ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾವ ಎಟಿಎಂ ಕೆಲಸ ಮಾಡುತ್ತಿದೆ?: ಎಟಿಎಂ ಕರೊ.ಇನ್ ನಲ್ಲಿ ಮಾಹಿತಿ

ಯಾವ ಎಟಿಎಂ ನಲ್ಲಿ ಹಣವಿದೆ. ಯಾವ ಎಟಿಎಂ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಬೇಕೆಂದರೆ ಎಟಿಎಂ ಕರೋ.ಇನ್ ಗೆ ಲಾಗಾನ್ ಆಗಿ

By Prithviraj
|
Google Oneindia Kannada News

ಬೆಂಗಳೂರು, ನವೆಂಬರ್, 15: ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಮತ್ತು ಹಣ ಡ್ರಾಮಾಡಲು ಮಿತಿ ಹೇರಿದ ಪರಿಣಾಮ ಹಣಕ್ಕಾಗಿ ನಾಗರಿಕರು ಕಳೆದ ಐದು ದಿನಗಳಿಂದ ಪರದಾಡುತ್ತಿದ್ದಾರೆ.

ಬ್ಯಾಂಕ್ ಮತ್ತು ಎಟಿಎಂ ಕೇಂದ್ರಗಳ ಮುಂದೆ ಸಾಲು ಸಾಲು ಮಂದಿ ನಿಂತಿದ್ದಾರೆ. ಆದರೆ ಹಣದ ಪೂರೈಕೆ ಸಮಸ್ಯೆ ಮತ್ತು ಹೊಸ ನೋಟುಗಳ ಜೋಡಣೆಗೆ ತಾಂತ್ರಿಕ ಸಮಸ್ಯೆ ಎದುರಾದ ಪರಿಣಾಮ ದೇಶದ ಹಲವು ಎಟಿಎಂಗಳು ಕಾರ್ಯನಿರ್ವಹಿಸುತ್ತಿಲ್ಲ.

ATMkaro.in- A novel way to inform people which ATM is functional

ಹಲವು ಎಟಿಎಂಗಳ ಮುಂದೆ 'ನೋ ಕ್ಯಾಶ್' ಮತ್ತು 'ಔಟ್ ಆಫ್ ಸರ್ವಿಸ್' ಎಂಬ ನಾಮಫಲಕವನ್ನು ನೇತು ಹಾಕಲಾಗಿತ್ತು. ಇದರಿಂದ ಹಲವು ನಾಗರಿಕರು ಹಣಕ್ಕಾಗಿ ಎಟಿಎಂಗಳ ಬಳಿ ಅಲೆದು ಅಲೆದು ಸುಸ್ತಾಗಿದ್ದರು.[ಎಟಿಎಂಗಳಲ್ಲಿ ಶೀಘ್ರ ರೂ.50 ರೂ.20ರೂ. ನೋಟುಗಳು]

ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿಯೇ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲು ಯುವ ಸಮುದಾಯ ಮುಂದಾಗಿದೆ. ಈ ಮೂಲಕ ಹಲವರಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ.[ಹೊಸ ನೋಟು ಸಿಕ್ಕಿದ ಮೇಲೆ ಆದ ಅನುಕೂಲವೇನು?]

ಯಾವ ಎಟಿಎಂ ಕೆಲಸ ಮಾಡುತ್ತಿದೆ ಎಂಬ ವಿಷಯವನ್ನು ಕಂಡ ಕೂಡಲೇ ಟ್ವಿಟ್ಟರ್ ನಲ್ಲಿ ಯುವಕರು ತಿಳಿಸುತ್ತಿದ್ದಾರೆ. ಕಾರ್ಯನಿರತವಾಗಿರುವ ಎಟಿಎಂಗಳ ಮಾಹಿತಿ ಹಂಚಲು ಹಲವು ಮಂದಿ ಭಾನುವಾರ ಗಣನೀಯ ಸಂಖ್ಯೆಯಲ್ಲಿ ಟ್ವೀಟ್ ಗಳನ್ನು ಮಾಡಿದ್ದಾರೆ.

ಕಾರ್ಯನಿರತ ಎಟಿಎಂಗಳ ಮಾಹಿತಿ ಹಂಚುವುದಕ್ಕಾಗಿಯೇ ಕೆಲವು ಮಂದಿ ಯುವಕರು ಸೇರಿ ATMkaro.in, ಎಂಬ ವೆಬ್ ಸೈಟ್ ವೊಂದನ್ನು ರಚಿಸಿ ಮಾಹಿತಿ ಹಂಚಿದ್ದಾರೆ. ಮಹಿತಿ ವಿನಿಮಯ ಮಾಡಲು ಟ್ವಿಟ್ಟರ್ ಅನ್ನೂ ಸಹ ಬಳಸಿಕೊಂಡಿದ್ದಾರೆ.

ಈ ವೆಬ್ ಸೈಟ್ ನಲ್ಲಿ ನೀವು ಸಹ ಕಾರ್ಯನಿರತ ಎಟಿಎಂಗಳ ಮಾಹಿತಿಯನ್ನು ಪ್ರಕಟಿಸಬಹುದಾಗಿದೆ. ಇದರಿಂದ ನಿಷ್ಕ್ರಿಯಗೊಂಡಿರುವ ಎಟಿಎಂಗಳಿಗೆ ಹಣ ಸಿಗದೆ ನಿರಾಸೆಯಿಂದ ಹಿಂತಿರುಗುವುದಕ್ಕಿಂತ ಸನಿಹ ಸಿಗುವ ಎಟಿಎಂಗಳಲ್ಲಿ ಮಾಹಿತಿ ಪಡೆಯಬಹುದಾಗಿದೆ.

ಈಗಾಗಲೇ ವೆಬ್ ಸೈಟ್ ನ ಯು ಆರ್ ಎಲ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ. ಹಳೆ ನೋಟುಗಳನ್ನು ನಿಷೇಧಿಸುತ್ತಿರುವುದಾಗಿ ಪ್ರಧಾನಿ ಮೋದಿ ಅವರು ಮಂಗಳವಾರ ಘೋಷಿಸುತ್ತಿದ್ದಂತೆಯೇ ಹಲವು ಗ್ರಾಹಕರು ಎಟಿಎಂಗಳ ಬಳಿ ಹಣಕ್ಕಾಗಿ ಮುಗಿಬೀಳುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿಬಿಟ್ಟಿದೆ.

ಪ್ರಸ್ತುತ ದೇಶದ ಬಹುತೇಕ ಎಟಿಎಂಗಳಲ್ಲಿ ಕೇವಲ 100ರೂ. ಮುಖಬೆಲೆಯ ನೋಟುಗಳನ್ನು ಮಾತ್ರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 500ರೂ. ಹಾಗೂ 200ರೂ. ಮುಖಬೆಲೆಯ ನೋಟುಗಳನ್ನು ಸಹ ಪರಿಚಯಿಸಲಾಗುತ್ತದೆ ಎಂದು ಹೇಳಲಾಗಿದೆ.

English summary
People have been tweeting about the ATMs that are open and functional so that it helps people. There were scores of tweets and messages on Sunday on social media in which information regarding ATMs being open were shared.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X