ನೋಡದಷ್ಟೆ, ಆಡದಲ್ಲ ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 04 : ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ವಸ್ತು ತಂದು ಅದನ್ನು ಬಳಸದೆ ಶೋಕೇಸಿನಲ್ಲಿ ಇಟ್ಟಂತಾಗಿದೆ ರಾಜ್ಯ ಕ್ರೀಡಾ ಇಲಾಖೆಯ ಕತೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ಉತ್ತಮ ಗುಣಮಟ್ಟದ ಸಿಂಥೆಟಿಕ್ ಟ್ರ್ಯಾಕ್ ಮಾಡಿದ್ದಾರೆ ಆದರೆ ಕ್ರೀಡಾಪಟುಗಳು ಅದರ ಮೇಲೆ ಹೆಜ್ಜೆ ಇಡಲೂ ಬಿಟ್ಟಿಲ್ಲ ಕಂಠೀರವ ಕ್ರೀಡಾಂಗಣದ ವ್ಯವಸ್ಥಾಪಕ ಅಧಿಕಾರಿಗಳು.

athletes and coaches go to court against Kanteerava stadium

ಸಿಂಥೆಟಿಕ್ ಟ್ರ್ಯಾಕ್ ಸುತ್ತ ಬ್ಯಾರಿಕೇಡ್‌ಗಳನ್ನು ಇಟ್ಟು ಶೋಕೇಸಿನಲ್ಲಿಟ್ಟ ಗಾಜಿನ ಗ್ಲಾಸಿನಂತೆ ನೋಡಲಷ್ಟೆ, ಬಳಸಲ್ಲ ಎಂಬಂತೆ ಮಾಡಿಬಿಟ್ಟಿದ್ದಾರೆ ಇಲ್ಲಿನ ಅಧಿಕಾರಿಗಳು. ಇವರ ಈ ವರ್ತನೆ ವಿರುದ್ಧ ಬೇಸರಗೊಂಡಿರುವ ಕ್ರೀಡಾಳುಗಳು ಮತ್ತು ಕೋಚ್‌ಗಳು ಸಿಂಥೆಟಿಕ್ ಟ್ರ್ಯಾಕ್‌ಗೆ ಪ್ರವೇಶ ದಕ್ಕಿಸಿಕೊಳ್ಳುವುದಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್ ಟ್ರ್ಯಾಕ್‌ಗೆ ಅಥ್ಲೆಟಿಕ್ಸ್ ಪ್ರವೇಶ ನಿಷೇಧ ಪ್ರಶ್ನಿಸಿ 17 ಕ್ಕೂ ಹೆಚ್ಚು ಕೋಚ್‌ಗಳು ಹಾಗೂ 33 ಅಥ್ಲೆಟಿಕ್ಸ್ ಗಳು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಅಥ್ಲೆಟಿಕ್ಸ್‌ಗಳಿಗಾಗಿ 400 ಮೀಟರ್ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಆದರೆ ಈ ಟ್ರ್ಯಾಕ್‌ ಸುತ್ತ ಬ್ಯಾರಿಕೇಡ್ ಹಾಕಿ ಒಳ ಪ್ರವೇಶ ನಿಷೇಧ ಮಾಡಿದ್ದಾರೆ. ಕೂಡಲೇ ಬ್ಯಾರಿಕೇಡ್‌ ತೆರವುಗೊಳಿಸಿ ಅಭ್ಯಾಸಕ್ಕೆ ಅನುವು ಮಾಡಿಕೊಡಬೇಕು ಎಂಬುದು ಅರ್ಜಿದಾರರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In Kanteerava stadium Sports ministry builted a 400 meters synthetic track, but not allowing athletes to practice on the track. so the coaches and the athletes go to court to allow athletes to practice on the track.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ