'ನಮ್ಮ ಮೆಟ್ರೋ' ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 22: ಅತ್ಯಂತ ಕಡಿಮೆ ಸಮಯದಲ್ಲಿಯೇ ಬೆಂಗಳೂರಿಗರ ಮೆಚ್ಚಿನ ಸಾರಿಗೆಯಾಗಿ ಮೆಟ್ರೋ ಹೊರ ಹೊಮ್ಮಿದೆ. ದಿನೇ ದಿನೇ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ.

ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕೆ ಮೆಟ್ರೋ ಸಂಚಾರ ಅವಧಿ ವಿಸ್ತರಣೆ

ಹೌದು, ಪ್ರತಿದಿನ ಮೆಟ್ರೋದಲ್ಲಿ ಸಂಚರಿಸುವ ಸರಾಸರಿ ಪ್ರಯಾಣಿಕರ ಸಂಖ್ಯೆ 3.3 ಲಕ್ಷಕ್ಕೆ ಏರಿದೆ, ಈ ಸಂಖ್ಯೆ ಪ್ರತಿ ದಿನ ಏರಿಕೆ ಆಗುತ್ತಿದೆ. ಜುಲೈನಿಂದ ಈಚೆಗೆ ಮೆಟ್ರೋದಲ್ಲಿ ಪ್ರಯಾಣಿಸಿದ ಒಟ್ಟು ಪ್ರಯಾಣಿಕರ ಸಂಖ್ಯೆ 5.5 ಕೋಟಿ ದಾಟಿದೆ. ಈ ವಿಷಯವನ್ನು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

'Namma Metro'

ಅಕ್ಟೋಬರ್ ಮತ್ತು ನವೆಂಬರ್ ಎರಡು ತಿಂಗಳಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಿರುವವರ ಸಂಖ್ಯೆ ಒಂದು ಕೋಟಿ ದಾಟಿದೆಯಂತೆ. ಬೆಂಗಳೂರಿನ ಬಹುಕಾಲದ ಮೆಚ್ಚಿನ ಸಾರಿಗೆ ಬಿಎಂಟಿಸಿಯನ್ನು ಕೆಲವೇ ವರ್ಷಗಳಲ್ಲಿ ಮೀರಿಸಿ ಮೊದಲ ಸ್ಥಾನ ಪಡೆಯುವತ್ತ ಮೆಟ್ರೋ ಮುನ್ನುಗ್ಗುತ್ತಿರುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತಿದೆ.

ಮೆಟ್ರೊ ಸಾಧನೆಯ ಬಗ್ಗೆ ಟ್ವೀಟ್ ಮಾಡಿರುವ ಕೆ.ಜೆ.ಜಾರ್ಜ್ ಅವರು 'ನಮ್ಮ ಮೆಟ್ರೋ' ಸುಲಭ ಮತ್ತು ವೇಗದ ಸಾರಿಗೆಯಾಗಿ ಜನಪ್ರಿಯಗೊಳ್ಳುತ್ತಿದೆ, ಮೆಟ್ರೋ ದಿನದಿಂದ ದಿನಕ್ಕೆ ಪ್ರಯಾಣಿಕರನ್ನು ಸೆಳೆದುಕೊಳ್ಳುತ್ತಿದೆ. ಅತ್ಯುತ್ತಮ ಗುಣಮಟ್ಟದ ಸೇವೆ ನೀಡಲು ಬಿಎಂಆರ್‌ಸಿಎಲ್ ಸದಾ ಶ್ರಮಿಸುತ್ತಿದೆ' ಎಂದಿದ್ದಾರೆ.

ಜನವರಿಯಲ್ಲಿ ಆರು ಬೋಗಿ ಮೆಟ್ರೋ ರೈಲು ಪ್ರಾಯೋಗಿಕ ಆರಂಭ

ಸಚಿವರ ಟ್ವೀಟ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೆಟ್ರೋ ಬಳಕೆದಾರರು ಕಮೆಂಟ್ ಮಾಡಿ ಕೆಲವು ಸಲಹೆ, ಸೂಚನೆಗಳನ್ನೂ ಕೊಟ್ಟಿದ್ದಾರೆ. ಹೆಚ್ಚಿನ ಜನರು ಮೆಟ್ರೋದ ಉಳಿದ ಹಂತಗಳನ್ನು ಆದಷ್ಟು ಬೇಗ ಪುರ್ಣಗೊಳಿಸಿ ಎಂದಿದ್ದಾರೆ. ಮೆಟ್ರೊ ನಿಲ್ದಾಣಗಳಲ್ಲಿ ಡಿಜಿಟಲ್ ಬೋರ್ಡ್‌ಗಳನ್ನು ಹಾಕಿ ಮೆಟ್ರೋ ಬರುವ ಹೋಗುವ ಮಾಹಿತಿ ಸ್ಪಷ್ಟವಾಗಿ ಸಿಗುವಂತೆ ಮಾಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Average daily ridership has increased to 3.3 Lakhs & total ridership of around 5.5 Crores since July, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ