ಬಸವನಗುಡಿಯ ಅಭಿನವದಲ್ಲಿ ಭಾನುವಾರ ಸಂಜೆ 4ಕ್ಕೆ ಅಷ್ಟಾವಧಾನ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 26 : ಪದ್ಯಪಾನ, ಬೆಂಗಳೂರು ಇವರಿಂದ ಆಗಸ್ಟ್ 27ರ ಭಾನುವಾರ ಸಂಜೆ 4 ಗಂಟೆಗೆ ಬಸವನಗುಡಿಯ ಈ.ಎ.ಟಿ. ಸ್ಟ್ರೀಟ್ ನಲ್ಲಿರುವ ಅಭಿನವದಲ್ಲಿ ಅಷ್ಟಾವಧಾನ ಆಯೋಜಿಸಲಾಗಿದೆ.

ಸಂಸ್ಕೃತ ಮತ್ತು ಸಂಸ್ಕೃತಿ ಪೋಷಿಸುತ್ತಿದೆ ಶೃಂಗೇರಿ ಕಾಲೇಜು

ಶತಾವಧಾನಿ ಡಾ.ಆರ್.ಗಣೇಶ್ ಅವಧಾನಿಗಳಾಗಿ ಭಾಗವಹಿಸಲಿದ್ದಾರೆ. ಇನ್ನು ಅಷ್ಟಾವಧಾನದಲ್ಲಿ ಭಾಗವಹಿಸುವವರ ವಿವರ ಇಂತಿದೆ.

Ashtavadhana at Basavanagudi Abhinava on Sunday 4 PM

ಕಾವ್ಯವಾಚನ- ಕಶ್ಯಪ್ ನಾಯಕ್

ಅಪ್ರಸ್ತುತ ಪ್ರಸಂಗ- ಬಿ.ಎನ್.ಶಶಿಕಿರಣ್

ಆಶುಕವಿತೆ: ಅರ್ಜುನ್ ಭಾರದ್ವಾಜ್

ನಾಟಕ ವಾಚನ: ಸೋಮಶೇಖರ ಶರ್ಮಾ

ಉದ್ದಿಷ್ಟಾಕ್ಷರಿ: ಜಿ.ಎಸ್.ರಾಘವೇಂದ್ರ

ದತ್ತಪದಿ: ಶ್ರೀಶ ಕಾರಂತ

ಸಮಸ್ಯಾಪೂರಣ: ಕೆಬಿಎಸ್ ರಾಮಚಂದ್ರ

ನಿಷೇಧಾಕ್ಷರಿ: ಅಷ್ಟಾವಧಾನಿ ಗಣೇಶ ಭಟ್ಟ ಕೊಪ್ಪಲತೋಟ

ಅವಧಾನ ಎಂಬುದು ಭಾರತೀಯ ಪರಂಪರೆಯಲ್ಲಿ ಕಂಡುಬರುವ ಅಪರೂಪದ ಕಲೆ. ಅದನ್ನು ನೋಡುವುದು, ಅದರಲ್ಲೂ ಮಕ್ಕಳನ್ನು ಕರೆದುಕೊಂಡು ಹೋಗಿ ನೋಡುವುದು ಖುಷಿ ಕೊಡುವ ಸಂಗತಿ. ಅದೇನು ಮೆದುಳೋ ಅಥವಾ ಕಂಪ್ಯೂಟರೋ (ಅವಧಾನವನ್ನು ಇಷ್ಟು ರಸವತ್ತಾಗಿ ಕಂಪ್ಯೂಟರ್ ಸಹ ಮಾಡಲು ಸಾಧ್ಯವಿಲ್ಲ) ಎಂದು ಉದ್ಗಾರ ತೆಗೆಯುವಂತಾಗದಿದ್ದರೆ ಹೇಳಿ.

ಜಾನಪದ ವಿವಿಯಲ್ಲಿ 3 ವರ್ಷದ ಯಕ್ಷಗಾನ ಡಿಪ್ಲೊಮಾ ಕೋರ್ಸ್

ಅದರಲ್ಲೂ ಶತಾವಧಾನಿ ಗಣೇಶ್ ಅವರು ನಡೆಸಿಕೊಡುವ ಅವಧಾನವನ್ನು ಕಣ್ಣಾರೆ ನೋಡಿಯೇ ಅನುಭವಿಸಬೇಕು. ವಾರಾಂತ್ಯದ ಭಾನುವಾರ. ಬಿಡುವು ಮಾಡಿಕೊಂಡು ಹೋಗಿಬನ್ನಿ. ಇದು ಖಂಡಿತಾ ಅಪರೂಪದ ಅವಕಾಶ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ashtavadhana at Basavanagudi Abhinava on Sunday 4 PM by Shatavadhani R Ganesh. It is a wonderful occasion to know, see and enjoy the Indian traditional knowledge.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ