ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೋಗ್ಯ ಬಗ್ಗೆ ಉಚಿತ ಸಲಹೆ ಬೇಕಾ, ಆಯುಷ್ ಮೇಳಕ್ಕೆ ಬನ್ನಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಡಿ.26: ನೀವು ಮಾನಸಿಕ ಒತ್ತಡ, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಮಧುಮೇಹ ಹಾಗೂ ಹೈಪರ್ ಟೆನ್ಶನ್ ಕಾಯಿಲೆಗಳಿಂದ ಬಳಲುತ್ತಿದ್ದೀರಾ? ಹಾಗಾದರೆ ಬೆಂಗಳೂರಿನ ಜಿಗಣಿಯಲ್ಲಿ ನಡೆಯುವ ಆಯುಷ್ ಮೇಳದಲ್ಲಿ ಪಾಲ್ಗೊಳ್ಳಿ.

ವಿಶ್ವಮಟ್ಟದ ಆಯುಷ್ ಮೇಳ ಜನವರಿ 3ರಿಂದ 7ರವರೆಗೆ ಬೆಂಗಳೂರಿನ ಜಿಗಣಿಯಲ್ಲಿ ಏರ್ಪಡಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸಮ್ಮೇಳನ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ನೂ ಹಲವಾರು ಗಣ್ಯರ ಸಮಾಗಮದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.[ಭಾರತದ ಮಾರುಕಟ್ಟೆಗೆ ಡೆಂಗ್ಯೂ ಲಸಿಕೆ ಯಾವಾಗ ಬರುತ್ತದೆ?]

Ayush mela

ವಿಶ್ವದ ಸುಮಾರು 20 ದೇಶಗಳಿಂದ 10 ಸಾವಿರ ಮಂದಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಆರೋಗ್ಯದ ಬಗ್ಗೆ ನುರಿತ ವೈದ್ಯರಿಂದ ಸಲಹೆ ಸೂಚನೆಗಳು ದೊರೆಯಲಿದೆ. ಆರೋಗ್ಯ ಸುಧಾರಣೆಗೆ ಈ ಮೇಳ ನೆರವಾಗಲಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.[ಏಡ್ಸ್ ಕುರಿತು ನೀವು ತಿಳಿದಿರಲೇಬೇಕಾದ 8 ಸಂಗತಿಗಳು]

ಈ ಆಯುಷ್ ಮೇಳದಲ್ಲಿ ಮಾನಸಿಕ ಒತ್ತಡ, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಮಧುಮೇಹ ಹಾಗೂ ಹೈಪರ್ ಟೆನ್ಶನ್ ಕಾಯಿಲೆಗಳಿಗೆ ಸಂಬಂಧಿಸಿದ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

English summary
Ayush mela held in january 3rd, Sunday to 7th Thursday in Jigani, Bengaluru. This programme inaugurates by Pime Minister Narendra Modi and Chief guest is Chief Minister Siddaramaiah. More than 10,000 people paricipates in this Mela. This is give some health tips of Heart, cancer, Hyper tention related disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X