ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಪೀಕ್ ಅವರ್ ಗಳಲ್ಲಿ 4-5 ನಿಮಿಷಕ್ಕೊಂದು ಮೆಟ್ರೊ ರೈಲು

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 28: ಮೆಟ್ರೋ ರೈಲಲ್ಲಿ ಪ್ರಯಾಣಿಸುವವರಿಗೆ ಇದು ಖುಷಿಯ ವಿಚಾರ. ಇನ್ನು ಮುಂದೆ ಕೆಲವು ಮಾರ್ಗಗಳಲ್ಲಿ ಕೇವಲ 4-5 ನಿಮಿಷಕ್ಕೊಂದು ಮೆಟ್ರೋ ರೈಲು ಓಡಾಡಲಿದೆ.

ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಹಾಗೂ ಪೂರ್ವ-ಪಶ್ಚಿಮ ಮೆಟ್ರೋ ಮಾರ್ಗ (ಪರ್ಪಲ್ ಲೈನ್)ದಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಜನದಟ್ಟಣೆ ಇರುವ ಸಮಯದಲ್ಲಿ 4 ರಿಂದ 5 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚರಿಸಲಿದೆ. ಸೋಮವಾರದಿಂದಲೇ ಈ ಸಂಚಾರ ಆರಂಭವಾಗಿದ್ದು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಇನ್ನು ವಾರಾಂತ್ಯದಲ್ಲಿ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಪ್ರತಿ 6 ರಿಂದ 15 ನಿಮಿಷಕ್ಕೊಂದು ರೈಲು ಸಂಚಾರವಿರಲಿದೆ. ಜನದಟ್ಟಣೆ ಇಲ್ಲದ ಅವಧಿಯಲ್ಲಿ ಗರಿಷ್ಟ 15 ನಿಮಿಷದ ಒಳಗೆ ಒಂದು ರೈಲು ಓಡಾಡಲಿದೆ.

Baiyappanahalli to Mysuru Road: Metro train within 4-5 minutes in peak hours

ಸೋಮವಾರದಿಂದ-ಶುಕ್ರವಾರ

ಬೈಯಪ್ಪನಹಳ್ಳಿ ಕಡೆಗೆ

ಬೆಳಗ್ಗೆ 7.50ರಿಂದ 8.30ರವೆರಗೆ ಪ್ರತಿ 5 ನಿಮಿಷಕ್ಕೊಮ್ಮೆ, 8.30ರಿಂದ 9.10 ರವರೆಗೆ ಪ್ರತಿ 4 ನಿಮಿಷಕ್ಕೊಮ್ಮೆ, 9.10ರಿಂದ 9.30ರವರೆಗೆ 5 ನಿಮಿಷಕ್ಕೊಮ್ಮೆ, ಸಂಜೆ 5.18ರಿಂದ 5.28 ರವರೆಗೆ ಪ್ರತಿ 5 ನಿಮಿಷಕ್ಕೊಮ್ಮೆ, 5.28ರಿಂದ 6.12ರವರೆಗೆ ಪ್ರತಿ 4 ನಿಮಿಷಕ್ಕೊಮ್ಮೆ ಹಾಗೂ 6.12ರಿಂದ 6.32ರವರೆಗೆ ಪ್ರತಿ 5 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚರಿಸಲಿದೆ.

ಮೈಸೂರು ರಸ್ತೆ ಕಡೆಗೆ

ಬೆಳಗ್ಗೆ 8.30ರಿಂದ 9.10ರವರೆಗೆ ಪ್ರತಿ 5 ನಿಮಿಷಕ್ಕೊಮ್ಮೆ, 9.10ರಿಂದ 9.50ರವರೆಗೆ ಪ್ರತಿ 4 ನಿಮಿಷಕ್ಕೊಮ್ಮೆ, 9.50 ರಿಂದ 10.10 ರವರೆಗೆ ಪ್ರತಿ 5 ನಿಮಿಷಕ್ಕೊಮ್ಮೆ, ಸಂಜೆ 5.58 ರಿಂದ 6.08ರವರೆಗೆ ಪ್ರತಿ 5 ನಿಮಿಷಕ್ಕೊಮ್ಮೆ , 6.08ರಿಂದ 6.52ರ ವರೆಗೆ ಪ್ರತಿ 4 ನಿಮಿಷಕ್ಕೊಮ್ಮೆ ಹಾಗೂ 6.52ರಿಂದ 7.12ರವರೆಗೆ ಪ್ರತಿ 5 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಪ್ರಯಾಣಿಸಲಿದೆ.

2016 ನವೆಂಬರ್ ನಲ್ಲೂ ಇದೇ ರೀತಿ 4 ನಿಮಿಷಕ್ಕೊಮ್ಮೆ 'ನಮ್ಮ ಮೆಟ್ರೋ' ರೈಲ್ವೇ ಸೇವೆ ಆರಂಭಿಸಿತ್ತು. ಆದರೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರದ ಹಿನ್ನಲೆಯಲ್ಲಿ ಇದನ್ನು ನಿಲ್ಲಿಸಲಾಯಿತು. ಇತ್ತೀಚೆಗೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು 1.75-1.80 ಲಕ್ಷ ಪ್ರಯಾಣಿಕರು ಪ್ರತಿದಿನ ಮೆಟ್ರೊ ರೈಲಿಗೆ ಬರುತ್ತಿದ್ದಾರೆ. ಹೀಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಮತ್ತೆ ನಮ್ಮ ಮೆಟ್ರೊ ಈ ನಿರ್ಧಾರಕ್ಕೆ ಬಂದಿದೆ.

English summary
Trains were operated at a frequency of four to five minutes in the peak ours on Purple Line of Namma Metro, that is Baiyappanahalli to Mysuru Road as the number of commuters increased.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X