ಊಬರ್-ಓಲಾ ಟ್ಯಾಕ್ಸಿಗಳ ದರ ಬದಲಾವಣೆಗೆ ಬೇಕು ಒಂದೆರೆಡು ದಿನ

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 12 : ಮೊಬೈಲ್ ಅಪ್ಲಿಕೇಷನ್ ಆಧಾರಿತ ಓಲಾ, ಉಬರ್ ಸೇರಿದಂತೆ ಹಲವು ಕಂಪನಿಗಳ ಟ್ಯಾಕ್ಸಿಗಳ ಕನಿಷ್ಟ ಪ್ರಯಾಣ ದರವನ್ನು ಸಾರಿಗೆ ಇಲಾಖೆಯು ನಿಗದಿ ಮಾಡಿದ್ದು, ಪೂರ್ಣಪಟ್ಟಿ ಪ್ರಕಟಿಸಲಾಗಿದೆ.

ಜನವರಿ9 ರಿಂದ ಅನ್ವಯವಾಗುವಂತೆ ನಗರದಲ್ಲಿ ಸಂಚರಿಸುವ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿಗಳ ದರ ಪರಿಷ್ಕೃತಗೊಳಿಸಲು ಆದೇಶಿಸಲಾಗಿದೆ. ಆದೇಶವಾಗಿ 2 ದಿನ ಕಳೆದರೂ ಪ್ರಮುಖ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿಗಳಾದ ಓಲಾ ಮತ್ತು ಊಬರ್ ನಲ್ಲಿ ಹೊಸ ದರ ಅನುಷ್ಠಾನವಾಗಿಲ್ಲ.

ಓಲಾ, ಉಬರ್ ಟ್ಯಾಕ್ಸಿ ಪ್ರಯಾಣ ದರ ಪಟ್ಟಿ ಪ್ರಕಟ

ಈ ಹಿಂದೆ ಮೂಲ ದರ, ಪ್ರತಿ ಕಿ,ಮೀ, ದರ ಪ್ರತಿ ನಿಮಿಷದ ಪ್ರಯಾಣ ದರ, ತೆರಿಗೆ ಹೀಗೆ ಹಲವು ದರ ವಿಧಿಸುತ್ತಿದ್ದ ಸಂಸ್ಥೆಗಳು ಇದೀಗ ಕೇವಲ 2 ವಿಭಾಗದಲ್ಲಿ ದರ ನಿಗದಿಪಡಿಸಬೇಕಿದೆ. ಪರಿಷ್ಕೃತ ದರಕ್ಕೆ ಪೂರ್ಣ ವ್ಯವರ್ಸಥೆ ಬದಲಾಯಿಸಬೇಕಿದ್ದು, ಪರೀಕ್ಷಾರ್ಥವಾಗಿ ಪ್ರಾರಂಭಿಸಬೇಕಿದೆ. ಪೂರ್ಣ ಅನುಷ್ಠಾನವಾಗಲು ಒಂದೆರೆಡು ದಿನ ಹಿಡಿಯಲಿದೆ ಎಂದು ಊಬರ್ ಸಂಸ್ಥೆ ತಿಳಿಸಿದೆ.

APP based taxi runs on old tariff

ಸಾರಿಗೆ ಇಲಾಖೆ ವಾಹನದ ಬೆಲೆ ಆಧಾರದಲ್ಲಿ 4 ವಿಭಾಗದಲ್ಲಿ ಕಾರುಗಳನ್ನು ವಿಂಗಡಿಸಿದೆ. ಅವುಗಳಲ್ಲಿ 4 ಕಿ.ಮೀವರೆಗೆ ಕನಿಷ್ಠ ದರ 44-80ರೂ. ನಿಗದಿಪಡಿಸಲಾಗಿದ್ದು, ನಂತರದ ಪ್ರತಿ ಕಿ.ಮೀಗೆ ಪ್ರಯಾಣಿಕರು 11ರಿಂದ 45ರೂ ವರೆಗೆ ಪಡೆಯಬಹುದು ಎಂದು ಆದೇಶಿಸಿದೆ.

ಹೀಗಾಗಿ 4.ಕಿ.ಮೀ ಕನಿಷ್ಠ ದರ ಹಾಗೂ ತದನಂತರ ಪ್ರತಿ ಕಿ.ಮೀ ದರವನ್ನಷ್ಟೇ ಪ್ರಯಾಣಿಕರಿಂದ ಅಪ್ಲಿಕೇಷನ್ ಟ್ಯಾಕ್ಸಿಗಳು ಪಡೆಯಬಹುದು.

ಅನಧಿಕೃತ ದರದಿಂದ ಮುಕ್ತಿ: ಇನ್ನುಮುಂದೆ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿಗಳು ರೈಡ್ ಟೈಂ ಚಾರ್ಜ್ ಹಾಗೂ ಯಾವುದೇ ಇತರೆ ಸಬ್ ಚಾರ್ಜ್ ವಿಧಿಸುವಂತಿಲ್ಲ. ಇದು ಪ್ರಯಾಣಿಕರಿಗೆ ಕೊಂಚ ಸಮಾಧಾನದ ವಿಚಾರವಾಗಿದೆ. ಇಲ್ಲವಾದಲ್ಲಿ ಬೆಂಗಳೂರಿನ ಟ್ರಾಫಿಕ್ ನಡುವೆ ಸಿಲುಕಿಕೊಂಡರೆ 5 ಕಿ. ಮೀ ಕ್ರಮಿಸಲು ಅರ್ಧಗಂಟೆ ಹಿಡಿಯುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿ ನಿಮಿಷಕ್ಕೆ 1.50 ರೂ ವರೆಗೆ ಸರವನ್ನು ಪ್ರಯಾಣಿಕರ ಮೇಲೆ ಹೇರುತ್ತಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Even after three days of notification on APP based taxi service fare, the taxi service companies still running on old tariff till Friday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ