ಡಿ.23ರಿಂದ 25ರವರೆಗೆ ಬೆಂಗಳೂರಿನಲ್ಲಿ ಜ್ಯೋತಿಷ್ಯ ಸಮಾವೇಶ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 22: ಡಿಸೆಂಬರ್ 23ರಿಂದ 25ರವರೆಗೆ ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿರುವ ಶಿಕ್ಷಕರ ಸದನದಲ್ಲಿ ಜ್ಯೋತಿಷ್ಯ, ವಾಸ್ತು ಮತ್ತು ಹಸ್ತಸಾಮುದ್ರಿಕಾ ಸಮಾವೇಶ ಆಯೋಜಿಸಲಾಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿರುವ ದಿವ್ಯಜ್ಯೋತಿ ಜ್ಯೋತಿಷ್ಯ ಕಾಲೇಜು ಈ ಸಮಾವೇಶವನ್ನು ಆಯೋಜನೆ ಮಾಡುತ್ತಿದೆ.

ಜ್ಯೋತಿಷ್ಯಶಾಸ್ತ್ರ, ವಾಸ್ತು ಮತ್ತು ಹಸ್ತಸಾಮುದ್ರಿಕಾ ಶಾಸ್ತ್ರಗಳ ಬಗೆಗೆ ಇರುವ ಅಜ್ಞಾನವನ್ನು ನಿವಾರಿಸಿ ಈ ವಿದ್ಯೆಗಳ ಸ್ಥಾನಮಾನವನ್ನು ಉನ್ನತೀಕರಿಸುವ ಉದ್ದೇಶದೊಂದಿಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಸಮಾವೇಶ ನಡೆಯಲಿದೆ. ಜ್ಯೋತಿಷ್ಯ, ವಾಸ್ತು ಮತ್ತು ಹಸ್ತಸಾಮುದ್ರಿಕಾ ಕ್ಷೇತ್ರದಲ್ಲಿ ಪರಿಣತರಾದ ತಜ್ಞರು ಪಾಲ್ಗೊಂಡು, ಪ್ರಬಂಧಗಳನ್ನು ಮಂಡಿಸಲಿದ್ದಾರೆ.[ವರ್ಷ ಭವಿಷ್ಯ: ನರೇಂದ್ರ ಮೋದಿಗೆ 2017 ಹೇಗಿರುತ್ತೆ?]

Astrology convention in Bengaluru from Dec 23rd

ರಾಜಸ್ತಾನದ ರೂಪ್ ಚಂದ್ ಜೀ ಮಹಾರಾಜ್ ಸ ರಜತ್, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಭಾಗವಹಿಸಲಿದ್ದಾರೆ.ಜ್ಯೋತಿಷ್ಯದ ಮಹತ್ವ ತಿಳಿಯಬೇಕು ಎಂಬ ಕಾರಣಕ್ಕಾಗಿಯೇ ಕಳೆದ ಒಂಬತ್ತು ವರ್ಷಗಳಿಂದ ದಿವ್ಯಜ್ಯೋತಿ ಜ್ಯೋತಿಷ್ಯ ಶಾಸ್ತ್ರ ಕಾಲೇಜು ಸಮಾವೇಶಗಳನ್ನು ನಡೆಸುತ್ತಾ ಬಂದಿದೆ.[ರಾಹುಲ್ ಗಾಂಧಿಗೆ ಸಾಡೇಸಾತಿ ಶನಿ ಶುಭ ತರುತ್ತಾ?]

ಈ ಬಾರಿ ನಡೆಯುತ್ತಿರುವುದು ದಶಮಾನೋತ್ಸವ ಸಮಾವೇಶವಾಗಿದೆ. ಇನ್ನು ಈ ಸಮಾವೇಶದ ಬಗ್ಗೆ ಹೆಚ್ಚಿನ ಮಾಹಿತಿಗೆ ದೂ. 080-26766942, ಮೊ 9880036227 ಸಂಪರ್ಕಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Astrology convention in Bengaluru from December 23rd to 25th. Three days convention organised by Divyajyothi astrology college.
Please Wait while comments are loading...