ಚಿಣ್ಣರಿಗಾಗಿ ಬಾಲಭವನದಲ್ಲಿ ಬೇಸಿಗೆ ಶಿಬಿರ

Posted By: Nayana
Subscribe to Oneindia Kannada

ಬೆಂಗಳೂರು ಏಪ್ರಿಲ್ 12: ಹಿಂದೆಲ್ಲಾ ಬೇಸಿಗೆ ರಜೆ ಅಂದ್ರೆ ಮಕ್ಕಳು ಅಜ್ಜಿ-ಅಜ್ಜನ ಮನೆ ಕಡೆ ಮುಖ ಮಾಡ್ತಿದ್ರು.. ಆದರೆ, ಬದಲಾದ ಕಾಲದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಹಾಗೆ ಇಲ್ಲೊಂದು ಶಿಬಿರದಲ್ಲಿ ವಿದ್ಯಾರ್ಥಿಗಳು ಕಲಿಕೆಯ ಜೊತೆ ವಿವಿಧ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಅಲ್ಲದೆ ಸ್ನೇಹಿತರೊಂದಿಗೆ ಮಸ್ತ್​ ಎಂಜಾಯ್​ ಮಾಡುತ್ತಾರೆ.ಶಾಲಾ ಕಲಿಕೆಯಲ್ಲಿ ಹೈರಾಣಾಗಿದ್ದ ಮಕ್ಕಳು, ಈಗ ಬೇಸಿಗೆಯಲ್ಲಿ ಕಲಿಕೆಯೊಂದಿಗೆ ಬೇಸಿಗೆಯ ಮಜಾ ಅನುಭವಿಸ್ತಿದ್ದಾರೆ. ಸಂಗೀತ, ಯೋಗ, ಕರಾಟೆ, ಕರಕುಶಲಕಲೆ, ಜೇಡಿಮಣ್ಣಿನ ಕಲೆ, ತಬಲ, ಗಿಟಾರ್​, ನೃತ್ಯ, ರಂಗತರಬೇತಿ ಒಳಗೊಂಡಂತೆ 8 ರಿಂದ 25 ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವ ಅವಕಾಶವನ್ನ ಕಬ್ಬನ್​ ಪಾರ್ಕ್​ನಲ್ಲಿರೋ ಬಾಲಭವನದಲ್ಲಿ ಕಲ್ಪಿಸಲಾಗಿದೆ. ಏಪ್ರಿಲ್​ 16 ರಿಂದ ಆರಂಭಗೊಂಡಿರುವ ಶಿಬಿರ ಮೇ 13 ರವರೆಗೆ ನಡೆಯಲಿದೆ.

ಈ ವಿಶೇಷ ಮಾದರಿಯ ಬೇಸಿಗೆ ಶಿಬಿರ ಬಾಲಭವನದ ಸ್ವಚ್ಚಂದ ಹಾಗೂ ಮಕ್ಕಳ ಸ್ನೇಹೀ ವಾತಾವರಣದಲ್ಲಿ ಆಯೋಜಿಸಲಾಗಿದ್ದು 5 ರಿಂದ 16 ವರ್ಷದ ಮಕ್ಕಳು ಇದರಲ್ಲಿ ಭಾಗವಹಿಸಬಹುದಾಗಿದೆ.

Bala bhavan organises summer camp for children

ಈ ಬೇಸಿಗೆ ಶಿಬಿರದಲ್ಲಿ ಕರಾಟೆ, ಯೋಗ, ಚಿತ್ರಕಲೆ, ಕರಕುಶ ಕಲೆ, ಜೇಡಿ ಮಣ್ಣಿನ ಕಲೆ, ಗಿಟಾರ್ ,ತಬಲ, ಕೀಬೋರ್ಡ್, ಸಮೂಹ ನೃತ್ಯ, ಸಮೂಹ ಗೀತೆ, ಜ್ಯೂವೆಲರಿ ಮೇಕಿಂಗ್, ಆರ್ಟ್ ವರ್ಕ್ ವಿತ್ ಮೆಹಂದಿ, ಕಸದಿಂದ ರಸ, ಯಕ್ಷಗಾನ, ಫರ್ ಡಾಲ್, ರೋಬೋಟಿಕ್ಸ್, ಎಂಬ್ರಾಯಿಡರಿ, ರಂಗ ತರಬೇತಿ, ಅಲ್ಯೂಮಿನಿಯಂ ಫಾಯಿಲ್ ವರ್ಕ್, ಮೆಟಲ್ ಎಂಬೋಸಿಂಗ್, ಬಾಟಿಕ್ - ಟೈ ಅಂಡ್ ಡೈ ಮತ್ತು ವಿಜ್ಞಾನ ಚಟುವಟಿಕೆಗಳು ಸೇರಿದಂತೆ ಹತ್ತು ಹಲವು ವಿಶೇಷ ಆಕರ್ಷಕ ಚಟುವಟಿಕೆಗಳನ್ನು ಈ ಬೇಸಿಗೇ ಶಿಬಿರದಲ್ಲಿ ಅಳವಡಿಸಿಕೊಂಡಿದ್ದೇವೆ ಎಂದು ಬಾಲ ಭವನದ ಕಾರ್ಯದರ್ಶಿ ಶ್ರೀಮತಿ ದಿವ್ಯಾ ನಾರಾಯಣಪ್ಪ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 080-22864189 ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bala bhavan society is organising summer camp for children from April 16 to may 13 at cubbon park, coals park at Rajajinagar and mini Balabhavan at Jayanagar. Age limit between 5 to 16 years can participate in the camp.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ