ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ಪಿಗೆ ಧಮ್ಕಿ ಹಾಕಿದ ಯಡಿಯೂರಪ್ಪ ಬಂಧನಕ್ಕೆ ಆಗ್ರಹ

By Mahesh
|
Google Oneindia Kannada News

ಬೆಂಗಳೂರು, ಜೂನ್ 15: ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಸಿಲುಕಿ ಜೈಲು ಪಾಲಾಗಿದ್ದ ಯಡಿಯೂರಪ್ಪ ಅವರು ಈಗ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದಾರೆ. ಶತಾಯಗತಾಯ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಹಾಸನದ ಎಸ್ಪಿಯೊಬ್ಬರಿಗೆ ದೂರವಾಣಿ ಮೂಲಕ ಪರೋಕ್ಷವಾಗಿ ಧಮ್ಕಿ ಹಾಕಿದ ಪ್ರಕರಣವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ.

ಕೊಲೆ ಆರೋಪಿಗಳನ್ನು ರಕ್ಷಿಸಲು ಅವರಿಗೆ ಧರ್ಮದ ಹೆಸರನ್ನು ಲೇಪಿಸಲು ಯತ್ನಿಸಿ, ಕೋಮುಗಲಭೆಯ ಬೆದರಿಕೆ ಹಾಕಿದ್ದು ಅತ್ಯಂತ ಕೀಳು ಮಟ್ಟದ ನಡವಳಿಕೆ. ಈ ಕುರಿತು ಈಗಾಗಲೇ ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಡಿಜಿಪಿಯವರ ಕಛೇರಿಯಲ್ಲಿ ದೂರನ್ನೂ ದಾಖಲಿಸಿದ್ದು, ಐಪಿಸಿ ಸೆಕ್ಷನ್ 152-ಎ ಮತ್ತು ಸೆಕ್ಷನ್ 186ರ ಅಡಿ ಯಡಿಯೂರಪ್ಪರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದೆ.[ವೈರಲ್ ವಿಡಿಯೋ: ವಿವಾದದ ಸುಳಿಯಲ್ಲಿ ಯಡಿಯೂರಪ್ಪ]

ರಾಜ್ಯದಲ್ಲಿ ಈಗಾಗಲೇ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ, ಪೊಲೀಸರೇ ಪ್ರತಿಭಟನೆಗೆ ಇಳಿಯಲು ತಯಾರಿ ನಡೆಸಿದ್ದರು, ಇಂಥ ಸಂಧರ್ಭದಲ್ಲಿ ಅರಸೀಕೆರೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಭಂಧಪಟ್ಟ ಕೊಲೆ ಆರೋಪಿಗಳಿಗೆ ಒಂದು ಕೋಮಿನ ಬಣ್ಣ ಹಚ್ಚಿ, ಧರ್ಮದ ಹೆಸರಿನಲ್ಲಿ ಅವರನ್ನು ರಕ್ಷಿಸುವ ಹುನ್ನಾರ ನಡೆಸಿದ, ಹಾಸನದ ಎಸ್ಪಿಗೆ ದೂರವಾಣಿ ಮೂಲಕ ಪರೋಕ್ಷವಾಗಿ ಪೊಲೀಸ್ ಕಾರ್ಯ ಹೀಗೆ ಮುಂದುವರೆದರೆ, ಅರಸೀಕೆರೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಲಿದೆ ಎಂದು ಧಮ್ಕಿ ಹಾಕಿ ಪೊಲೀಸ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿರುವುದು ಕಾನೂನು ಬಾಹಿರ ಚಟುವಟಿಕೆ. [ಯಡಿಯೂರಪ್ಪ ಕರ್ನಾಟಕದ ಮುಂದಿನ ಸಿಎಂ: ವಿ ಸೋಮಣ್ಣ]

Arrest BS Yeddyurappa for threatening Police Officer : AAP Karnataka
Arrest BS Yeddyurappa for threatening Police Officer : AAP Karnataka

ಆಮ್ ಆದ್ಮಿ ಪಾರ್ಟಿ-ಬೆಂಗಳೂರು ಘಟಕದ ಕಾರ್ಯಕರ್ತರು ಈ ಸಂಬಂಧ ಬಿಜೆಪಿ ಕಛೇರಿಯ ಎದುರು ಪ್ರತಿಭಟನೆಯನ್ನು ನಡೆಸಿದೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಛೇರಿಯ ಎದುರು ರಾಜ್ಯ ಸಹಸಂಚಾಲಕರಾದ ಶಿವಕುಮಾರ್, ವಿಜಯ್ ಶರ್ಮ, ಸಿದ್ಧಾರ್ಥ ಶರ್ಮ, ಕುಂದನ್ ಸಿಂಗ್ ಹಾಗೂ ವಿಕಾಸ್ ಶುಕ್ಲ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಭಾಗವಹಿಸಿದ್ದರು.

ಸ್ಥಳದಲ್ಲಿ ನೆರೆದಿದ್ದ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಹ-ಸಂಚಾಲಕರಾದ ಶಿವಕುಮಾರ್, ಕೋಮುವಾದದಿಂದ ರಾಜ್ಯವನ್ನು ಒಡೆದು ಅಧಿಕಾರಕ್ಕೆ ಏರುವ ದುರಾಸೆಯಿಂದ ಯಡಿಯೂರಪ್ಪನವರು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Arrest BS Yeddyurappa for threatening Police Officer : AAP Karnataka

ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಎದುರಿಸಲು ಬಿಜೆಪಿ ಕೂಡ ಭ್ರಷ್ಟಾಚಾರದ ರಾಯಭಾರಿ ಎಂಬಂಥ ಯಡಿಯೂರಪ್ಪರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ನಾಚಿಕೆಗೇಡಿನ ಸಂಗತಿ. ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಯಡಿಯೂರಪ್ಪನವರು ಘಟನೆಗೆ ಸಂಬಂಧಪಟ್ಟಂತೆ ಈ ಕೂಡಲೇ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಿಂದ ದೂರವಿರಬೇಕು.

ಎಸ್ಪಿಗೆ ಧಮ್ಕಿ ಹಾಕಿದ ಯಡಿಯೂರಪ್ಪ ಬಂಧನಕ್ಕೆ ಆಗ್ರಹ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಯಡಿಯೂರಪ್ಪ ಬಂಧನ ಅವಶ್ಯಕವಾಗಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆಯ ಜವಾಬ್ದಾರಿಯನ್ನು ಹೊತ್ತಿರುವ ಗೃಹ ಸಚಿವರೂ ಹಾಗೂ ಮಾನ್ಯ ಮುಖ್ಯಮಂತ್ರಿಗಳು ಎಸ್ಪಿಗೆ ಧಮ್ಕಿ ಹಾಕಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಈ ಕೂಡಲೇ ಯಡಿಯೂರಪ್ಪರನ್ನು ಬಂಧಿಸಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ.

English summary
Arrest BS Yeddyurappa for threatening Police Officer : AAP Karnataka. Earlier a video showing BJP state president BS Yeddyurappa telling a ‘police officer’ over phone not to harass some Hindu youths in a murder case in Hassan had gone viral on the social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X