ಒಡವೆ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 24 : ಆಟೋ ಚಾಲಕರೆಂದರೆ ಒಂದಕ್ಕೆ ಡಬಲ್ ಮೀಟರ್ ಹಾಕಿ ದುಡ್ಡು ಪೀಕುವವರು, ಕರೆದ ಕಡೆ ಬರದೆ ತಕರಾರು ಮಾಡುವರು ಹೀಗೆ ನಾನಾ ರೀತಿಯ ಅಭಿಪ್ರಾಯಗಳಿವೆ.

ಆದರೆ ಈ ಅಭಿಪ್ರಾಯಗಳ ಮಧ್ಯೆ ಆಗಾಗ ಆಟೊದವರ ಪ್ರಾಮಾಣಿಕತೆ, ಸಮಾಜ ಸೇವೆ ಉದಾಹರಣೆಗಳು ದೊರಕಿ ಆಟೋ ಚಾಲಕರ ಬಗೆಗಿನ ಸಾಮಾನ್ಯ ಅಭಿಪ್ರಾಯವನ್ನು ಪುನರ್ ವಿಮರ್ಶಿಸುವಂತೆ ಮಾಡುತ್ತದೆ. ಅಂತಹುದೇ ಒಂದು ಉದಾಹರಣೆ ಇಲ್ಲಿದೆ ನೋಡಿ...

ಬೆಂಗಳೂರಿನಲ್ಲೇ ಆಟೋ ಓಡಿಸಿಕೊಂಡಿರುವ ಮಹಮ್ಮದ್ ಇಕ್ಬಾಲ್, ಪ್ರಯಾಣಿಕರೊಬ್ಬರು ಆಟೊದಲ್ಲೇ ಮರೆತು ಹೋಗಿದ್ದ 4 ಲಕ್ಷ ಮೌಲ್ಯದ ಚಿನ್ನಾಭರಣ ತುಂಬಿದ್ದ ಬ್ಯಾಗ್ ಅನ್ನು ಕಮಿಷನರ್ ಕಚೇರಿಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.

Auto driver returns jewelers bag to police

ಸೆಪ್ಟೆಂಬರ್ 30 ರಂದು ಚೆನ್ನೈ ಮೂಲದ ಸುನಿಲ್ ಕಮಾರ್ ಕುಟುಂಬ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಇಕ್ಬಾಲ್ ಅವರ ಆಟೋದಲ್ಲಿ ಸುನಿಲ್ ಕುಮಾರ್ ಕುಟುಂಬ ಪ್ರಯಾಣ ಮಾಡಿದ್ದರು ಗಡಿಬಿಡಿಯಲ್ಲಿದ್ದ ಸುನೀಲ್ ಕುಮಾರ್ ಕುಟುಂಬ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಆಟೋ‌ದಲ್ಲಿ‌ ಮರೆತು ಹೋಗಿದ್ದರು. ನಂತರ ಬ್ಯಾಗಿಗೆ ತಡಕಾಡಿ ಕೊನೆಗೆ ಜೀವನ ಭೀಮಾನಗರದಲ್ಲಿ ಪ್ರಕರಣ ದಾಖಲಿಸಿದ್ದರು.

ಮರುದಿನ ಇಕ್ಬಾಲ್ ಆಟೋ ಓಡಿಸುವಾಗ ಈ ಬ್ಯಾಗ್ ಗಮನಿಸಿದ್ದಾರೆ. ತಕ್ಷಣ ಬ್ಯಾಗ್‌'ಅನ್ನು ಕಮಿಷನರ್ ಕಚೇರಿಗೆ ಒಪ್ಪಿಸಿದ್ದಾರೆ. ಇದೀಗ‌ ಪೊಲೀಸರು ಒಡವೆಗಳನ್ನ ಕಳೆದುಕೊಂಡವರಿಗೆ ಮಾಹಿತಿ ತಿಳಿಸಿ‌ ಇಕ್ಬಾಲ್ ಸಮ್ಮುಖದಲ್ಲಿ‌ ಹಣ ವಾಪಸ್ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Auto driver Iqbal returns jewelers bag to Police. Sunil kumar left bag full jewels worth of 4 lack rupees in Inqbal auto. now police returns Sunil Kumar's bag.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ