ನಿಗಮ ಮಂಡಳಿ ಆಧ್ಯಕ್ಷ ಸ್ಥಾನ: ಶಾಸಕರ ಅಸಮಾಧಾನ

Posted By: Ananthanag
Subscribe to Oneindia Kannada

ಬೆಂಗಳೂರು, ನವೆಂಬರ್‌,3: ನಿಗಮ ಮಂಡಳಿ ನೇಮಕ ಬೆನ್ನಲೇ ಕೆಲ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಬಳ್ಳಾರಿ ಗ್ರಾಮಾಂತರ ಶಾಸಕ ಎನ್.ವೈ. ಗೋಪಾಲ ಕೃಷ್ಣ ಪ್ರತಿಕ್ರಿಯಿಸಿ ನಾನು ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನಗೆ ಪಕ್ಷದಲ್ಲಿ ಸೂಕ್ತ ಮನ್ನಣೆ ದೊರೆಯುತ್ತಿಲ್ಲ ಎಂದಿದ್ದಾರೆ.

ಹೈಕಮಾಂಡ್ ಮತ್ತು ಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಗರಂ ಆಗಿದರುವ ಗೋಪಾಲಕೃಷ್ಣ ಈಗ ನನಗೆ ಡಾ, ಡಿ.ಎಂ. ನಂಜುಂಡಪ್ಪ ಸಮಿತಿ ಶಿಫಾರಸ್ಸುಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

Siddaramaiah


ನಂಜುಂಡಪ್ಪ ಸಮಿತಿ ಶಿಫಾರಸ್ಸುಗಳ ಅನುಷ್ಠಾನದಿಂದ ಜನತೆಗೆ ಹೇಗೆ ಒಳಿತಾಗುವುದೋ ತಿಳಿದಿಲ್ಲ. ಅಧ್ಯಕ್ಷ ಸ್ಥಾನ ಸ್ವೀಕರಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಪಕ್ಷದ ಶಾಸಕರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.

ಪಕ್ಷವು ಸೂಕ್ತ ಸಮಯದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಾನು ಕೇವಲ ಗೂಟದ ಕಾರಿನಲ್ಲಿ ತಿರುಗಾಡುವವನಲ್ಲ ಅಭಿವೃದ್ಧಿಗೆ ಶ್ರಮಿಸುವವನು. ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಬಾರದು ಎಂದು ಗೋಪಾಲ ಕೃಷ್ಣ ತಿಳಿದ್ದಾರೆ.

ನಿನ್ನೆ ಹದಿನೆಂಟು ಶಾಸಕರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನಮಾನ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ನಿನ್ನೆಯೇ ಕೆಲ ಶಾಸಕರು ಸ್ಥಾನಮಾನ ನೀಡುವ ಮುಂಚೆ ಸೌಜನ್ಯಕ್ಕಾದರೂ ವಿಷಯಗಳ ಬಗ್ಗೆ ಚರ್ಚಿಸಬೇಕಿತ್ತು ಎಂದು ತಿಳಿಸಿದ್ದರು. ಅಫಜಲ್ ಪುರ ಶಾಸಕ ಮುಖ್ಯಮಂತ್ರಿಗಳಿಗೆ ಗೌರವಕೊಡಬೇಕು ಎನ್ನು ಕಾರಣಕ್ಕೆ ಕರ್ನಾಟಕ ಗೃಹ ಮಂಡಳಿ ಸ್ಥಾನ ಒಪ್ಪಿಕೊಳ್ಳುತ್ತಿದ್ಧೇನೆ ಎಂದು ಹೇಳಿದ್ದರು.[91 ನಿಗಮ, ಮಂಡಳಿಗೆ ಹೊಸ ಅಧ್ಯಕ್ಷರ ಪಟ್ಟಿ ಪ್ರಕಟ]


ಇನ್ನು ಚಿಕ್ಕಪೇಟೆ ಶಾಸಕ ಆರ್‌.ವಿ.ದೇವರಾಜು ಕೊಳಗೇರಿ ಅಭಿವೃದ್ಧಿ ಮಂಡಳಿ ಕೊಟ್ಟಿದ್ದಕ್ಕೆ ನಾಳೆ( ಇಂದು) ಸಿಎಂ ಜತೆ ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು.


ಹೈದರಾಬಾದ್- ಕರ್ನಾಟಕದ ಹಿರಿಯ ಶಾಸಕರೊಬ್ಬರು ಇಂತಹ ಸ್ಥಾನ ಒಪ್ಪಿಕೊಳ್ಳು ಸಾಧ್ಯವೇ ಇಲ್ಲೆ ಎಂದು ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With Wednesday's appointments, nearly 20 Congress MLAs in the Corporation Board. Some MLAs upset to offerd post.
Please Wait while comments are loading...