ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

“ಶಾಂತಿನಗರ” ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆ

By Mahesh
|
Google Oneindia Kannada News

ಬೆಂಗಳೂರು, ಮೇ 05: ಆಮ್ ಆದ್ಮಿ ಪಕ್ಷದ ವತಿಯಿಂದ ಇಂದು ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ರಾಜಕೀಯ ವ್ಯವಹಾರಗಳ ಉಸ್ತುವಾರಿ ಹಾಗೂ ರಾಜ್ಯ ಸಹ ಸಂಚಾಲಕರಾದ ಶಿವಕುಮಾರ್ ಚೆಂಗಲರಾಯ, ಆಮ್ ಆದ್ಮಿ ಪಕ್ಷದ ಶಾಂತಿನಗರ ವಿಧಾನಸಭಾ ಕ್ಷೇತ್ರದ ಆಭ್ಯರ್ಥಿ ರೇಣುಕಾ ವಿಶ್ವನಾಥನ್ ಹಾಗೂ ಖ್ಯಾತ ನಗರ ಯೋಜನಾ ತಜ್ಞ ಅಶ್ವಿನ್ ಮಹೇಶ್, ನೇತೃತ್ವದಲ್ಲಿ ಶಾಂತಿ ನಗರ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.

ಶಾಂತಿನಗರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶ್ರೀಮತಿ ರೇಣುಕಾ ವಿಶ್ವನಾಥನ್ ಮತ್ತು ಪಕ್ಷದ ಕಾರ್ಯಕರ್ತರು, ಕ್ಷೇತ್ರದ 30,000 ಮನೆಗಳಿಗೆ ಹೋಗಿ, ನಂತರ ಸುಮಾರು 70,000 ಜನರೊಂದಿಗೆ ದೂರವಾಣಿ ಮುಖಾಂತರ ಜನರ ಸಮಸ್ಯೆಗಳನ್ನು ಆಲಿಸಿದರು.

ಪ್ರಜಾಪ್ರಭುತ್ವ ಹಾಳುಗೆಡವಲು ಮೂರು ಪಕ್ಷಗಳು ಹೊರಟಿವೆ: ಎಎಪಿ ಪ್ರಜಾಪ್ರಭುತ್ವ ಹಾಳುಗೆಡವಲು ಮೂರು ಪಕ್ಷಗಳು ಹೊರಟಿವೆ: ಎಎಪಿ

ಜೊತೆಗೆ ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ವಾಟ್ಸಾಪ್, ಎಸ್.ಎಂ.ಎಸ್. ಐ.ವಿ.ಆರ್. ಇತ್ಯಾದಿ ಉಪಯೋಗಿಸಿಕೊಂಡು, ಕ್ಷೇತ್ರದ ಮತದಾರರೊಂದಿಗೆ, ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಇತರ ಆಸಕ್ತ ಗುಂಪುಗಳ ಸಂಪರ್ಕ ಬೆಳೆಸಿ ಅವರೆಲ್ಲರ ಸಮಸ್ಯೆ, ಆತಂಕ, ಆಶೋತ್ತರಗಳನ್ನು ತಿಳಿದುಕೊಂಡು, ಅವುಗಳನ್ನೆಲ್ಲಾ ಮಾಡಬಲ್ಲ ಕೆಲಸದ ರೂಪಕ್ಕೆ ಇಳಿಸಿ, ಆದ್ಯತೆಗನುಸಾರವಾಗಿ ವಾರ್ಡ್‌ವಾರು ಪ್ರಣಾಳಿಕೆ ಮಾಡಲಾಯಿತು.

AAP releases Election Manifesto for Shanthinagar Constituency

ಸಂಪೂರ್ಣ ಕ್ಷೇತ್ರ ಅವರ ದೃಷ್ಟಿಯಲ್ಲಿದ್ದರೂ ಸಹ ಶಾಂತಿನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡುಗಳಲ್ಲೂ ಸಮಸ್ಯೆಗಳಲ್ಲಿ ಸಾಮ್ಯತೆ ಇರದೇ ತೊಂದರೆಗಳು ವಾರ್ಡ್‌ನಿಂದ ವಾರ್ಡ್‌ಗೆ ಭಿನ್ನವಾಗಿಯೂ ಇರುವುದು ಕಂಡು ಬಂತು, ಹಾಗಾಗಿ ಸಂಪೂರ್ಣ ಶಾಂತಿನಗರಕ್ಕೆ ಒಂದು ಪ್ರಣಾಳಿಕೆ ಮತ್ತು ಪ್ರತಿಯೊಂದು ವಾರ್ಡಿಗೂ ಪ್ರತ್ಯೇಕ ಆಶ್ವಾಸನೆಗಳ ಪಟ್ಟಿ ತಯಾರಿಸಿದ್ದಾರೆ.

ಅದೇ ರೀತಿ ಕಸ ನಿರ್ವಹಣೆಗೆ, ರಾಜಾಕಾಲುವೆ ಮತ್ತು ನಾಲೆಗಳಿಗೆ, ಸಂಚಾರ ದಟ್ಟಣೆಗೆ ಪ್ರತ್ಯೇಕ ದೂರದೃಷ್ಟಿಯ ಪಟ್ಟಿ ತಯಾರಿಸಿದ್ದಾರೆ. ಅದರ ಪರಿಣಾಮವೇ ಶಾಂತಿ ನಗರದ ಪ್ರಣಾಳಿಕೆ.

ಕ್ಷೇತ್ರ ಪರಿಚಯ: ಶಾಂತಿನಗರದಲ್ಲಿ ಬದಲಾವಣೆ ಸಾಧ್ಯವೇ? ಕ್ಷೇತ್ರ ಪರಿಚಯ: ಶಾಂತಿನಗರದಲ್ಲಿ ಬದಲಾವಣೆ ಸಾಧ್ಯವೇ?

ಉದಾ: ಶಾಂತಿನಗರದಲ್ಲಿ ಅಕ್ಕಿತಿಮ್ಮನಹಳ್ಳಿಯಲ್ಲಿ ಉದ್ಯಾನವನದ ಅಭಿವೃದ್ಧಿಯ ಅವಶ್ಯಕತೆ ಇದ್ದರೆ, ನೀಲಸಂದ್ರದಲ್ಲಿ ಸಮುದಾಯ ಭವನ/ಕಲ್ಯಾಣ ಭವನ ಹಾಗೂ ದೊಮ್ಮಲೂರು ಫ್ಲೈ ಓವರ್ ಬಳಿ ಎಲ್ಲಾ ಕಡೆಯಿಂದ ಸುರಕ್ಷಿತ ಪಾದಚಾರಿ ದಾಟುವಿನ ಅವಶ್ಯಕತೆ ಕಂಡುಬಂತು. ಇದೇ ರೀತಿಯಲ್ಲಿ ಅಗರಂ, ವನ್ನಾರ್ಪೇಟೆ, ಶಾಂತಲಾನಗರ, ಜೋಗುಪಾಳ್ಯಗಳಿಗೂ ಗಮನ ನೀಡಲಾಗಿದೆ.

ಬೆಂಗಳೂರಿನ ಇತಿಹಾಸದಲ್ಲಿ ಬಹುಶಃ ಪ್ರಥಮ ಬಾರಿಗೆ ಇಂತಹ ಒಂದು ಪರಿಕಲ್ಪನೆ ಜಾರಿಗೆ ಬಂದಿದೆ. ಆಮ್ ಆದ್ಮಿ ಪಕ್ಷ ತನ್ನ ಕೆಲಸದಲ್ಲಿ ಯಾವಾಗಲೂ ಹೊಸ ಪರಿಯ ಚಿಂತನೆ ನಡೆಸುತ್ತಿದ್ದು, ತನ್ನ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಹೇಗೆ ಹೆಚ್ಚಿನ ಜನರಿಗೆ ಸಹಾಯ ಮಾಡಬಹುದು ಅದಕ್ಕೆ ಗಮನ ಹರಿಸುತ್ತದೆ. ಈ ಪ್ರಣಾಳಿಕೆ ಜನರ ಸಹಭಾಗಿತ್ವದಿಂದ, ಸಹಕಾರದಿಂದ ತಯಾರಿಸಲ್ಪಟ್ಟಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಆಮ್ ಆದ್ಮಿ ಪಕ್ಷಕ್ಕೆ ಅವಕಾಶ ಕೊಡಿ, ವ್ಯತ್ಯಾಸ ನೋಡಿ.

English summary
Karnataka Assembly Elections 2018: AAP Karnataka today released Election Manifesto for Shanthinagar Constituency. Renuka Vishwanath is contesting from this constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X