ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಲು ಹೆಲ್ಮೆಟ್‌ ಥಾನ್!

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಜನವರಿ 20 : ವಾಕಥಾನ್, ಮ್ಯಾರಾಥಾನ್‌ನಂತೆ ಹೆಲ್ಮೆಟ್‌ ಥಾನ್ ಎಂಬ ಆಂದೋಲನ ಆರಂಭವಾಗಿದೆ. ಬೆಂಗಳೂರಿನ ಬಾಲ್ಡ್ವಿನ್ ಮೆಥಡಿಸ್ಟ್ ಕಾಲೇಜು ಈ ಆಂದೋಲನ ಆರಂಭಿಸಿದೆ. ದ್ವಿಚಕ್ರವಾಹನ ಸವಾರ ಹಾಗೂ ಹಿಂಬದಿ ಸವಾರ ಹೆಲ್ಮೆಟ್ ತೊಡದೆ ಕಾಲೇಜು ಆವರಣ ಪ್ರವೇಶಿಸಿದರೆ ಅವರನ್ನು ತಡೆಯುವುದು ಹಾಗೂ ಹೆಲ್ಮೆಟ್ ಧರಿಸುವ ಕುರಿತು ಜಾಗೃತಿ ಮೂಡಿಸುವುದು ಇದರ ಉದ್ದೇಶ.

ಕಾಲೇಜು ಆವರಣದಲ್ಲಿ ಹೆಲ್ಮೆಟ್ ಧರಿಸಿದ್ದಾರೆಯೆ? ಎಂದು ಪರಿಶೀಲಿಸುವುದು ಏಕೆ ಎಂಬ ಪ್ರಶ್ನೆ ಮೂಡಬಹುದು. ಆದರೆ, ನಗರದ ಬಹುತೇಕ ಕಾಲೇಜುಗಳ ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಹೆಲ್ಮೆಟ್ ತೊಡದೆ ಪ್ರವೇಶಿಸುತ್ತಾರೆ. ಮತ್ತೆ ಕೆಲವರು ರಸ್ತೆಯಲ್ಲಿ ಪೊಲೀಸರು ಇಲ್ಲ ಎಂದ ಕೂಡಲೇ ಹೆಲ್ಮೆಟ್ ತೆಗೆದು ಬೈಕ್ ಓಡಿಸುತ್ತಾರೆ. [ಹೆಲ್ಮೆಟ್ ಇಲ್ಲದೆ ಸವಾರಿ, 100 ರು. ದಂಡ ಕಟ್ಟಿ]

helmet

'ವಿದ್ಯಾರ್ಥಿಗಳು ಬೈಕ್ ಓಡಿಸುವಾಗ ಹೆಲ್ಮೆಟ್ ತೊಡುವಂತೆ ಜಾಗೃತಿ ಮೂಡಿಸಲು ಹೆಲ್ಮೆಟ್ಥಾನ್ ಆಯೋಜಿಸಲಾಗಿದೆ. ಇದರ ಪ್ರಕಾರ ಹಿಂಬದಿ ಹಾಗೂ ಮುಂಬದಿ ಸವಾರರು ಹೆಲ್ಮೆಟ್ ತೊಟ್ಟಿದ್ದರೆ ಮಾತ್ರ ಕಾಲೇಜು ಆವರಣ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ' ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲರಾದ ಜೋಶುವಾ ಸ್ಯಾಮುಯಲ್. [ನೀವು ಧರಿಸುವ ಹೆಲ್ಮೆಟ್ ಹೀಗಿರಬೇಕು]

college

ಈ ವಿನೂತನ ಆಂದೋಲನವನ್ನು ಕಾಲೇಜು ಆವರಣಕ್ಕೆ ಸೀಮಿತಗೊಳಿಸದೇ ಕಾಲೇಜು ಆವರಣದ ಹೊರಗೂ ಬೈಕ್ ಜಾಥಾ ನಡೆಸುವ ಮೂಲಕ ಹೆಲ್ಮೆಟ್ ಬಳಕೆ ಕುರಿತು ಜಾಗೃತಿ ಮೂಡಿಸಲಾಯಿತು. ರಿಚ್ಮಂಡ್ ಸರ್ಕಲ್ ಮಾರ್ಗವಾಗಿ ಹೊರಟ ಜಾಥಾ ಡಬಲ್ ರೋಡ್, ನಂಜಪ್ಪ ಸರ್ಕಲ್, ಲಾಂಗ್ಫೋರ್ಡ್ ರಸ್ತೆ ಸಿಗ್ನಲ್ ಹಾದು ಅಂತಿಮವಾಗಿ ಬಾಲ್ಡ್ವಿನ್ ಕಾಲೇಜು ತಲುಪಿತು. [ಅಷ್ಟಕ್ಕೂ ಸವಾರರು ಹೆಲ್ಮೆಟ್ ಯಾಕೆ ಧರಿಸಬೇಕು?]

ಅಂಕಿ ಅಂಶಗಳು ಹೇಳುವಂತೆ ಚೆನ್ನೈ ನಗರದಲ್ಲಿ 2013ರ ಜನವರಿ 1 ರಿಂದ 2015ರ ಜೂನ್ 28ರ ತನಕ ಒಟ್ಟು 1,453 ಬೈಕ್ ಸವಾರರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಪೈಕಿ 1,434 ಮಂದಿ ಹೆಲ್ಮೆಟ್ ಹಾಕಿರಲಿಲ್ಲ. ಬೆಂಗಳೂರಿನ ಅಂಕಿ-ಅಂಶವು ಹೆಚ್ಚು ಕಡಿಮೆ ಇದೇ ರೀತಿ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In support of helmet for pillion rider rule, Bengaluru based Baldwin Methodist College has decided not to allow any biker to enter the college premises if pillion rider does not wear helmet. College also launched helmet awareness campaign.
Please Wait while comments are loading...