ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಘಂಟಾನಾದ ಸಾಲ್ದು, ಸಂಬಳ ಏರಿಕೆ ಮಾಡಿ: ಅರ್ಚಕರ ಬೇಡಿಕೆ

ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಸಮಾವೇಶ ನಗರ್ದವನ್ನು 'ಘಂಟಾನಾದ'ದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

By Mahesh
|
Google Oneindia Kannada News

ಬೆಂಗಳೂರು, ಜನವರಿ 18: ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಸಮಾವೇಶ ನಗರ್ದವನ್ನು "ಘಂಟಾನಾದ'ದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ (ರಿ) ಬೆಂಗಳೂರು ಪುರಭವನದಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಏರ್ಪಡಿಸಿತ್ತು.

Archaks demand adequate financial support from Siddaramaiah Government

ರಾಜ್ಯದಲ್ಲಿ ಒಟ್ಟು 34,000 ದೇಗುಲಗಳು ಮುಜರಾಯಿ ಇಲಾಖೆಗೆ ಒಳಪಟ್ಟಿದೆ. ಗೋಶಾಲೆ-ವೃದ್ಧಾಶ್ರಮ ಮುಜರಾಯಿ ಇಲಾಖೆಯ ಪ್ರಮುಖ ದೇವಾಲಯಗಳಲ್ಲಿ ಗೋಶಾಲೆ, ವೃದ್ಧಾಶ್ರಮ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

Akhila Karnataka Hindu Temples

ಮುಜರಾಯಿ ಇಲಾಖೆಗೆ ಸೇರಿದ ದೇಗುಲಗಳ ವಾರ್ಷಿಕ ತಸ್ದಿಕ್ ಹಣವನ್ನು 12 ಸಾವಿರದಿಂದ 24 ಸಾವಿರ ರೂ.ಗಳಿಗೆ ಜೊತೆಗೆ ಸಂಬಳ ಏರಿಕೆ ಮಾಡಿ ಮುರ್ನಾಲ್ಕು ವರ್ಷವಾಗಿದೆ ಎಂದು ಅರ್ಚಕರ ಸಂಘ ಹೇಳಿದೆ.

ಅರ್ಚಕರ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಹೊಂದಿದೆ. ಎಲ್ಲ ಅರ್ಚಕರು ಆರ್ಥಿಕವಾಗಿ ಚೆನ್ನಾಗಿದ್ದಾರೆಂದು ಹೇಳಲಾಗದು. ಆಯ್ದ ಅರ್ಚಕರಿಗೆ ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಏಳೆಂಟು ಲಕ್ಷ ರೂಪಾಯಿಗಳಲ್ಲಿ ಮನೆ ನಿರ್ಮಿಸಿ ಕೊಡುವ ಯೋಜನೆ ಇದೆ.

Akhila Karnataka Hindu Temples

ವಿಮಾ ಪರಿಹಾರ ಕಾರ್ಮಿಕರು, ಮೀನುಗಾರರಿಗೆ ಇರುವಂತೆಯೇ ಅರ್ಚಕರಿಗೂ ವಿಮಾ ಪರಿಹಾರ ನೀಡುವ ಬಗ್ಗೆಯೂ ಯೋಜನೆಯಿದ ಎಂದು ಮುಜರಾಯಿ ಇಲಾಖೆ ಹೇಳಿದೆ.

ಅರ್ಚಕರ ಸೇವಾ ನಿಯಮ-ಸಮಿತಿ ದೇವಾಲಯಗಳ ಸಿಬ್ಬಂದಿಗೆ ಸೇವಾ ನಿಯಮಗಳನ್ನು ರೂಪಿಸಲು ನಿವೃತ್ತ ನ್ಯಾಯಮೂರ್ತಿ ದೇಶಪಾಂಡೆ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ನೀಡಿದ ಶಿಫಾರಸ್ಸು ಇನ್ನೂ ಅನುಷ್ಠಾನವಾಗಿಲ್ಲ.

Akhila Karnataka Hindu Temples

5 ರಿಂದ 10 ಎಕರೆ ಜಾಗ ಹೊಂದಿರುವ ರಾಜ್ಯದ ಪ್ರಮುಖ 25 ದೇವಾಲಯಗಳಲ್ಲಿ ಗೋಶಾಲೆ ಆರಂಭಿಸುವ ಯೋಜನೆ ಕೂಡಾ ಪೂರ್ಣಪ್ರಮಾಣವಾಗಿ ಅನುಷ್ಠಾನಗೊಂಡಿಲ್ಲ.

English summary
Akhila Karnataka Hindu Temples - Archaks, Aghamiks and Upadivants Federation has demanded Karnataka government to provide adequate financial support Muzarai temple employees
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X