ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಯಾಣಿಕರ ಮತ್ತೊಂದು ದಾಖಲೆ ಬರೆದ ನಮ್ಮ ಮೆಟ್ರೋ

By Nayana
|
Google Oneindia Kannada News

Recommended Video

ದಾಖಲೆ ಬರೆದ ನಮ್ಮ ಮೆಟ್ರೋ..! | Oneindia Kannada

ಬೆಂಗಳೂರು, ಆಗಸ್ಟ್ 14: ನಮ್ಮಮೆಟ್ರೋದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ಹಾಗೂ ನಾಗಸಂದ್ರದಿಂದ ಯಲಚೇನಹಳ್ಳಿ ಎರಡೂ ಮಾರ್ಗಗಳಲ್ಲಿ ಸೋಮವಾರ ದಾಖಲೆ ಪ್ರಮಾಣದ ಪ್ರಯಾಣಿಕರು ಸಂಚರಿಸಿದ್ದಾರೆ.

ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ಸೋಮವಾರ(ಆಗಸ್ಟ್ 13) 2,28,316 ಮಂದಿ ಪ್ರಯಾಣಿಸಿದ್ದರೆ ಹಸಿರುವ ಮಾರ್ಗದ ನಾಗಸಂದ್ರ ಹಾಗೂ ಯಲಚೇನಹಳ್ಳಿ ನಡುವೆ 1,96,882 ಮಂದಿ ಪ್ರಯಾಣಿಸಿದ್ದಾರೆ. ಒಟ್ಟು 4,25,198 ಮಂದಿ ಪ್ರಯಾಣಿಸಿ ದಾಖಲೆ ನಿರ್ಮಿಸಿದ್ದಾರೆ.

ನಮ್ಮ ಮೆಟ್ರೋದಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರಯಾಣಿಕರ ಸಂಚಾರ! ನಮ್ಮ ಮೆಟ್ರೋದಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರಯಾಣಿಕರ ಸಂಚಾರ!

ಆಗಸ್ಟ್ 10ರಂದು 4.23 ಲಕ್ಷ ಮಂದಿ ಪ್ರಯಾಣಿಸಿದ್ದರು. ಪ್ರತಿನಿತ್ಯ ಸಂಚಾರ ದಟ್ಟಣೆ ಹೆಚ್ಚಿರುವ ಸಮಯದಲ್ಲಿ ಆರು ಬೋಗಿಯ ಮೆಟ್ರೋ ಸಂಚರಿಸುತ್ತಿರುವ ಕಾರಣ ಹೆಚ್ಚು ಜನರನ್ನು ಕೊಂಡೊಯ್ಯುತ್ತಿದೆ, ಇನ್ನು ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಇನ್ನೊಂದು ಆರು ಬೋಗಿಯ ಮೆಟ್ರೋ ಸಂಚರಿಸಲಿದೆ, ಆಗ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

Around 4.25 lakh commuters traveled in Namma Metro in a day

ಮೆಟ್ರೋ ಯೋಜನೆಗೆ ರಕ್ಷಣಾ ಇಲಾಖೆ ಭೂಮಿ ನೀಡಲು ರಕ್ಷಣಾ ಮಂತ್ರಿ ಒಪ್ಪಿಗೆ ಮೆಟ್ರೋ ಯೋಜನೆಗೆ ರಕ್ಷಣಾ ಇಲಾಖೆ ಭೂಮಿ ನೀಡಲು ರಕ್ಷಣಾ ಮಂತ್ರಿ ಒಪ್ಪಿಗೆ

ಜುಲೈನಲ್ಲಿ 1.15 ಕೋಟಿ ಪ್ರಯಾಣಿಕರು ಮೆಟ್ರೋವನ್ನು ಬಳಕೆ ಮಾಡಿದ್ದಾರೆ, 31.4 ಕೋಟಿ ರೂ, ಆದಾಯ ಬಂದಿದೆ. ಆಗಸ್ಟ್ 10ರಂದು 4,23,098 ಮಂದಿ ಪ್ರಯಾಣಿಸಿದ್ದು, 1,03,68,148 ರೂ. ಸಂಗ್ರಹವಾಗಿದೆ. ಬಿಎಂಆರ್‌ಸಿಎಲ್‌ ಸ್ಮಾರ್ಟ್‌ ಕಾರ್ಡ್‌ ಖರೀದಿಗೆ ಹೆಚ್ಚು ಉತ್ತೇಜನ ನೀಡುತ್ತಿದ್ದು, ಜುಲೈನಲ್ಲಿ 94,734 ಹೊಸ ಕಾರ್ಡ್‌ಗಳು ಖರೀದಿಯಾಗಿವೆ. ಅಂತೆಯೇ ರಿಯಾಯಿತಿಯನ್ನು ಕೂಡ ನೀಡಲಾಗುತ್ತಿದೆ.

English summary
Around 4.25 lakh commuters have traveled in Namma Metro on Tuesday and it is a highest number of commuters in a day ever since metro service started in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X