ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೌರಿಂಗ್ ಇನ್ಸ್ಟಿಟ್ಯೂಟ್ ಸದಸ್ಯತ್ವಕ್ಕೆ ಅವಿನಾಶ್ ರಾಜೀನಾಮೆ!

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 02 : ಬೌರಿಂಗ್ ಇನ್ಸ್ಟಿಟ್ಯೂಟ್ ಸದಸ್ಯತ್ವ ಸ್ಥಾನಕ್ಕೆ ಅವಿನಾಶ್ ಅಮರಲಾಲ್ ಕುಕ್ರೇಜ್ ರಾಜೀನಾಮೆ ನೀಡಿದ್ದಾರೆ. ಇನ್ಸ್ಟಿಟ್ಯೂಟ್ ಲಾಕರ್‌ನಲ್ಲಿ ಅವಿನಾಶ್ ಕೋಟಿ-ಕೋಟಿ ಹಣ ಇಟ್ಟಿರುವ ಪ್ರಕರಣ ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದಿತ್ತು.

ಅವಿನಾಶ್ ಅಮರಲಾಲ್ ಕುಕ್ರೇಜ್ ಮಂಗಳವಾರ ತಾಯಿ ಜೊತೆ ಬೌರಿಂಗ್ ಇನ್ಸ್ಟಿಟ್ಯೂಟ್‌ಗೆ ಆಗಮಿಸಿ, ಕಾರ್ಯದರ್ಶಿ ಎಚ್.ಎಸ್.ಶ್ರೀಕಾಂತ್ ಅವರಿಗೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ಅಂಗೀಕಾರವಾಗಿದ್ದು, ತಕ್ಷಣದಿಂದಲೇ ಅವಿನಾಶ್, ಪತ್ನಿ ಮತ್ತು ಮಕ್ಕಳ ಸದಸ್ಯತ್ವ ರದ್ದಾಗಿದೆ.

ಬೌರಿಂಗ್ ಲಾಕರ್ ಪ್ರಕರಣ: ಸಿಸಿಟಿವಿ ಪರಿಶೀಲಿಸುತ್ತಿರುವ ಐಟಿ ಅಧಿಕಾರಿಗಳುಬೌರಿಂಗ್ ಲಾಕರ್ ಪ್ರಕರಣ: ಸಿಸಿಟಿವಿ ಪರಿಶೀಲಿಸುತ್ತಿರುವ ಐಟಿ ಅಧಿಕಾರಿಗಳು

ಬೌರಿಂಗ್ ಇನ್ಸ್ಟಿಟ್ಯೂಟ್ ಶಿಸ್ತು ಸಮಿತಿ ಅವಿನಾಶ್‌ಗೆ ಲಾಕರ್ ದುರುಪಯೋಗ ಮಾಡಿದ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ಉತ್ತರ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಆದರೆ, ಇದಕ್ಕೂ ಮೊದಲೇ ಅವರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

Avinash Kukreja resigned for member of Bowring Institute

ಕೋಟಿ-ಕೋಟಿ ಹಣ ಪತ್ತೆ : ಜುಲೈ 19ರಂದು ಬೌರಿಂಗ್ ಇನ್ಸ್ಟಿಟ್ಯೂಟ್ ಲಾಕರ್‌ನಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗುವಂತೆ ಅವಿನಾಶ್‌ಗೆ ನೋಟಿಸ್ ನೀಡಿತ್ತು. ಆದರೆ, ಅದಕ್ಕೆ ಅವರು ಉತ್ತರ ನೀಡಿರಲಿಲ್ಲ. ಕೊನೆಗೆ ಲಾಕರ್ ಒಡೆದಾಗ ಅದಲ್ಲಿ ಬ್ಯಾಗ್ ಪತ್ತೆಯಾಗಿತ್ತು.

ಅವಿನಾಶ್‌ ಯಾರು? ಪ್ರಭಾವಿ ವ್ಯಕ್ತಿಗಳು ರಕ್ಷಣೆಗೆ ನಿಂತಿದ್ದೇಕೆ? ಅವಿನಾಶ್‌ ಯಾರು? ಪ್ರಭಾವಿ ವ್ಯಕ್ತಿಗಳು ರಕ್ಷಣೆಗೆ ನಿಂತಿದ್ದೇಕೆ?

ಲಾಕರ್ ನಂಬರ್ 86 ಮತ್ತು 87ರಲ್ಲಿ 3.90 ಕೋಟಿ ನಗದು, 5 ಕೋಟಿ ಮೌಲ್ಯದ ವಜ್ರಾಭರಣ, 100 ಕೋಟಿ ರೂ. ಆಸ್ತಿಯ ದಾಖಲೆಗಳು ಪತ್ತೆಯಾಗಿದ್ದವು. ಈ ಕುರಿತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಅವಿನಾಶ್ ಅಮರಲಾಲ್ ಕುಕ್ರೇಜ್ ಮೂಲತಃ ರಾಜಸ್ಥಾನದವರು. ಬೆಂಗಳೂರಿನ ಪ್ರೆಸ್ಟಿಜ್ ಕಂಪನಿಯಲ್ಲಿ ಪಾಲುದಾರನಾಗಿದ್ದು, ನಗರದಲ್ಲಿ ಹಲವಾರು ಉದ್ಯಮಗಳಲ್ಲಿ ಅವರು ಬಂಡವಾಳ ಹೂಡಿಕೆ ಮಾಡಿದ್ದಾರೆ.

English summary
Avinash Kukreja tendered his resignation for the membership of Bowring Institute, Bengaluru. Avinash Kukreja resigned after cash, gold, watches and documents found in his lockers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X