ಬಿಜೆಪಿ ವಕ್ತಾರ ರಮೇಶ್ ಗೆ ಬೆದರಿಕೆ ಹಾಕಿದ್ದ ವ್ಯಕ್ತಿ ಬಂಧನ

Posted By:
Subscribe to Oneindia Kannada

ಬೆಂಗಳೂರು, ಮೇ 14: ಯಡಿಯೂರು ವಾರ್ಡಿನ ಮಾಜಿ ಕಾರ್ಪೊರೇಟರ್, ಬಿಜೆಪಿ ವಕ್ತಾರ ಎನ್.ಆರ್ ರಮೇಶ್ ಅವರಿಗೆ ಫೇಸ್ ಬುಕ್ ನಲ್ಲಿ ಕೊಲೆ ಬೆದರಿಕೆ ಒಡ್ಡಿದ್ದ ಹರೀಶ್ ತಲಹರಿ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹರೀಶ್‌ ತಲಹರಿ ಎಂಬುವರು ಫೇಸ್‌ಬುಕ್‌ನಲ್ಲಿರುವ ಪೋಸ್ಟ್ ಪ್ರಕಾರ'ಲೋ ರಮೇಶ್‌, ಪಕ್ಕಾ ನೀನು ಮರ್ಡರ್ ಆಗ್ತಿಯಾ. ಕಾಂಗ್ರೆಸ್‌ ಅವರನ್ನೇ ಟಾರ್ಗೆಟ್‌ ಮಾಡ್ತಿದ್ದಿಯಾ. ಹುಷಾರ್‌. ಕೆಲಸಾ ಕೊಟ್ರೆ. ನೀನು ಹುಡುಕಿದರೂ ಸಿಗಲ್ಲ' ಎಂದು ಬೆದರಿಕೆ ಕಾಮೆಂಟ್ ಇದೆ.

Banashankari Police arrests man who threatened BJP spokesperson NR Ramesh

ಬನ್ನೇರುಘಟ್ಟ ರಸ್ತೆಯಲ್ಲಿರುವ 350 ಕೋಟಿ ರು ಮೌಲ್ಯದ 4.20 ಎಕರೆ ಸರ್ಕಾರಿ ಸ್ವತ್ತನ್ನು ಸಚಿವ ಎಂ ಕೃಷ್ಣಪ್ಪ ಅವರು ಕಬಳಿಸಿ, ಖಾಸಗಿ ಸಂಸ್ಥೆಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಎನ್ ಆರ್ ರಮೇಶ್ ಅವರು ಆಗ್ರಹಿಸಿದ್ದರು.[ಬಿಜೆಪಿ ವಕ್ತಾರ ರಮೇಶ್ ಗೆ ಫೇಸ್ ಬುಕ್ ಮೂಲಕ ಜೀವ ಬೆದರಿಕೆ]

ಎಂ ಕೃಷ್ಣಪ್ಪ ಅವರ ಅನುಯಾಯಿ ಎನ್ನಲಾದ ಹರೀಶ್ ತಲಹರಿ ಎಂಬ ವ್ಯಕ್ತಿಯನ್ನು ಭಾನುವಾರದಂದು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ನಾನು ಕುಡಿದ ಮತ್ತಿನಲ್ಲಿ ಈ ರೀತಿ ಕಾಮೆಂಟ್ ಮಾಡಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Banashanakri police arrested a man who threaten former BBMP corporator (Yediyur ward) and BJP spokesperson NR Ramesh on Facebook. R Ramesh who made allegations against minister M Krishnappa involving in land scam.
Please Wait while comments are loading...