ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವಿನಾಶ್‌ ಯಾರು? ಪ್ರಭಾವಿ ವ್ಯಕ್ತಿಗಳು ರಕ್ಷಣೆಗೆ ನಿಂತಿದ್ದೇಕೆ?

By Nayana
|
Google Oneindia Kannada News

ಬೆಂಗಳೂರು, ಜು.24: ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಕ್ಲಬ್‌ ಲಾಕರ್‌ ಪ್ರಕರಣಕ್ಕೆ ಮತ್ತಷ್ಟು ತಿರುವು ಸಿಕ್ಕಿದೆ. ಅವಿನಾಶ್‌ ಅಮರ್‌ಲಾಲ್‌ ಕುಕ್ರೇಜಾ ಲಾಕರ್‌ನಲ್ಲಿ ಪತ್ತೆಯಾದ ಆಸ್ತಿಪತ್ರ ಪ್ರಮಾಣದ ಮೊತ್ತ ಈ ಮುಂದೆ 550 ಕೋಟಿಯಲ್ಲ 800 ಕೋಟಿಗೂ ಅಧಿಕವೆನ್ನುವ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನ ಬೌರಿಂಗ್‌ ಕ್ಲಬ್‌ ಮೇಲೆ ಶನಿವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು, ಅಲ್ಲಿ ಅವಿನಾಶ್‌ ಕುಕ್ರೇಜಾ ಅವರಿಗೆ ಸಂಬಂಧಿಸಿದ್ದ ಲಾಕರ್‌ನಲ್ಲಿ 800 ಕೋಟಿಗೂ ಅಧಿಕ ಮೊತ್ತದ ಆಸ್ತಿಪತ್ರಗಳು, ಹಣ, ಆಭರಣಗಳು ದೊರೆತಿದ್ದವು.

ಮತ್ತೊಂದೆಡೆ ಲಾಕರ್‌ ರಹಸ್ಯದ ಹಿಂದೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಕುಟುಂಬಸ್ಥರ ಹೆಸರೂ ಕೂಡ ಕೇಳಿಬರುತ್ತಿದೆ. ಕೆಲವರು ಅವಿನಾಶ್‌ ರಕ್ಷಣೆಗೆ ಒತ್ತಡ ಹಾಕುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ. ಆಸ್ತಿಪತ್ರದಲ್ಲಿ ಕೆಲ ಪ್ರಭಾವಿ ರಾಜಕಾರಣಿಗಳು, ಅವರ ಮಕ್ಕಳ ಹಾಗೂ ಸಂಬಂಧಿಕರ ಹೆಸರು ಉಲ್ಲೇಖವಾಗಿದೆ.

ಬೌರಿಂಗ್‌ ಕ್ಲಬ್‌ ಲಾಕರ್‌ನಲ್ಲಿ ಇದ್ದಿದ್ದು 550 ಕೋಟಿಯಲ್ಲ 800 ಕೋಟಿ ಬೌರಿಂಗ್‌ ಕ್ಲಬ್‌ ಲಾಕರ್‌ನಲ್ಲಿ ಇದ್ದಿದ್ದು 550 ಕೋಟಿಯಲ್ಲ 800 ಕೋಟಿ

ಅವಿನಾಶ್‌ನ ಯಾರು, ವೃತ್ತಿ ಏನು? ಅವಿನಾಶ್‌ ಹೆಸರಿಗೆ ಮಾತ್ರ ಟಯರ್‌ ಅಂಗಡಿ ಇಟ್ಟುಕೊಂಡಿದ್ದು, ರಿಯಲ್‌ ಎಸ್ಟೇಟ್‌ ಉದ್ಯಮ ಮತ್ತು ಬಡ್ಡಿಗೆ ಸಾಲ ನೀಡುತ್ತಿದ್ದರು ಎನ್ನಲಾಗಿದೆ. ಬೌರಿಂಗ್‌ ಕ್ಲಬ್‌ ಲಾಕರ್‌ ರಹಸ್ಯ ಬಯಲಾಗುತ್ತಿದ್ದಂತೆ ನಗರದಲ್ಲಿರುವ ಇತರೆ ಕೆಲ ಪ್ರತಿಷ್ಠಿತ ಕ್ಲಬ್‌ಗಳ ಆಡಳಿತ ಮಂಡಳಿಗಳೂ ಎಚ್ಚೆತ್ತುಕೊಂಡಿದ್ದು, ಲಾಕರ್‌ಗಳನ್ನು ಪರಿಶೀಲಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

Avinash Will Be Given A Chance To Explain, Say Club Officials

ಸಮನ್ಸ್‌ ನೀಡಿದರೂ ಬರಲಿಲ್ಲ: ವಿಚಾರಣೆಗೆ ಹಾಜರಾಗುವಂತೆ ಅವಿನಾಶ್‌ಗೆ ಐಟಿ ಅಧಿಕಾರಿಗಳು ಸಮನ್ಸ್‌ ನೀಡಿದ್ದರೂ ವಿಚಾರಣೆ ಹಾಜರಾಗಲಿಲ್ಲ. ವಶಪಡಿಸಿಕೊಂಡ ಆಸ್ತಿ ಪತ್ರಗಳನ್ನು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಆಸ್ತಿಪತ್ರದಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳನ್ನು ವಿಚಾರಣೆ ಮಾಡಲು ಮುಂದಾಗಿದ್ದಾರೆ.

Avinash Will Be Given A Chance To Explain, Say Club Officials

ಅವಿನಾಶ್‌ ಅವರ ಸದಸ್ಯತ್ವದಿಂದ ವಜಾಗೊಳಿಸಲು ಸಾಧ್ಯವಿಲ್ಲ ಏಕೆಂದರೆ ಅವರದ್ದು ಯಾಕೆಂದರೆ ಲೈಫ್‌ಟೈಂ ಮೆಂಬರ್‌ಶಿಪ್‌ ಹಾಗಾಗಿ ಅವರನ್ನು ವಜಾಗೊಳಿಸಲು ಸಾಧ್ಯವಿಲ್ಲ ಎಂದು ಕ್ಲಬ್‌ ಅಧಿಕಾರಿಗಳು ಹೇಳುತ್ತಿದ್ದಾರೆ.

English summary
The Bowring club is currently dominated by a particular community with links to the rich and influential in the city. These people are preventing Avinash’s membership from being scrapped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X