ಆರ್ಚ್‌‌ಬಿಷಪ್‌ ಡಾ. ಬರ್ನಾರ್ಡ್‌ ಮೊರಾಸ್‌ ಗುರುದೀಕ್ಷೆಗೆ 50ರ ಸಂಭ್ರಮ

Subscribe to Oneindia Kannada

ಬೆಂಗಳೂರು, ಡಿಸೆಂಬರ್ 6: ಭಾರತೀಯ ಕ್ಯಾಥೋಲಿಕ್‌ ಸಮುದಾಯಕ್ಕೆ ಬಹಳ ಚಿರಪರಿಚಿತರಾಗಿರುವ ಆರ್ಚ್‌‌ಬಿಷಪ್‌ ಡಾ. ಬರ್ನಾರ್ಡ್‌ ಮೊರಾಸ್‌ರು ಗುರುದೀಕ್ಷೆ ಪಡೆದು ಇಂದಿಗೆ 50 ವರ್ಷ ಕಳೆದಿದೆ. ಮಂಗಳೂರಿನ ಕುಪ್ಪೆಪದವು ಎಂಬ ಆಗಿನ ಕುಗ್ರಾಮದಿಂದ ಬಂದು ಕ್ಯಾಥೋಲಿಕ್‌ ಕ್ರೈಸ್ತ ಸಮುದಾಯದಲ್ಲಿ ಅತ್ಯಂತ ಗೌರವಾನ್ವಿತ ಹುದ್ದೆ ಅಲಂಕರಿಸಿದ ಸಾಧನೆ ಇವರದ್ದು.

ಇವರು ಕಳೆದ 28 ವರ್ಷಗಳಿಂದ ಬಡವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಹಲವಾರು ಅನಾಥ ಮಕ್ಕಳಿಗೆ ವಸತಿ, ವಿದ್ಯಾಭ್ಯಾಸ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Archbishop Dr. Bernard Moras completes 50 years of priesthood

1941ರ ಆ.10ರಂದು ಮಂಗಳೂರಿನ ಫ್ರಾನ್ಸಿಸ್‌ ಮೊರಾಸ್‌-ಮೊಂತಿನ್‌ ಮೊರಾಸ್‌ ಅವರ 9 ಜನ ಮಕ್ಕಳಲ್ಲಿ ಒಬ್ಬರಾಗಿ ಜನಿಸಿದ ಮೊರಾಸ್‌ ಅವರು ಬಾಲ್ಯದಲ್ಲೇ ಧಾರ್ಮಿಕತೆಯ ಮೇಲೆ ಆಸಕ್ತಿ ತೋರಿಸಿದವರು.

1967ರ ಡಿ.6ರಂದು ಧರ್ಮಗುರುಗಳಾಗಿ ತಮ್ಮ ತವರಿನಲ್ಲೇ ಮೊರಾಸ್‌ ಅವರು ದೀಕ್ಷೆ ಪಡೆದರು. ನಂತರ ಹಲವು ಜವಾಬ್ದಾರಿಗಳನ್ನು ಹುದ್ದೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಮೊರಾಸ್ ಅವರು 2004ರಲ್ಲಿ ಬೆಂಗಳೂರಿನ ಆರ್ಚ್‌ಬಿಷಪ್‌ ಸ್ಥಾನಕ್ಕೇರಿದರು.

ಹೀಗೆ ಧಾರ್ಮಿಕ, ಸಾಮಾಜಿಕ ಸೇವೆಗಳನ್ನು ನಡೆಸುತ್ತಾ ಬಂದ ಮೊರಾಸ್ ಅವರು ಗುರುದೀಕ್ಷೆ ಪಡೆದು ಇಂದಿಗೆ 50 ವರ್ಷಗಳನ್ನು ಪೂರೈಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Archbishop Dr. Bernard Moras has been completed 50 years of priesthood.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ