಾಗುವುದು ಎಂದು ಹೇಳಿದರು.

ಅರ್ಕಾವತಿ ಬಡಾವಣೆಗಾಗಿ ಭೂಮಿ ಕಳೆದುಕೊಂಡ ಅನೇಕರು ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆ ವೇಳೆ ಅರ್ಜಿ ಸಲ್ಲಿಸಿದ್ದರು. ಕೆಲವರಿಗೆ ಮಾತ್ರ ನಿವೇಶನಗಳು ಸಿಕ್ಕಿತ್ತು. ಈ ಬಾರಿ ಅರ್ಜಿ ಸಲ್ಲಿಸುವರ ಸಂಖ್ಯೆ ಹೆಚ್ಚಾಗಲಿದೆ ಎಂದು ಅರ್ಕಾವತಿಗಾಗಿ ಭೂಮಿ ಕಳೆದುಕೊಂಡವರ ವೇದಿಕೆ ಅಭಿಪ್ರಾಯ ಪಟ್ಟಿದೆ.

English summary
Bangalore Authority will offer 8 thousand plots in Kempegowda layout. BDA had alloted 5thousand sites at kempegowda layout and 2,200 sites for formers and those who lost land to projects and other developments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X