ಹಲ್ಲೆ ಪ್ರಕರಣ: ನಟ ದುನಿಯಾ ವಿಜಯ್ ಬಂಧನ, ಬಿಡುಗಡೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 15: ಮಾಸ್ತಿಗುಡಿ ನಿರ್ಮಾಪಕ ಪಿ ಸುಂದರ್ ಅವರ ಸಂಬಂಧಿ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ವಿರುದ್ಧ ಪ್ರಕರಣ ದಾಖಲಾಗಿರುವ ಸುದ್ದಿ ಫಿಲ್ಮಿಬೀಟ್ ನಲ್ಲಿ ಓದಿರುತ್ತೀರಿ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಧ್ಯಾಹ್ನ ವಿಜಯ್ ಅವರನ್ನು ಬಂಧಿಸಲಾಗಿತ್ತು. ನಂತರ ಸ್ಟೇಷನ್ ಬೇಲ್ ಪಡೆದು ಠಾಣೆಯಿಂದ ಹೊರಬಂದಿದ್ದಾರೆ.[ದುನಿಯಾ ವಿಜಯ್ ವಿರುದ್ಧ 'ಗೂಂಡಾಗಿರಿ' ಆರೋಪ ಏಕೆ!?]

Assault Case : Duniya Vijay arrested gets Station Bail

ಹಲ್ಲೆಗೊಳಗಾದ ವ್ಯಕ್ತಿ ಜಯರಾಮ್ ಅವರ ಸಂಬಂಧಿಕರು ನೀಡಿದ ದೂರಿದಂತೆ ಚನ್ನಮ್ಮನಕೆರೆ ಆಚ್ಚುಕಟ್ಟು ಠಾಣೆಯಲ್ಲಿ ವಿಜಯ್ ವಿರುದ್ಧ ಐಪಿಸಿ 323, 504, 506, 509 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಫ್'ಐಆರ್ ಹಾಕಲಾಗಿತ್ತು.

ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಪಿ.ಸುಂದರ್‌ ಅವರ ಅಣ್ಣನ ಮಾವನ ಮೇಲೆ ಗಂಭೀರ ಹಲ್ಲೆ ನಡೆಸಿದ ಆರೋಪದ ಹಿನ್ನಲೆಯಲ್ಲಿ ಬಂಧನಕ್ಕೊಳಗಾಗಿದ್ದ ವಿಜಯ್ ಅವರಿಗೆ ಠಾಣೆಯಲ್ಲೇ ಜಾಮೀನು ಸಿಕ್ಕಿದೆ. ತನಿಖಾಧಿಕಾರಿಗಳು ಕರೆದಾಗಲೆಲ್ಲಾ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿದೆ. ಸಿನಿಮಾದಲ್ಲಿ ಹೀರೋ ಆಗಿರುವುದು ನೀವು ಇತರರಿಗೆ ಮಾದರಿಯಾಗಿರಬೇಕು ಎಂದು ಠಾಣಾಧಿಕಾರಿಗಳು ವಿಜಯ್ ಅವರಿಗೆ ಬುದ್ಧಿವಾದ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
CK Achukattu police arrested Duniya Vijay in an assault case. later Vijay gets Station Bail. Vijay allegedly involved in family matter of 'Maasti Gudi' Producer Sundar.P.Gowda's brother Shankar Gowda and Manasa. Manasa's mother Yashodamma has alleged that Duniya Vijay has assaulted her husband Jayaram.
Please Wait while comments are loading...