13ರಂದು 'ಮೇಕ್ ಇನ್ ಇಂಡಿಯಾ- ಕರ್ನಾಟಕ' ಸಮ್ಮೇಳನಕ್ಕೆ ಚಾಲನೆ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 10: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ 'ಮೇಕ್ ಇನ್ ಇಂಡಿಯಾ'ದ ಪ್ರೇರಣೆಯಿಂದ ಆಯೋಜಿಸಲಾಗಿರುವ 'ಮೇಕ್ ಇನ್ ಇಂಡಿಯಾ- ಕರ್ನಾಟಕ' ಎಂಬ ಎರಡು ದಿನಗಳ ಸಮ್ಮೇಳನವನ್ನು ಫೆ. 13ರಂದು ಕೇಂದ್ರ ಸರ್ಕಾರದ ಅರುಣ್ ಜೇಟ್ಲಿ ಉದ್ಘಾಟಿಸಲಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಎಂ. ವೆಂಕಯ್ಯ ನಾಯ್ಡು, ಸುರೇಶ್ ಪ್ರಭು, ಅನಂತ ಕುಮಾರ್ ಭಾಗವಹಿಸಲಿದ್ದಾರೆ.

Arun Jaitley will inaugurates Make in India- Karnataka Conference

ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದ ಕೈಗಾರಿಕಾ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ, ''ಎರಡು ದಿನಗಳ ಈ ಸಮ್ಮೇಳನದಲ್ಲಿ ಹತ್ತು ಸೆಷನ್ ಗಳಿರುತ್ತವೆ. ಇದರಲ್ಲೊಂದು ಮೇಕ್ ಇಂಡಿಯಾ ವಿಷಯಾಧಾರಿತವಾಗಿರುತ್ತದೆ. ಇನ್ನುಳಿದ ಒಂಭತ್ತು ಸೆಷನ್ ಗಳಲ್ಲಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಹಾಗೂ ಬೆಳವಣಿಗೆಗೆ ಇರುವ ಅವಕಾಶಗಳು ಇರುವುದನ್ನು ವಿಶೇಷವಾಗಿ ಹೇಳಲಾಗುತ್ತದೆ'' ಎಂದು ತಿಳಿಸಿದರು. ಸಮ್ಮೇಳನಕ್ಕೆ ಸುಮಾರು 4 ಸಾವಿರ ಉದ್ಯಮ ಪ್ರತಿನಿಧಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka government has organised two days conference named Make in India-Karnataka from February 13. Union Minister for Finance and Corporate Affairs Arun Jaitely will inaugurate the conference.
Please Wait while comments are loading...