ಆಶಾ ಕಾರ್ಯಕರ್ತೆಯರ ಮುಷ್ಕರ ವಾಪಸ್

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 9: ಕಳೆದೆರಡು ದಿನಗಳಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಮುಷ್ಕರ ಹಿಂಪಡೆಯಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳ ನಡುವೆ ಶುಕ್ರವಾರ (ಸೆಪ್ಟೆಂಬರ್ 9) ನಡೆದ ಮಾತುಕತೆ ಫಲಪ್ರದವಾಗಿದ್ದು, ಆಶಾ ಕಾರ್ಯಕರ್ತೆಯರ ಬೇಡಿಕೆಯನ್ನು ರಾಜ್ಯ ಸರ್ಕಾರ ಒಪ್ಪಿದ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆಯಲು ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಾಗಲಕ್ಷ್ಮಿ ತಿಳಿಸಿದ್ದಾರೆ.

ಭಾರಿ ಮಳೆಯ ಮಧ್ಯೆ ಮುಂದುವರಿದ ಆಶಾ ಕಾರ್ಯಕರ್ತರ ಧರಣಿ

ರಾಜ್ಯ ಸರ್ಕಾರ ಒಪ್ಪಿರುವ ಬೇಡಿಕೆಗಳು ಹೀಗಿವೆ:

- ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಮಾಸಿಕ ಭತ್ಯೆಯನ್ನು 3,500 ರು.ಗಳಿಗೆ ಹೆಚ್ಚಿಸಲು ನಿರ್ಧಾರ.

- ತಕ್ಷಣಕ್ಕೆ ಜಾರಿಯಾಗುವಂತೆ ಮಾಸಿಕ 3,500 ಸಾವಿರಕ್ಕೆ ಭತ್ಯೆ ಹೆಚ್ಚಳ; ಮುಂದೆ ಭತ್ಯೆ 6 ಸಾವಿರಕ್ಕೆ ಹೆಚ್ಚಳ.

- ಮಾಸಿಕ ಬಸ್ ಪಾಸ್ ಸೌಲಭ್ಯ

- ಸದ್ಯಕ್ಕೆ ಚಾಲ್ತಿಯಲ್ಲಿರುವ ಆಶಾ ಸಾಫ್ಟ್ ವೇರ್ ಅನ್ನು ಮೂರು ತಿಂಗಳಲ್ಲಿ ಹಿಂಪಡೆಯಲು ನಿರ್ಧಾರ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The protest of Asha workers has been called-off as state government agreed to their demand. According to this, Asha workers will get Rs. 3500 allowance per month with immediate effect.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ