ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ರೋಡ್ ರೋಲರ್ ಕದಿಯಲು ವಿಫಲ ಯತ್ನ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 21 : ಎಟಿಎಂ ಯಂತ್ರವನ್ನು ಕದಿಯಲು ಪ್ರಯತ್ನ ನಡೆಸಿದ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಆದರೆ, ರೋಡ್ ರೋಲರ್ ಕದಿಯಲು ಪ್ರಯತ್ನ ನಡೆಸಿದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಟಿಂಬರ್ ಯಾರ್ಡ್ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ರೋಡ್ ರೋಲರ್ ಮತ್ತು ಟಾರ್ ಹಾಕುವ ಯಂತ್ರವನ್ನು ಕದಿಯಲು ಕಳ್ಳರ ಗುಂಪು ಪ್ರಯತ್ನ ನಡೆಸಿದೆ. ಆದರೆ, ಅದು ವೇಗವಾಗಿ ಹೋಗದ ಕಾರಣ ದಾರಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಕದ್ದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಕಳ್ಳನ ವಿಡಿಯೋ ವೈರಲ್ಕದ್ದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಕಳ್ಳನ ವಿಡಿಯೋ ವೈರಲ್

ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿದ್ದ ಜ್ಯೋತಿಶ್ ಎಂಬುವವರಿಗೆ ಸೇರಿದ ರೋಡ್ ರೋಲರ್ ಕಳವು ಮಾಡಲು ಪ್ರಯತ್ನ ನಡೆಸಲಾಗಿದೆ. ರೋಡ್ ರೋಲರ್ ಮತ್ತು ಟಾರ್ ಹಾಕುವ ಯಂತ್ರವನ್ನು ಕೆಲವು ದೂರ ಚಲಾಯಿಸಿಕೊಂಡು ಹೋಗಿದ್ದಾರೆ. ಆದರೆ, ಅದು ವೇಗವಾಗಿ ಹೋಗದ ಕಾರಣ ಅಲ್ಲೇ ಬಿಟ್ಟು ಹೋಗಿದ್ದಾರೆ.

Attempt to theft road rolar in Bengaluru

ರೋಡ್ ರೋಲರ್ ಬೆಲೆ 17 ಲಕ್ಷ ರೂ.ಗಳಾಗಿದೆ. ಡಾಂಬರು ಹಾಕುವ ಯಂತ್ರದ ನಿಖರ ಬೆಲೆ ಎಷ್ಟು ಎಂದು ತಿಳಿದುಬಂದಿಲ್ಲ. ಕಳ್ಳರು ಸ್ಪಲ್ಪ ದೂರ ತೆಗೆದುಕೊಂಡು ಹೋಗಿ ನಿಲ್ಲಿಸಿದ್ದ ರೋಡ್ ರೋಲರ್ ಪುನಃ ಜ್ಯೋತಿಶ್ ಅವರಿಗೆ ವಾಪಸ್ ಸಿಕ್ಕಿದೆ.

ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ಕಳ್ಳತನ ಮಾಡಿದ, ಅದೇನು ಗೊತ್ತಾ..?!ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ಕಳ್ಳತನ ಮಾಡಿದ, ಅದೇನು ಗೊತ್ತಾ..?!

ಜ್ಯೋತಿಶ್ ಅವರು ಕಳ್ಳತನ ಪ್ರಕರಣದ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

English summary
Miscreants attempt to theft road rolar in Bengaluru. Case registered in Byatarayanapura police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X