ಮಧುಮೇಹ ಚಿಕಿತ್ಸೆಗೆ ಕೇಜ್ರಿವಾಲ್ ಮತ್ತೆ ಬೆಂಗಳೂರಿಗೆ

Subscribe to Oneindia Kannada

ಬೆಂಗಳೂರು, ಫೆಬ್ರವರಿ 5: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಚಿಕಿತ್ಸೆಗಾಗಿ ಮತ್ತೊಮ್ಮೆ ಬೆಂಗಳೂರಿಗೆ ಬರಲಿದ್ದಾರೆ. ಅವರ ರಕ್ತದಲ್ಲಿ ಸಕ್ಕರೆ ಅಂಶ ವಿಪರೀತ ಹೆಚ್ಚಾಗಿರುವುದರಿಂದ ಉದ್ಯಾನ ನಗರಿಯಲ್ಲಿ ದೀರ್ಘ ಕಾಲದ ಚಿಕಿತ್ಸೆ ಪಡೆಯಲಿದ್ದಾರೆ.

ಫೆಬ್ರವರಿ 7 ರಂದು ದೆಹಲಿ ಬಿಡಲಿರುವ ಕೇಜ್ರಿವಾಲ್ ಅಲ್ಲಿಂದ ನೇರ ಬೆಂಗಳೂರಿಗೆ ಬರಲಿದ್ದಾರೆ. ಇಲ್ಲಿ 10 -12 ದಿನಗಳ ಕಾಲ ಻ಅವರು ಸಕ್ಕರೆ ಕಾಯಿಲೆಗೆ ಚಿಕಿತ್ಸೆ ಪಡೆಯಲಿದ್ದಾರೆ. ನಂತರ ದೆಹಲಿಗೆ ವಾಪಾಸಾಗಲಿದ್ದಾರೆ. [ಗೋವಾ: ಭಾಷಣದಲ್ಲಿ ಲಂಚದ ಪ್ರಸ್ತಾಪ; ಕೇಜ್ರಿವಾಲ್ ಮೇಲೆ ಎಫ್ಐಆರ್]

Arvind Kejriwal undergo treatment in Bengaluru

ಪಂಜಾಬ್ ಮತ್ತು ಗೋವಾದಲ್ಲಿ ಇತ್ತೀಚೆಗೆ ಕೇಜ್ರಿವಾಲ್ ಆಕ್ರಮಣಕಾರಿ ಮತ ಪ್ರಚಾರ ನಡೆಸಿದ್ದರು. ಎರಡೂ ರಾಜ್ಯಗಳಲ್ಲಿ ಶನಿವಾರ ಚುನಾವಣೆ ಅಂತ್ಯವಾಗಿರುವುದರಿಂದ ಅವರೀಗ ನಿರಾಳವಾಗಿ ಸ್ವಲ್ಪ ದಿನಗಳ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಈ ಹಿಂದೆ ಕೆಮ್ಮಿನ ಚಿಕಿತ್ಸೆಗಾಗಿ ಕೇಜ್ರಿವಾಲ್ ಜಿಂದಾಲ್ ಆಸ್ಪತ್ರೆಯಲ್ಲಿ ಸುಮಾರು 15 ದಿನಗಳನ್ನು ಕಳೆದಿದ್ದರು. [ಅರವಿಂದ್ ಕೇಜ್ರಿವಾಲ್ ಪರಮಾಪ್ತನನ್ನು ಬಂಧಿಸಿದ ಸಿಬಿಐ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi Chief Minister Arvind Kejriwal will be arriving in Bengaluru for treatment, as his blood sugar levels are reportedly high.
Please Wait while comments are loading...