ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ನಂದಿನಿ ಬೂತ್‌ಗಳಲ್ಲಿ ಸಿಗಲಿದೆ ದೇಸಿ ಹಸುವಿನ ಹಾಲು

|
Google Oneindia Kannada News

ಬೆಂಗಳೂರು, ನವೆಂಬರ್ 09 : ನಂದಿನಿ ಹಾಲಿಗಿಂತ ನಾಟಿ ಹಸುವಿನ ಹಾಲು ಚೆನ್ನಾಗಿರುತ್ತದೆ ಎಂದು ಜನರು ಹೇಳುವುದುಂಟು. ಇನ್ನು ಮುಂದೆ ನಂದಿನಿ ಮಳಿಗೆಗಳಲ್ಲಿ ದೇಸಿ ತಳಿ ಹಸುವಿನ (ನಾಟಿ) ಹಾಲನ್ನು ಮಾರಾಟ ಮಾಡಲಾಗುತ್ತದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬಮುಲ್) ನಂದಿನಿ ಬೂತ್‌ಗಳಲ್ಲಿ ದೇಸಿ ಹಸುವಿನ ಹಾಲು ಮಾರಾಟ ಮಾಡಲಿದೆ. ಡಿಸೆಂಬರ್‌ನಲ್ಲಿ ದೇಸಿ ಹಸುಗಳ ಹಾಲು ಜನರ ಕೈ ಸೇರುವ ನಿರೀಕ್ಷೆ ಇದೆ.

ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಹಾಲು, ಮೊಸರು ನೀಡುತ್ತಿದೆ ಬಮುಲ್ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಹಾಲು, ಮೊಸರು ನೀಡುತ್ತಿದೆ ಬಮುಲ್

ಪ್ರಾಯೋಗಿಕವಾಗಿ ಬೆಂಗಳೂರು ನಗರದ ಕೆಲವು ನಂದಿನಿ ಬೂತ್‌ಗಳಲ್ಲು ದೇಸಿ ಹಸುವಿನ ಹಾಲು ಮಾರಾಟ ಮಾಡಲಾಗುತ್ತದೆ. ನಂತರ ಬೇರೆ ಬೂತ್‌ಗಳಿಗೆ ವಿಸ್ತರಣೆ ಮಾಡಲು ಬಮುಲ್ ಚಿಂತನೆ ನಡೆಸಿದೆ.

Nandini Parlour

ದೇಸಿ ತಳಿಯ ಹಸುಗಳ ಅಭಿವೃದ್ಧಿಗೆ ಕೆಎಂಎಫ್ ಮತ್ತು ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದವು. ರಾಮನಗರ ಜಿಲ್ಲೆಯ ಕನಕಪುರ ಮತ್ತು ಮಾಗಡಿಯಲ್ಲಿ 150 ಹಳ್ಳಿಗಳಲ್ಲಿ ದೇಸಿ ತಳಿಯ ಹಸುಗಳ ಅಭಿವೃದ್ಧಿಗೆ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು.

ಬೆಂಗಳೂರಲ್ಲಿ ನಂದಿನಿ ಮಳಿಗೆಗಳಲ್ಲಿ ಸಿಗಲಿದೆ ಸಿರಿಧಾನ್ಯಬೆಂಗಳೂರಲ್ಲಿ ನಂದಿನಿ ಮಳಿಗೆಗಳಲ್ಲಿ ಸಿಗಲಿದೆ ಸಿರಿಧಾನ್ಯ

ಈ ಯೋಜನೆಯ ಫಲಾನುಭವಿ ರೈತರು ಸಾಕಿರುವ ದೇಸಿ ತಳಿಗಳಾದ ಗಿರ್, ಸಾಹಿವಾಲ್, ಹಳ್ಳಿಕಾರ್, ಅಮೃತ್ ಮಹಲ್ ತಳಿಯ ಹಸುಗಳ ಹಾಲನ್ನು ಬಮುಲ್ ಖರೀದಿ ಮಾಡಲಿದ್ದು, ಅದನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಲಿದೆ.

ಬೆಂಗಳೂರಲ್ಲಿ ಪ್ರತಿ ಕಿ.ಮೀ ಒಂದರಂತೆ ನಂದಿನಿ ಪಾರ್ಲರ್ಬೆಂಗಳೂರಲ್ಲಿ ಪ್ರತಿ ಕಿ.ಮೀ ಒಂದರಂತೆ ನಂದಿನಿ ಪಾರ್ಲರ್

ಮೊದಲ ಹಂತದಲ್ಲಿ 1000 ಲೀಟರ್ ಹಾಲನ್ನು ಖರೀದಿ ಮಾಡಿ ಬೆಂಗಳೂರು ನಗರದ ಸದಾಶಿವನಗೆ, ಮೇಖ್ರಿ ಸರ್ಕಲ್, ಬನಶಂಕರಿ, ಯಶವಂತಪುರ, ಹಲಸೂರು ಪ್ರದೇಶದ ನಂದಿನಿ ಬೂತ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಬೇಡಿಕೆಯನ್ನು ಪರಿಗಣಿಸಿ ಮುಂದಿನ ದಿನದಲ್ಲಿ ನಗರದ ಬೇರೆ ಬಡಾವಣೆಯ ನಂದಿನಿ ಬೂತ್‌ನಲ್ಲಿ ನಾಟಿ ಹಸುಗಳ ಹಾಲು ಪೂರೈಕೆ ಮಾಡುವುದಾಗಿ ಬಮೂಲ್ ಹೇಳಿದೆ.

English summary
The Bengaluru Urban, Rural & Ramanagara District Co-Operative Milk Producers Society's Union Ltd. (BAMUL) will sale native cow milk in Nandini Parlour in the Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X