ಚಿತ್ರಸಂತೆಯಲ್ಲಿ ನನಗಾದ ಸಿಹಿ ಕಹಿ ಅನುಭವ: ಕಲಾವಿದ ಅಶೋಕ್

By: ಅಶೋಕ್. ಯು
Subscribe to Oneindia Kannada

ಚಿತ್ರಸಂತೆಯಲ್ಲಿ ನಡೆದ ಒಂದು ಘಟನೆಯನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. ನಾವು ಕಲಾವಿದರಾಗಿ ನಮ್ಮ ಕ್ಷೇತ್ರದಲ್ಲಿ ನಮ್ಮನ್ನು ಗುರುತಿಸಿಕೊಳ್ಳಲು ನಾವು ಮಾಡುವ ಸಾಹಸಗಳು ಅಷ್ಟಿಷ್ಟಲ್ಲ ಅದು ಆ ದೇವರಿಗೆ ಪ್ರಿಯ. ಇಲ್ಲಿಯವರೆಗೂ ನಾವು ಮಾಡಿದ ಕೆಲಸಗಳು ನೋಡಲು ಸುಂದರವಷ್ಟೇ, ಆದರೆ, ಅದರ ಬೇವರ ಹನಿ ನನಗೆ ಮಾತ್ರ ಗೊತ್ತು ಮತ್ತು ನನ್ನ ಜೊತೆ ಕೆಲಸಮಾಡಿದವರಿಗೆ ಗೊತ್ತು, ನನ್ನ ಕಲೆ ಮತ್ತು ಜೀವನದಲ್ಲಿ ಅದೆಷ್ಟು ಗಾಯದಮೇಲೆ ಬರೆಗಳನ್ನು ತಿಂದಿದ್ದಿನೋ......

ಯಾವುದೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಪ್ರಮೋಷನ್ ಗಳು ತುಂಬಾ ಕಡಿಮೆ ಅವರಿಗೆ ಬಡ್ತಿಯಂಥಾ ಸಿಗುವುದು ತಮ್ಮನ್ನು ತಾವು ದುಡಿಸಿಕೊಂಡು ಎಲ್ಲರೆದುರಿಗೆ ಗುರುತಿಸಿಕೊಳ್ಳುವುದಕ್ಕೆ ಸರಿ ಸುಮಾರು 15 ರಿಂದ 20 ವರ್ಷಗಳೆ ಬೇಕಾಗುತ್ತದೆ.

ಇಂಥಾ ಪರಿಸ್ಥಿತಿಯಲ್ಲಿ ಹಿಡಿ ಈ ವಾತಾವರಣವನ್ನೆ ಮುರಿದು ಹಾಕುವ ಸನ್ನಿವೇಶಗಳು ನಮ್ಮ ಮುಂದೇ ಎದ್ದು ನಿಂತಾಗ ನಮ್ಮ ಪರಿಸ್ಥಿತಿ ಏನಾಗಬಹುದು ಊಹಿಸಿ.[ಚಿತ್ರಸಂತೆ : ಕಲಾವಿದ ಕಲ್ಪನೆಯಲ್ಲಿ ಅರಳಿದ ಅದ್ಭುತ ದೃಶ್ಯಕಾವ್ಯ]

ನಾನು ನನ್ನ ಶಿಕ್ಷಣದ ನಂತರ (ನನ್ನ ಶಿಕ್ಷಣ 2000 ಪಾಸ್ ) ನನಗೆ ನನ್ನ ಸ್ಟೈಲ್ ಆಫ್ ವರ್ಕನ್ನು ಗುರುತಿಸಿಕೋಳ್ಳಲು 12 ವರ್ಷಗಳು ಬೇಕಾಯಿತು, ಆ 12 ವರ್ಷದಲ್ಲಿ ನಾನು ಮಾಡಿದ ಪ್ರಯೋಗಗಳು, ಕಳೆದುಕೊಂಡ ದುಡ್ಡು, ಸಮಯ ಅದೆಲ್ಲ ಮೌನದಲ್ಲೆ ಮುಳುಗಿದೆ.

ಅಂತು ಇಂತು ನನ್ನ ನಿರಂತರ ಪ್ರಯೋಗದಿಂದ ಸ್ಟ್ರೀಟ್ ಚಿತ್ರಗಳನ್ನು ಚಿತ್ರಿಸುವುದರಲ್ಲಿ ಒಂದು ಸ್ಟೈಲ್ ಗುರುತಿಸಿಕೊಂಡದ್ದು 2012 ರಲ್ಲಿ. ನಂತರದ ದಿನಗಳಲ್ಲಿ ನನ್ನ ಪೇಂಟಿಂಗ್ ಗಳಿಗೆ ಕೊಳ್ಳುವವರು ಸಿಕ್ಕಿದ್ದು ನನ್ನ ಭಾಗ್ಯ. ಅವರಲ್ಲಿ ಒಬ್ಬರು ಚಿತ್ರಸಂತೆಯಲ್ಲಿ ನನ್ನ 2 ಪೇಂಟಿಂಗ್ ಗಳನ್ನು ಕೊಂಡುಕೊಂಡು, ನಾನು ಮನೆಗೆ ಹೊಗುವಾಗ ಇವುಗಳನ್ನು ತೆಗೆದು ಕೊಂಡು ಹೋಗುತ್ತೇನೆ ಎಂದು ಹೇಳಿ ಸಂತೆಯಲ್ಲಿ ತಿರುಗಾಡಿಕೊಂಡು ನನ್ನಲ್ಲಿಗೆ ಬಂದರು.

ನಕಲಿ ಚಿತ್ರಕಲಾವಿದರ ಬಗ್ಗೆ ಎಚ್ಚರಿಕೆ

ನಕಲಿ ಚಿತ್ರಕಲಾವಿದರ ಬಗ್ಗೆ ಎಚ್ಚರಿಕೆ

ಅಶೋಕ್, ನಿನ್ನ ಪೇಂಟಿಂಗ್ ಗಳನ್ನ ಯಾರೋ ಒಬ್ಬರು ನಿನ್ನದೇ ಶೈಲಿಯಲ್ಲಿ ಪೇಂಟಿಂಗ್ ಗಳನ್ನು ಮಾಡುವ ಪ್ರಯತ್ನದಲ್ಲಿದ್ದಾರೆ ಅನಿಸುತ್ತಿದೆ ಅಲ್ಲಿ ಹೋಗಿ ನೋಡಿ ಎಂದರು.

ಸ್ವಲ್ಪ ಸಮಯ ಕಳೆದಮೇಲೆ ನಾನು ಚಿತ್ರಸಂತೆಯಲ್ಲಿ ಆ ವ್ಯಕ್ತಿಯನ್ನು ಹುಡುಕಲು ಹೊರಟೆ! ನನ್ನ ಕಣ್ಣುಗಳು ಕೇವಲ ಆ ಪೇಂಟಿಂಗ್ ಗಳನ್ನೆ ಹುಡುಕುತ್ತಿತ್ತು. ಕೊನೆಗೆ ಆ ಪೇಂಟಿಂಗ್ ಗಳು ನನ್ನ ಕಣ್ಣಿಗೆ ಬಿದ್ದವು, ನನ್ನ ಕಣ್ಣನ್ನು ನಾನೆ ನಂಬದಷ್ಟು ಆಶ್ಚರ್ಯ !

ನನ್ನವೇ ಪೇಂಟಿಂಗ್ ಗಳನ್ನು ನಕಲಿನಂತಿವೆ

ನನ್ನವೇ ಪೇಂಟಿಂಗ್ ಗಳನ್ನು ನಕಲಿನಂತಿವೆ

ಹೌದು, ಇವುಗಳು ನನ್ನವೇ ಪೇಂಟಿಂಗ್ ಗಳನ್ನು ನಕಲಿನಂತಿವೆ (ಸ್ಟೈಲ್ ಆಫ್ ವರ್ಕ್), ಕುತೂಹಲಕ್ಕೆ ಕಲಾವಿದನಾರು ಎಂದು ನೋಡಿ ಬಂದೆ, ಆಶ್ಚರ್ಯ ಮೂಡಿಸಿದ ವ್ಯಕ್ತಿ, ಎಲ್ಲೋ ನೋಡಿದ ಪರಿಚಯ.
ಏನ್ ಸರ್ ಅರಾಮ ಎನ್ನುವ ಮಾತಿನಲ್ಲಿ, ನೋಟದಲ್ಲಿ ಗಂಭೀರವಿತ್ತು... ಆ ಕಲಾವಿದನಿಂದ ಯಾವುದೇ ತರದ ಪ್ರತಿಕ್ರಿಯೆ ಬರಲ್ಲಿಲ್ಲ. ಮತ್ತು ನನಗೂ ಅಲ್ಲಿ ನಿಲ್ಲಬೇಕೆನ್ನಿಸಲ್ಲಿಲ್ಲ. ಇದು ಒಂದು ಕಲಾವಿದರಿಗೆ ಸಾಮಾನ್ಯ ವಿಚಾರ, ಆದರೆ ಪರಿಣಾಮ ಅಗಾಧವಾಗಿದೆ ಎಂದು ತಿಳಿಸಲು ಇಷ್ಟಪಡುತ್ತೇನೆ.

ಅರಗಿಸಿಕೊಳ್ಳಲಾಗದ ಒಂದು ಸಂಭ್ರಮ

ಅರಗಿಸಿಕೊಳ್ಳಲಾಗದ ಒಂದು ಸಂಭ್ರಮ

ಚಿತ್ರಸಂತೆ ಕೆಲವರಿಗೆ ಅರಗಿಸಿಕೊಳ್ಳಲಾಗದ ಒಂದು ಸಂಭ್ರಮ (ಫೆಸ್ಟಿವಲ್). ಬಹುತೇಕ ಕಲಾವಿದರಿಗೆ ಈ ಸಂತೆ ಕಲಾಕೃತಿಯ ಬೆಲೆಯನ್ನು ಕಳೆದುಕೊಳ್ಳುತ್ತಿರುವ ಸಂತೆಯಾಗಿದೆ, ಗ್ಯಾಲರಿಯ ಮಾಲಿಕರಿಗೆ ಅಗಾಧವಾದ ನಷ್ಟವಾಗುತ್ತಿದೆ.

* ಮುಖ್ಯವಾಗಿ ವಾರಂತ್ಯದ ಕಲಾವಿದರಿಗೆ ಮತ್ತು ಹವ್ಯಾಸಿ ಕಲಾವಿದರಿಗೆ ಬಹುದೊಡ್ಡ ಹಬ್ಬವಾಗಿ ಪರಿಣಮಿಸಿದೆ
* ಮಾರುಕಟ್ಟೆಗೆಂದೇ ಮಾಡಿರುವ ಕ್ರಾಫ್ಟ್ ಗಳ ಸಂಖ್ಯೆ ಜಾಸ್ತಿಯಾಗಿದೆ
* ಒಂದು ಕಲಾಕೃತಿ ಚೆನ್ನಾಗಿದ್ದರೆ ನಕಲು ಮಾಡಿ ಮಾರುಕಟ್ಟೆಗೆ ತರುವವರ ಸಂಖ್ಯೆ ಹೆಚ್ಚಿದೆ
* ಒಂದೇ ಅಳತೆಯ 2 ಕಲಾಕೃತಿಗಳ ಬೆಲೆಯ ವ್ಯತ್ಯಾಸವನ್ನು ಪಡೆಯುತ್ತವೆ.

ಹವ್ಯಾಸಿ ಕಲಾವಿದರ ಚಿತ್ರಕ್ಕೆ ಬೆಲೆ ಸಿಗುತ್ತಿದೆ

ಹವ್ಯಾಸಿ ಕಲಾವಿದರ ಚಿತ್ರಕ್ಕೆ ಬೆಲೆ ಸಿಗುತ್ತಿದೆ

ಮಾಧ್ಯಮದವರು ಹೆಚ್ಚಾಗಿ ವರ್ಣರಂಜಿತವಾದ ಕಲಾಕೃತಿಗಳನ್ನೆ ಬೆಳಕಿಗೆ ತರುತ್ತಾರೆ (ಮುದ್ರಣದ ದೃಷ್ಟಿಯಿಂದ), ಅವರೆಲ್ಲ ಹವ್ಯಾಸಿ ಕಲಾವಿದರಾಗಿರುತ್ತಾರೆ, ಇನ್ನ ಸಂವೇದನೆಯಲ್ಲಿರುವ ಕಲಾಕೃತಿಗಳಿಗೆ ಕಲಾವಿದರಿಗೆ ಬೆಲೆ ಎಲ್ಲಿ?

ಚಿತ್ರ ಸಂತೆ ಪ್ರೋಫೆಷನಲ್ ಕಲಾವಿದರಿಗೆ ಒಂದು ವೇದಿಕೆಯಾಗಲೆಂದೆ ಮಾಡಿರುವಂತದ್ದು, ಹಾಗೆ ಮಾಡಿದಲ್ಲಿ ಅಲ್ಲಿ ಉತ್ತಮವಾದ ಕಲಾಕೃತಿಗಳನ್ನು ನೋಡಬಹುದು, ಗ್ಯಾಲರಿಯವರಿಗೂ ಒಂದಷ್ಟು ಸ್ವಲ್ಪಮಟ್ಟದ ಕಡಿಮೆ ಬೆಲೆಗೆ ಮತ್ತು ಗುಣಮಟ್ಟದ ಕಲಾಕೃತಿಗಳು ಸಿಗಬಹುದು, ಕಲಾವಿದರು ಸಿಗಬಹುದು.

ಆ ದಿನ ಪೇಂಟಿಂಗ್ ಗಳನ್ನು ಕೊಳ್ಳಲಿಕ್ಕಾಗಿಯೇ ಬೇರೆ ಬೇರೆ ಸ್ಥಳಗಳಿಂದ ಬಂದವರ ಉದಾಹರಣೆಗಳಿವೆ. ಮುಖ್ಯವಾಗಿ ಶಿಸ್ತಿಲ್ಲದ ಕಲಾವಿದರು ಕಡಿಮೆಯಾಗುತ್ತಾರೆ

ಬಹಳ ಕಲಾವಿದರಿಗೆ ಜೀವನಕ್ಕೆ ದಾರಿಯಾಗಿದೆ

ಬಹಳ ಕಲಾವಿದರಿಗೆ ಜೀವನಕ್ಕೆ ದಾರಿಯಾಗಿದೆ

ನಮ್ಮ ಮಟ್ಟಿಗೆ ಚಿತ್ರಸಂತೆ ಬಹಳ ಕಲಾವಿದರಿಗೆ ಜೀವನಕ್ಕೆ ದಾರಿಯಾಗಿದೆ, ಈ ಸಂತೆ ಕೆಲವು ವಿಷಯಗಳಲ್ಲಿ ಬದಲಾವಣೆಯಾದಲ್ಲಿ ಇದು ದೇಶದಲ್ಲೆ ಅಲ್ಲ, ವಿಶ್ವ ಮಟ್ಟದಲ್ಲಿ ಅತಿದೊಡ್ಡ ಪೆಸ್ಟಿವಲ್ ಆಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಚಿತ್ರ ಸಂತೆ ಪ್ರೋಫೆಷನಲ್ ಕಲಾವಿದರಿಗೆ ಒಂದು ವೇದಿಕೆಯಾಗಲೆಂದೆ ಮಾಡಿರುವಂತದ್ದು, ಹಾಗೆ ಮಾಡಿದಲ್ಲಿ ಅಲ್ಲಿ ಉತ್ತಮವಾದ ಕಲಾಕೃತಿಗಳನ್ನು ನೋಡಬಹುದು.

ಕೃತಿ ನಕಲಿ ಮಾಡುವುದು ಹೊಸತೇನಲ್ಲ

ಕೃತಿ ನಕಲಿ ಮಾಡುವುದು ಹೊಸತೇನಲ್ಲ

ಕೃತಿ ನಕಲಿ ಮಾಡುವುದು ಹೊಸತೇನಲ್ಲ ಅದು ಹಿಂದಿನಿಂದಲೂ ಬಂದಿದೆ, ಹಾಗೆ ಒಂದು ಕಲಾ ಕೃತಿಯ ಇನ್ಸ್ ಪಿರೆಷನ್ ಪಡೆಯುವುದು ಮೊದಲ ದಿನಗಳಲ್ಲಿ ಅದರಂತೆ ಚಿತ್ರಿಸುವುದು ಸಹಜ, ಕಲಾಕೃತಿಯನ್ನು (ಪೇಂಟಿಂಗ್) ನಕಲು ಮಾಡುವಾಗ ಯಾವುದೆ ರೀತಿಯ ರಿಸ್ಟಿಕ್ಷನ್ ಇರುವುದಿಲ್ಲ, ಇನ್ಸಪಿರೆಷನ್ ಇರುತ್ತದೆ.

ಕಲಾಕೃತಿಯನ್ನು ನಕಲು ಮಾಡುವಾಗ ಯಾರೂ ಏನು ಕೇಳುವುದಿಲ್ಲ, ಒಂದು ಸಾಮಾನ್ಯ ಪೇಂಟಿಂಗ್ ನಕಲು ಮಾಡುವುದು ಒಂದು ಸ್ಟೈಲ್ ಆಫ್ ವರ್ಕನ್ನು ನಕಲು ಮಾಡುವುದರಲ್ಲಿ ತುಂಬಾ ವ್ಯತ್ಯಾಸವಿದೆ.

ಸ್ಟೈಲ್ ಆಫ್ ವರ್ಕ್ ನ ಅರ್ಥ

ಸ್ಟೈಲ್ ಆಫ್ ವರ್ಕ್ ನ ಅರ್ಥ

ಸ್ಟೈಲ್ ಆಫ್ ವರ್ಕ್ ಅಂದರೆ ಒಬ್ಬ ಕಲಾವಿದನ (ಹಕ್ಕು). ಹಲವಾರುಬಾರಿ, ಅಲ್ಲಿ...ಹುಡುಕಾಟ!, ಸಿಕ್ಕುವುದಿಲ್ಲ. ಮತ್ತೆ ಹುಡುಕಾಟ! ಸಿಕ್ಕುವುದಿಲ್ಲ. ಹೀಗೆ ತೆಗೆದ ಪ್ರಯೋಗಗಳೆ ಒಬ್ಬ ಕಲಾವಿದನಿಗೆ ಸ್ವಂತಿಕೆಯ ಹಕ್ಕು ಸಿಗುತ್ತದೆ, ಸಮಸ್ಯೆಗಳ ಹುಡುಕಾಟದಲ್ಲಿ ನಿರೀಕ್ಷೆ ಮಾಡಿ ಪ್ರಯೋಗಗಳನ್ನು ಮಾಡಿ ಗುರಿ ತಲುಪುವವನೆ ಕಲಾವಿದ. ಅದನ್ನೆ ಸೃಜನಶೀಲತೆಯ ಗುಣಲಕ್ಷಣಗಳಿಂದ ಕೂಡಿದ ಒಂದು ಸ್ಟೈಲ್ ಎನ್ನುವುದು. ಕಲಾವಿದನ ಪ್ರತಿಯೊಂದು ಪೇಂಟಿಂಗ್ ಗಳು ಸಂವೇದನೆಗೆ ಒಳಪಡುತ್ತವೆ. ಇಂತಾ ಕೃತಿಗಳಿಗೆ ಬೆಲೆ ಜಾಸ್ತಿ. ಅವನು ಸಂತೆಯಲ್ಲಿಡಲಿ ಗ್ಯಾಲರಿಯಲ್ಲಿಡಲಿ ಆ ಕೃತಿಗಳಿಗೆ ಬೆಲೆ.

 ನಮ್ಮ ಶಿಕ್ಷಣದಲ್ಲಿ ಶಿಸ್ತಿನ ಕೊರತೆ ಇದೆ

ನಮ್ಮ ಶಿಕ್ಷಣದಲ್ಲಿ ಶಿಸ್ತಿನ ಕೊರತೆ ಇದೆ

ನಮ್ಮಲ್ಲಿ ಶಿಕ್ಷಣ ಪಡೆದ ಏಷ್ಟೊಂದು ಕಲಾವಿದರಿಗೆ ಸಂಪೂರ್ಣ ಕಲಾವಿದರ ಪಟ್ಟ ಸಿಕ್ಕುವುದಿಲ್ಲ ಕಾರಣ ನಮ್ಮ ಶಿಕ್ಷಣದಲ್ಲಿ ಶಿಸ್ತಿನ ಕೊರತೆ ಇದೆ, ಕಲಾವಿದರಿಗೆ ಸ್ವಾತಂತ್ರ್ಯ ಕೊಡುವ ಹೆಸರಿನಲ್ಲಿ, ಅಳತೆಗೆ ತಕ್ಕಂತೆ ನೀಡುವ ಸೌಂದರ್ಯ ಪ್ರಜ್ಞೆ ಕಡಿಮೆಯಾಗುತ್ತಿದೆ ಅದಕ್ಕೆ ಇವತ್ತು ಹವ್ಯಾಸಿ ಕಲಾವಿದರು ಬ್ರಹ್ಮಸ್ಥಾನದಲ್ಲಿ ನಿಂತಿದ್ದಾರೆ, ಕಲಾಕೃತಿಗಳು ಬೆಲೆ ಕಳೆದುಕೊಳ್ಳುತ್ತಿವೆ, ಗ್ಯಾಲರಿಗಳಲ್ಲಿ ಸರಿಯಾದ ಬೆಲೆ ಗುರುತು ಸಿಕ್ಕುವುದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Artist Ashok Ujjavvanavara shares his experience he had in this year's Chitrasanthe held at Chitrakala Parishath, Bengaluru
Please Wait while comments are loading...