ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಕಾಲೇಜಿನಲ್ಲಿ ದೇಶ ವಿರೋಧಿ ಘೋಷಣೆ, ಏನಿದು ವಿವಾದ?

|
Google Oneindia Kannada News

ಬೆಂಗಳೂರು, ಆಗಸ್ಟ್ 14 : ಶನಿವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶವಿರೋಧಿ ಘೋಷಣೆ ಕೂಗಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಎಬಿವಿಪಿ ಕಾರ್ಯಕರ್ತರು ಇದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದು, ಘೋಷಣೆ ಕೂಗಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶನಿವಾರ ಮಿಲ್ಲರ್ಸ್ ರಸ್ತೆಯಲ್ಲಿರುವ ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ದೇಶವಿರೋಧಿ ಘೋಷಣೆ ಕೂಗಿದ್ದಾರೆ. 'ಜಾನ್ ಸೇ ಲೇಂಗೆ ಆಜಾದಿ, ಕಾಶ್ಮೀರ್ ಸೇ ಲೇಂಗೇ ಆಜಾದಿ' ಮುಂತಾದ ಘೋಷಣೆಗಳನ್ನು ಕೂಗಿದ್ದಾರೆ. [JNU ಗಲಭೆ. 5 ಪ್ರಶ್ನೆಗಳು]

abvp

'ಬ್ರೋಕನ್ ಫ್ಯಾಮಿಲೀಸ್' ಎಂಬ ಹೆಸರಿನ ಕಾರ್ಯಾಗಾರದ ವೇಳೆ ಕೆಲವರು ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸ್ಥಳದಲ್ಲೇ ಪ್ರತಿಭಟನೆಯನ್ನೂ ನಡೆಸಿದರು. ಇಂದು ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ಮುಂದುವರೆದಿದೆ.[ಕಾಫಿ ನಾಡಲ್ಲಿ ಮಳೆ, ಮುಗಿಯದ JNU ರಗಳೆ]

ಏನಿದು ವಿವಾದ? : ವಸಂತನಗರದ ಮಿಲ್ಲರ್ಸ್‌ ರಸ್ತೆಯಲ್ಲಿರುವ ಯುನೈಟೆಡ್‌ ಥಿಯಾಲಾಜಿಕಲ್‌ ಕಾಲೇಜಿನಲ್ಲಿ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಎಂಬ ಸಂಸ್ಥೆ ಬ್ರೋಕನ್‌ ಫ್ಯಾಮಿಲೀಸ್‌ ಹೆಸರಿನಲ್ಲಿ ಕಾರ್ಯಾಗಾರ ಆಯೋಜಿಸಿತ್ತು. ಇದರಲ್ಲಿ ಸೇನೆ ಮತ್ತು ಕಾಶ್ಮೀರಿಗಳ ಸ್ಥಿತಿಗತಿ ಚರ್ಚಿಸಲು ವ್ಯವಸ್ಥೆ ಮಾಡಲಾಗಿತ್ತು.[JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ]

ಕಾರ್ಯಕ್ರಮಕ್ಕೆ ಕಾಶ್ಮೀರದಿಂದ ಕೆಲವು ಕುಟುಂಬದ ಸದಸ್ಯರನ್ನೂ ಕರೆಸಲಾಗಿತ್ತು. ಅವರಿಂದ ಸೇನೆ ಮಾಡಿದ ತೊಂದರೆಗಳ ಬಗ್ಗೆ ಹೇಳಿಸಲಾಯಿತು. ಆಗ ಭಾರತೀಯ ಸೇನೆಯ ಪರ ಹಾಗೂ ವಿರೋಧ ಮಾತುಗಳು ಕೇಳಿಬಂದವು. ಕೆಲವರು ಭಾರತೀಯ ಸೇನೆ ವಿರುದ್ಧ ಆರೋಪಗಳನ್ನು ಮಾಡಿದರು, ಘೋಷಣೆಗಳನ್ನು ಕೂಗಿದರು.

ಸೇನಾಪಡೆ ವಿರುದ್ಧ ಘೋಷಣೆ ಕೂಗುತ್ತಿದ್ದಂತೆ, ಕಾರ್ಯಕ್ರಮದಲ್ಲಿದ್ದ ಎಬಿವಿಪಿ ಕಾರ್ಯಕರ್ತರು ಇದನ್ನು ಖಂಡಿಸಿದರು. ಅಲ್ಲದೆ, ಕಾಲೇಜಿನಿಂದ ಹೊರ ಬಂದು ಸಂಘಟಕರ ವಿರುದ್ಧ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು.

ಸಂಜೆ 7ರಿಂದ 8.45ರ ವರೆಗೆ ಪೊಲೀಸರ ಭದ್ರತೆಯಲ್ಲಿ ಕಾರ್ಯಕ್ರಮ ನಡೆಯಿತು. ಭಾರತೀಯ ಸೇನೆ ವಿರುದ್ಧ ಘೋಷಣೆಗಳು ಕೂಗಲು ಶುರು ಮಾಡಿದ ತಕ್ಷಣ ಪೊಲೀಸರು ಕಾರ್ಯಕ್ರಮ ನಿಲ್ಲಿಸಿದರು.

ಪೊಲೀಸ್ ಠಾಣೆಗೆ ದೂರು : ಕಾರ್ಯಕ್ರಮವನ್ನು ಆಯೋಜನೆ ಮಾಡಿದರ ವಿರುದ್ಧ ಜೆ.ಸಿ.ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಎಬಿವಿಪಿ ಇಂದೂ ಸಹ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

English summary
ABVP members protested in front of United Theological College Bengaluru on Saturday night after some activists, taking part in a programme had allegedly shouted slogans demanding freedom for Kashmir from India. The programme organized by the Amnesty International (AI).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X