ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸಂಚಾರ ದಟ್ಟಣೆಗೆ ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆ

|
Google Oneindia Kannada News

ಬೆಂಗಳೂರು, ಜೂನ್ 25 : ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ 'ವಾಹನ ದಟ್ಟಣೆ ಆಧರಿತ ಸ್ವಯಂಚಾಲಿತ ಸಿಗ್ನಲ್‌' ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಗರದ 4 ಕಡೆಗಳಲ್ಲಿ ಈ ಸಿಗ್ನಲ್ ವ್ಯವಸ್ಥೆಯನ್ನು ಆಳವಡಿಸಲಾಗಿದೆ.

ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್ (ಬಿಇಎಲ್‌) ಎಂ.ಎಸ್‌. ರಾಮಯ್ಯ ಆಸ್ಪತ್ರೆ ವೃತ್ತ, ಇಸ್ರೋ ಜಂಕ್ಷನ್‌, ದೇವಸಂದ್ರ ಜಂಕ್ಷನ್‌ ಹಾಗೂ ಬಿಇಎಲ್‌ ವೃತ್ತದಲ್ಲಿ ಪ್ರಾಯೋಗಿಕವಾಗಿ ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆಗೆ ಅಳವಡಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರದೆಲ್ಲೆಡೆ ಅನುಷ್ಠಾನಗೊಳಿಸಲು ಸಂಚಾರಿ ಪೊಲೀಸರು ಚಿಂತನೆ ನಡೆಸಿದ್ದಾರೆ. [ಮುಂಗಾರು ಮಳೆ ಎದುರಿಸಲು ನಮ್ಮ ಬೆಂಗಳೂರು ಸಿದ್ಧವೇ?]

traffic police

ಹೇಗೆ ಕೆಲಸ ಮಾಡುತ್ತದೆ? : ವಾಹನ ದಟ್ಟಣೆ ಆಧರಿತ ಸ್ವಯಂಚಾಲಿತ ಸಿಗ್ನಲ್‌' ವ್ಯವಸ್ಥೆಗೆ (automatic traffic signal controller) ಯಲ್ಲಿ ಸೆನ್ಸರ್‌, ಕ್ಯಾಮೆರಾ ಮೂಲಕ ಯಾವ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿದೆ ಎಂಬುದನ್ನು ಸಿಗ್ನಲ್‌ಗಳು ಗ್ರಹಿಸುತ್ತವೆ. [ಆಟೋದಲ್ಲಿ ಪ್ರಯಾಣಿಸುವವರಿಗೆ 'ಬಿ-ಸೇಫ್' ಅಪ್ಲಿಕೇಶನ್]

ಸಂಚಾರ ದಟ್ಟಣೆ ಹೆಚ್ಚಿರುವ ಕಡೆ ಹಸಿರು ದೀಪ ಹತ್ತಿಕೊಳ್ಳುತ್ತದೆ. ಆಗ ವಾಹನಗಳು ಮುಂದಕ್ಕೆ ಹೋಗಬಹುದು. ಆ ವಾಹನಗಳು ತಡೆ ಇಲ್ಲದೆ ಹೋಗಲು ಪ್ರತಿಯೊಂದು ಸಿಗ್ನಲ್‌ನಲ್ಲಿಯೂ ಹಸಿರು ದೀಪ ಹೊತ್ತಿಕೊಳ್ಳುತ್ತದೆ. ವಾಹನ ದಟ್ಟಣೆಗೆ ತಕ್ಕಂತೆ ಸಿಗ್ನಲ್‌ಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಣೆ ಮಾಡುತ್ತವೆ. [ಅಷ್ಟಕ್ಕೂ ಸವಾರರು ಹೆಲ್ಮೆಟ್ ಯಾಕೆ ಧರಿಸಬೇಕು?]

ಎಂ.ಎಸ್.ರಾಮಯ್ಯ ಆಸ್ಪತ್ರೆ ವೃತ್ತದಿಂದ ಬಿಇಎಲ್‌ ವೃತ್ತದವರೆಗೆ ರಸ್ತೆ ನೇರವಾಗಿದ್ದು, ಸಿಗ್ನಲ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ನಗರದ ಹಲವು ಕಡೆ ಅಡ್ಡ ರಸ್ತೆಗಳಿವೆ. ಅಲ್ಲಿ ಇಂತಹ ಸಿಗ್ನಲ್ ಹೇಗೆ ಕೆಲಸ ಮಾಡುತ್ತದೆ ಎಂದು ತಜ್ಞರಿಂದ ಮಾಹಿತಿ ಸಂಗ್ರಹಣೆ ಮಾಡಲಾಗುತ್ತಿದೆ.

'ಸ್ವಯಂ ಚಾಲಿತ ಸಿಗ್ನಲ್ ವ್ಯವಸ್ಥೆ ಅಳವಡಿಸಿರುವ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿದೆ. ಇಂತಹ ಸಿಗ್ನಲ್‌ಗಳನ್ನು ಇತರ ರಸ್ತೆಯಲ್ಲಿಯೂ ಅಳವಡಿಕೆ ಮಾಡುವ ಕುರಿತು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಆರ್‌.ಹಿತೇಂದ್ರ ಹೇಳಿದ್ದಾರೆ.

'ಇಂತಹ ಸಿಗ್ನಲ್‌ಗಳಿರುವ ರಸ್ತೆಯಲ್ಲಿ ಆಂಬ್ಯುಲೆನ್ಸ್ ಸೇರಿ ತುರ್ತು ವಾಹನ ಸಂಚಾರಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಅದು ಅಂಗಾಂಗಗಳ ತುರ್ತು ಸಾಗಾಟಕ್ಕೂ ಸಹಾಯಕವಾಗುತ್ತದೆ. ಜತೆಗೆ ಸಂಚಾರ ನಿಯಂತ್ರಣ ಕೊಠಡಿ ತೆರೆದು, ಸಿಗ್ನಲ್‌ಗಳ ಮೇಲೆ ನಿಗಾ ವಹಿಸಲು ಚರ್ಚೆ ನಡೆಸಲಾಗಿದೆ' ಎಂದು ಸರ್ಕಾರದ ಸಂಚಾರ ವ್ಯವಸ್ಥೆ ಸಲಹೆಗಾರ ಎಂ.ಎನ್‌. ಶ್ರೀಹರಿ ತಿಳಿಸಿದ್ದಾರೆ.[ಮಾಹಿತಿ : KarnatakaGovernment.Updates]

English summary
Bharat Electronics Ltd. (BEL) has installed four automatic traffic signal controller in Bengaluru city. Pilot project from M.S. Ramaiah Hospital to BEL Circle get good response. Bengaluru traffic police may install automatic signal controller in other roads soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X