ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಮ್ಮ ಪ್ರಶ್ನೆ, ಮಲ್ಲೇಶ್ವರ ಶಾಸಕ ಅಶ್ವತ್ಥ ನಾರಾಯಣರ ಉತ್ತರ

By Prasad
|
Google Oneindia Kannada News

ಬೆಂಗಳೂರು, ಆಗಸ್ಟ್ 10 : ಇದೇ ತಿಂಗಳ 22ರಂದು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ 198 ವಾರ್ಡುಗಳಿಗೆ ಚುನಾವಣೆ ನಡೆಯಲಿದೆ. ಬೆಂಗಳೂರನ್ನು ಅತ್ಯುತ್ತಮವಾಗಿ ನಡೆಸಬಲ್ಲ, ತನ್ನ ವಾರ್ಡಿನ ಯೋಗಕ್ಷೇಮವನ್ನು ಐದು ವರ್ಷಗಳ ಕಾಲ ನೋಡಿಕೊಳ್ಳಬಲ್ಲ 'ದಕ್ಷ' ವ್ಯಕ್ತಿಯನ್ನು ಚುನಾಯಿಸುವ ಕರ್ತವ್ಯ ಬೆಂಗಳೂರಿನ ನಾಗರಿಕರ ಮೇಲಿದೆ.

ಆಯ್ಕೆಯಾಗುವ ಕಾರ್ಪೊರೇಟರಿಗೆ ತನ್ನ ವಾರ್ಡಿನ ಬಗ್ಗೆ ಎಷ್ಟು ಕಾಳಜಿ ಇರಬೇಕೋ, ಆಯಾ ವಾರ್ಡಿನಲ್ಲಿ ವಾಸಿಸುವ ನಾಗರಿಕರಿಗೂ ಅಷ್ಟೇ ಕಾಳಜಿ ಇರಬೇಕು ಮತ್ತು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿರಬೇಕು. ಸಮಸ್ಯೆ ಎಲ್ಲ ವಾರ್ಡುಗಳಲ್ಲಿಯೂ ಇದ್ದೇ ಇರುತ್ತದೆ, ಆದರೆ ಆ ಸಮಸ್ಯೆಯನ್ನು ಪ್ರತಿನಿಧಿ ಬಳಿಗೆ ತೆಗೆದುಕೊಂಡು ಹೋಗಿ ಪರಿಹಾರ ಕಂಡುಕೊಳ್ಳುವ ದರ್ದು ಕೂಡ ಇರಬೇಕು.

ನಿಮ್ಮ ವಾರ್ಡಿನ ರಸ್ತೆ, ಕಸ ವಿಲೇವಾರಿ, ನೀರು ಸರಬರಾಜು, ಭ್ರಷ್ಟಾಚಾರ, ಮಾಯವಾಗುತ್ತಿರುವ ಹಸಿರು, ವಾಹನ ದಟ್ಟಣೆ, ಹಣ ದುರ್ಬಳಕೆ, ಸರಗಳ್ಳತನ, ಮಾಯವಾಗುತ್ತಿರುವ ಕೆರೆಗಳು, ಪಾದಚಾರಿ ರಸ್ತೆ, ಮಹಿಳೆಯರು ಇತರರ ಸುರಕ್ಷತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು, ಎಲ್ಲ ಸುಸ್ಥಿತಿಯಲ್ಲಿ ಇದೆಯಾ? ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿವೆಯಾ? [ಡಾ. ಅಶ್ವತ್ಥ ನಾರಾಯಣ ಸಂದರ್ಶನ]

Ashwath Narayan will answer your queries on BBMP polls

ಪ್ರಶ್ನೆಗಳಿದ್ದರೆ ಆಗಸ್ಟ್ 12, ಬುಧವಾರದಂದು ಸರಿಯಾಗಿ ಸಂಜೆ 5ಗಂಟೆಗೆ ಫೇಸ್ ಬುಕ್ಕಿಗೆ ಬನ್ನಿ. ಅಲ್ಲಿ ನಿಮಗಾಗಿ ಮಲ್ಲೇಶ್ವರದ ಶಾಸಕ ಡಾ. ಅಶ್ವತ್ಥ ನಾರಾಯಣ ಅವರು ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲು ಕಾದಿರುತ್ತಾರೆ. ಅಶ್ವತ್ಥ ಅವರು ನಾಗರಿಕರೊಡನೆ ಫೇಸ್ ಬುಕ್ಕಿನಲ್ಲಿ ಲೈವ್ ಚಾಟ್ ಮಾಡಲಿದ್ದಾರೆ. [ಬಿಬಿಎಂಪಿ ಚುನಾವಣೆ ಕುರಿತ ಎಲ್ಲ ಲೇಖನಗಳು]

ಎಲ್ಲಕ್ಕಿಂತ ಪ್ರಮುಖವಾಗಿ ಬಾಂಗ್ಲಾದೇಶದ ನಾಗರಿಕರು ಬೆಂಗಳೂರಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಭಾನುವಾರ ಒಂದಿಡೀ ರೈಲು ಹೌರಾದಿಂದ ಸಾವಿರಾರು ಆಕಡೆಯ ಜನರನ್ನು ಹೊತ್ತುಕೊಂಡು ಬೆಂಗಳೂರಿಗೆ ತಂದು ಬಿಟ್ಟಿದೆ. ಯಾವುದಕ್ಕೂ ನಮ್ಮ ರಕ್ಷಣೆಯಲ್ಲಿ ನಾವಿರಬೇಕಿರುವುದು ನಮ್ಮ ಕರ್ತವ್ಯ. [ಈ 'ವಿಶೇಷ ಅತಿಥಿ'ಗಳ ಮೇಲೆ ಕಣ್ಣು ಇಡುವವರು ಯಾರು?]

English summary
Are you resident of Bengaluru? Do you have any question about BBMP election? Are you satisfied with work done in your area? Malleshwaram Ashwath Narayan will answer all your queries on BBMP polls on 12th August, 2015 at 5 pm on Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X