ಎಟಿಎಂ ದೋಚುತ್ತಿದ್ದ ಇಬ್ಬರ ಬಂಧನ: ಪೊಲೀಸರಿಗೆ ಬಹುಮಾನ

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 25 : ನಗರದ ಮಾರತ್ತಹಳ್ಳಿಯಲ್ಲಿ ಶುಕ್ರವಾರ (ನ.24) ಮಧ್ಯರಾತ್ರಿ 1.45ರ ವೇಳೆ ಸಿಟಿ ಬ್ಯಾಂಕ್ ಟಿಎಂ ನಲ್ಲಿರುವ ಹಣವನ್ನು ದೋಚಲು ಎತ್ನಿಸುತ್ತಿದ್ದ ಇಬ್ಬರು ದರೋಡೆಕೋರರನ್ನು ಬೀಟ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಎಟಿಎಂಗೆ ಹಣ ತುಂಬುವ ವೇಳೆ 18 ಲಕ್ಷ ಲೂಟಿ

ಮಾರತ್ತಹಳ್ಳಿಯ ಬೀಟ್ ಕಾನ್ಟೆಬಲ್ ಗಳಾದ ಬೀರ ಲಿಂಗಪ್ಪ ಹಾಗೂ ಉಸ್ಮಾನ್ ಅವರು ರಾತ್ರಿ ಗಸ್ತು ತಿರುಗುತ್ತಿದ್ದಾಗ ಮಾರತ್ತಹಳ್ಳಿಯ ಸಿಟಿ ಬ್ಯಾಂಕ್ ಎಟಿಎಂನ್ನು ದೋಷುತ್ತಿರುವ ದೃಶ್ಯ ಕಣ್ಣಿಗೆ ಬಿದ್ದಿದೆ ತಕ್ಷಣ ಪೊಲೀಸರು ಬಂಧಿದ್ದಾರೆ. ಇದಕ್ಕೆ ಪೊಲೀಸ್ ಕಮಿಷನರಿಂದ ಬಹುಮಾನ ಘೋಷಿಸಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಮೆಚ್ಚಿ ಟ್ವಿಟ್ಟಿಗರು ಅಭಿನಂದನೆ ಸಲ್ಲಿಸಿದ್ದಾರೆ.

ATM Thieves arrested: Constables Rewarded!

ನಾರಾಯಣ್ ಎಂಬುವವರು ಈ ಇಬ್ಬರು ಪೊಲೀಸರು ಈ ಮೊದಲು ಕೂಡ ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದು ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ.

ಧರಣೇಶ್ ಎಂಬುವವರು ಕೂಡ ಪೊಲೀಸರು ಉತ್ತಮ ಕೆಲಸವನ್ನು ಮಾಡಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Beat constables of Marathalli, Beeralingappa and Usmaan arrested two culprits trying to break City Bank ATM at 1.45 AM nov.24.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ