ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

10 ಕಿಮೀ ಚೇಸ್ ಮಾಡಿ ಕೊನೆಗೂ ಕಳ್ಳಿಯರನ್ನು ಹಿಡಿದ ಆಟೋ ಡ್ರೈವರ್

|
Google Oneindia Kannada News

ಬೆಂಗಳೂರು, ನವೆಂಬರ್ 2: ಕಳ್ಳರನ್ನು ಹಿಡಿಯುವುದು ಪೊಲೀಸರ ಕೆಲಸ, ನಮ್ಮಿಂದ ಎಲ್ಲಾಗುತ್ತೆ ಎನ್ನುವ ಮನಸ್ಸು ಮಾಡದೆ, ಕಳ್ಳಿಯರನ್ನು ಹಿಡಿಯಲೇ ಬೇಕು ಎನ್ನುವ ನಿರ್ಧಾರ ಮಾಡಿ ಹತ್ತು ಕಿಮೀ ಚೇಸ್ ಮಾಡಿ ಕೊನೆಗೂ ಕಳ್ಳಿಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಒಬ್ಬ ಆಟೋ ಡ್ರೈವರ್‌ನ ನಿಜವಾದ ಕತೆ ಇದೆ.

ಕೈಲಿದ್ದ ಹಣವನ್ನು ಕಿತ್ತುಕೊಂಡು ಹೋಗುತ್ತಿದ್ದ ಕಳ್ಳರ ಹಿಂದೆ 10 ಕಿ.ಮೀ ಓಡಿ ಕೊನೆಗೂ ಕಳ್ಳಿಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸುಬ್ರಮಣಿ ಎಂಬ ಆಟೋ ಚಾಲಕರು ಹಲಸೂರಿನಿಂದ ಇಂದಿರಾನಗರದವರೆಗೂ ಬೈಕ್, ಆಟೋ, ಬಸ್ ನಲ್ಲಿ ಬೆನ್ನಟ್ಟಿ ಹೋಗಿ ಮೂರು ಕಳ್ಳಿಯರನ್ನು ಹಿಡಿದಿದ್ದಾರೆ. ಚಿಮನ್, ರೇಖಾ, ಸೋನಮ್ ಬಂಧಿತ ಆರೋಪಿಗಳು.

ಮೈಸೂರಿನಲ್ಲಿ ಟ್ರಯಲ್ ನೋಡುವುದಾಗಿ ಹೇಳಿ ಕಾರಿನೊಂದಿಗೆ ಪರಾರಿಯಾದ ಖದೀಮ ಮೈಸೂರಿನಲ್ಲಿ ಟ್ರಯಲ್ ನೋಡುವುದಾಗಿ ಹೇಳಿ ಕಾರಿನೊಂದಿಗೆ ಪರಾರಿಯಾದ ಖದೀಮ

ಸುಬ್ರಮಣಿ, ತನ್ನ ಪತ್ನಿ ವಿದ್ಯಾ ಮತ್ತು ಮಗನ ಜೊತೆ ಕೆಜಿಎಫ್ ತೆರಳಲು ಹಲಸೂರಿನ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಅತ್ತೆಯ ಆಸ್ಪತ್ರೆ ಖರ್ಚಿಗಾಗಿ ಡ್ರಾ ಮಾಡಿದ್ದ 30 ಸಾವಿರ ರೂಪಾಯಿಯನ್ನು ವಿದ್ಯಾ ತನ್ನ ಪರ್ಸಿನಲ್ಲಿ ಇರಿಸುತ್ತಿದ್ದಾಗ ಮೂವರು ಕಳ್ಳಿಯರು ಬಂದು ಆ ಹಣವನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದರು.

Auto driver chased 10 km and nabbed three thieves

ಅಬ್ಬಬ್ಬಾ! ನಮ್ಮ ರೈಲ್ವೆ ಪ್ರಯಾಣಿಕರು ಕದ್ದಿದ್ದು 2.5 ಕೋಟಿ ರೂ ಮೌಲ್ಯದ ವಸ್ತು ಅಬ್ಬಬ್ಬಾ! ನಮ್ಮ ರೈಲ್ವೆ ಪ್ರಯಾಣಿಕರು ಕದ್ದಿದ್ದು 2.5 ಕೋಟಿ ರೂ ಮೌಲ್ಯದ ವಸ್ತು

ಈ ವಿಷಯ ಗೊತ್ತಾದ ತಕ್ಷಣ ಹೆಂಡತಿ-ಮಗನನ್ನು ಬಸ್‌ನಲ್ಲಿಯೇ ಬಿಟ್ಟು ಕೆಳಗಿಳಿದು ಬೈಕ್ ಸವಾರನ ಸಹಾಯದಿದ, ಬೈಯಪ್ಪನಹಳ್ಳಿಯಲ್ಲಿ ಕಳ್ಳಿಯರು ಹತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ಲಿಸಿದ್ದರು.
ಆದರೆ ಅವರು ಇಂದಿರಾ ನಗರದಲ್ಲಿಯೇ ಇಳಿದುಕೊಂಡಿದ್ದಾರೆ ಎಂಬುದು ತಿಳಿದ ತಕ್ಷಣ ತನ್ನ ಸ್ನೇಹಿತನ ಆಟೋದಲ್ಲಿ ಬೆನ್ನಟ್ಟಲು ಶುರು ಮಾಡಿದ್ದರು. ಬಳಿಕ ಕದಿರನಪಾಳ್ಯದಲ್ಲಿ ಮೂವರನ್ನು ತಡೆದು ನಿಲ್ಲಿಸಿದ ಅವರಲ್ಲಿದ್ದ ಹಣವನ್ನು
ತೆಗೆದುಕೊಂಡರು. ಈ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಳಿಕ ಕಳ್ಳಿಯರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

English summary
Brave auto driver chased three lady thieves for 10 km, by this filmy chase he saved 30k rupees of his own.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X