ಪರಿಸರ ಚರ್ಚೆಗೆ ನಾಂದಿ ಹಾಡಿದ ಸರ್ಕಾರದ ವಿಧೇಯಕ

Subscribe to Oneindia Kannada

ಬೆಂಗಳೂರು, ಜುಲೈ, 20: ಕರ್ನಾಟಕ ಸರ್ಕಾರ ಚರ್ಚೆಯನ್ನೇ ಮಾಡದೇ ನಗರಾಭಿವೃದ್ಧಿಗೆ ಸಂಬಂಧಿಸಿದ ವಿಧೇಯಕವೊಂದನ್ನು ಅಂಗೀಕಾರ ಮಾಡಿದೆ. ಉದ್ಯಾನವನ ಮತ್ತು ಸಾಮಾಜಿಕ ಅರಣ್ಯಕ್ಕೆ ಮೀಸಲಿಟ್ಟ ಜಾಗಗಳನ್ನು ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲು ಹೊಸ ವಿಧೇಯಕ ಅವಕಾಶ ನೀಡಿದೆ.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ವಿಧೇಯಕ 2016ಕ್ಕೆ (ಅರ್ಬನ್ ಡೆವಲಪ್ ಮೆಂಟ್ ಅಥಾರಿಟಿ ಬಿಲ್ ) ವಿಧಾನಸಭೆ ಒಪ್ಪಿಗೆ ನೀಡಿದ್ದು ಇದರಿಂದಾಗುವ ಕೆಟ್ಟ ಪರಿಣಾಮಗಳನ್ನು ಬಿ.ಪ್ಯಾಕ್ ಸಂಸ್ಥೆ ಸಾರ್ವಜನಿಕರ ಮುಂದೆ ಇಟ್ಟಿದೆ. ವಿಧೇಯಕ ಸದ್ಯ ರಾಜ್ಯಪಾಲರ ಬಳಿ ಇದ್ದು ಅವರು ಇನ್ನೊಮ್ಮೆ ಪರಾಮರ್ಶೆ ಮಾಡಬೇಕು ಎಂದು ಕೇಳಿಕೊಂಡಿದೆ.[ಅಂಗೀಕಾರವಾದ ಈ ವಿಧೇಯಕ, ಪರಿಸರಕ್ಕೆ ಎಷ್ಟು ಮಾರಕ?]

B.PAC strongly objects Urban Development Authorities bill

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ವಿಧೇಯಕದ ದುಷ್ಪರಿಣಾಮಗಳು
* ಸಾರ್ವಜನಿಕ ಅರಣ್ಯ ಪ್ರದೇಶ ನಿಧಾನವಾಗಿ ಮಾಯವಾಗುತ್ತಿರುವ ಸಂದರ್ಭದಲ್ಲಿ ಈ ಕಾನೂನು ಉದ್ಯಾನ ನಗರಿ ಎಂಬ ಹೆಸರನ್ನು ಬಲುಬೇಗ ಇಲ್ಲವಾಗುವಂತೆ ಮಾಡುತ್ತದೆ.
* ಇದು ವಾಣಿಜ್ಯೋದ್ಯಮಿಗಳ ಮತ್ತು ಪ್ರಭಾವಿಗಳಿಗೆ ನೆರವು ನೀಡುವ ಕಾನೂನಾಗಿದ್ದು, ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿದ್ದ ಅರಣ್ಯಗಳಿಗೂ ಆತಂಕ ಎದುರಾಗಿದೆ.[ಅವಧಿಗೂ ಮುನ್ನವೇ ಕಲಾಪ ಮುಕ್ತಾಯ]

ಬಿ.ಪ್ಯಾಕ್ ಸಲಹೆಗಳು
* ಆಟದ ಮೈದಾನಗಳ ನಿರ್ವಹಣೆಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು.
* ಮಕ್ಕಳ ಹಕ್ಕು ಕಾಪಾಡಲು ಸರ್ಕಾರ ಮುಂದಾಗಬೇಕು. ಮೈದಾನಗಳ ನಿರ್ವಹಣೆ ಜತೆಗೆ ಕಾಪಾಡುವಿಕೆ ಇಂದಿನ ಅಗತ್ಯವಾಗಿದೆ.
* ಪಾರ್ಕ್ ಮತ್ತು ಸಾಮಾಜಿಕ ಅರಣ್ಯ, ಮೈದಾನಗಳ ಉಳಿವಿಗೆ ಬೆಂಗಳೂರಿನ ನಾಗರಿಕರಿಂದಲೇ ಸಲಹೆ ಆಹ್ವಾನಿಸಿ ಆ ಮೂಲಕ ಪರಿಹಾರ ಕ್ರಮ ತೆಗೆದುಕೊಳ್ಳಬಹುದು.

ವಿಧೇಯಕ ಏನು ಹೇಳುತ್ತದೆ?
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸುವ ಬಡಾವಣೆಯ ಪ್ರದೇಶದ ಶೇ. 15ಕ್ಕೂ ಕಡಿಮೆ ಇಲ್ಲದ ಪ್ರದೇಶವನ್ನು ಸಾರ್ವಜನಿಕ ಉದ್ಯಾನ ಮತ್ತು ಆಟದ ಮೈದಾನಗಳಿಗೆ, ಒಟ್ಟು ಪ್ರದೇಶದ ಶೇ. 10 ಕ್ಕೂ ಕಡಿಮೆ ಇಲ್ಲದಂತೆ ನಾಗರಿಕ ಸೌಲಭ್ಯಕ್ಕೆ ಮೀಸಲಿಡುವ ತಿದ್ದುಪಡಿ ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: B.PAC strongly objects to the silent passing of Karnataka Urban Development Authorities (Amendment) Bill without discussion or debate. B.PAC would like to raise the following rallying points. The moniker of ‘Garden City' is becoming a bit ironical in a city fast losing its parks and playgrounds to illegal encroachments. Moves such as this legislation are the first step towards a slow demise of the public park culture of the city.
Please Wait while comments are loading...