ನ್ಯಾ.ವಿಶ್ವನಾಥ ಶೆಟ್ಟಿಗೆ ಇರಿತ, ಭದ್ರತಾ ವೈಫಲ್ಯ: ಸಂತೋಷ್ ಹೆಗ್ಡೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 07: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರಿಗೆ ಚಾಕು ಇರಿತ ಪ್ರಕರಣದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಭದ್ರತಾ ವ್ಯವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು 'ಲೋಕಾಯುಕ್ತ ಕಚೇರಿಗೆ ಒಬ್ಬ ವ್ಯಕ್ತಿ ಚಾಕು ಹಿಡಿದುಕೊಂಡು ಹೋಗಿದ್ದಾನೆಂದರೆ ಅಲ್ಲಿನ ಭದ್ರತಾ ವ್ಯವಸ್ಥೆ ಎಷ್ಟು ಲೋಪಯುಕ್ತವಾಗಿದೆ' ಎಂಬುದು ತಿಳಿಯುತ್ತಿದೆ ಎಂದು ಅವರು ಭದ್ರತಾ ವೈಫಲ್ಯದ ಕಿಡಿ ಕಾರಿದ್ದಾರೆ.

LIVE : ಚೂರಿ ಇರಿತ : ಲೋಕಾಯುಕ್ತ ವಿಶ್ವನಾಥ್ ಅವರಿಗೆ ಆಪರೇಷನ್

ಇಂದು ಸಣ್ಣ ಪ್ರಾವಿಜನ್ ಶಾಪ್‌ಗೆ ತೆರಳುವವರನ್ನೂ ತಪಾಸಣೆ ಮಾಡಿ ಕಳಿಸುತ್ತಾರೆ, ಆದರೆ ಲೋಕಾಯುಕ್ತ ಕಚೇರಿಗೆ ಬರುವ ಒಬ್ಬ ವ್ಯಕ್ತಿ ಚಾಕು ಹಿಡಿದು ಬರುತ್ತಾನೆಂದರೆ ಇದು ದೊಡ್ಡ ಭದ್ರತಾ ವೈಫಲ್ಯ ಎಂದು ಅವರು ಹೇಳಿದ್ದಾರೆ.

 attack on judge is a security failure: Santhosh hegde

ವಿಶ್ವನಾಥ್ ಶೆಟ್ಟಿ ಅವರು ಆದಷ್ಟು ಬೇಗನೆ ಗುಣವಾಗಲಿ ಎಂದು ಹಾರೈಸಿದ ಅವರು ಈ ರೀತಿಯ ಘಟನೆಗಳು ಮರುಕಳಿಸದಂತೆ ತಡೆಯಬೇಕಿದೆ ಎಂದು ಹೇಳಿದ್ದಾರೆ.

ನ್ಯಾ.ವಿಶ್ವನಾಥ್ ಶೆಟ್ಟಿ ಪ್ರಾಣಾಪಾಯದಿಂದ ಪಾರು : ಸಿದ್ದರಾಮಯ್ಯ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Retire Lokayukta Judge Santhosh Hegde condemn attack on Judge Vishwanath Shetty and said 'its a security failure'. He said how can a man bring knife into Lokayukta office.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ