ನಾಪತ್ತೆಯಾಗಿರುವ ಅತ್ರೇಯಿಗಾಗಿ ಹುಡುಕಾಡುತ್ತಿರುವ ಪೋಷಕರಿಗೆ ನೆರವಾಗಿ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 10: ಮೂವತ್ತೈದು ವರ್ಷದ ಮಾನವ ಶಾಸ್ತ್ರಜ್ಞೆ ಅತ್ರೇಯಿ ಮಜುಂದಾರ್ ಬೆಂಗಳೂರಿನ ಬೆಳ್ಳಂದೂರಿನಿಂದ ಕಾಣೆಯಾಗಿದ್ದಾರೆ. ಏಪ್ರಿಲ್ ನಾಲ್ಕರಂದು ಮನೆಯಿಂದ ಹೊರಟ ಆಕೆ ಹಿಂತಿರುಗಿಲ್ಲ. ಅತ್ರೇಯಿ ಸಹೋದ್ಯೋಗಿಗಳು, ಕುಟುಂಬದವರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ.

ಅಂತೂ ಪತ್ತೆಯಾದರು ಟೊರೆಂಟೊದಿಂದ ಬೆಂಗ್ಳೂರಿಗೆ ಬಂದಿದ್ದ ಅತ್ರೇಯಿ

ಅತ್ರೇಯಿ ಟೊರಂಟೋದಿಂದ ಬೆಂಗಳೂರಿಗೆ ಬಂದ ದಿನವೇ ಕಾಣೆಯಾಗಿದ್ದಾರೆ. ಮಾರತ್ ಹಳ್ಳಿಯ ಪೊಲೀಸ್ ಅಧಿಕಾರಿಗಳು ಅತ್ರೇಯಿಗಾಗಿ ಹುಡುಕಾಟ ನಡೆಸಿದ್ದಾರೆ. ಆಕೆ ಮನೆಯಿಂದ ಹೊರಟ ರಾತ್ರಿ ಮಾರತ್ ಹಳ್ಳಿಯ ನೊವೋಟಲ್ ಹೋಟೆಲ್ ನಲ್ಲಿ ತಂಗಿದ್ದನ್ನು ಖಾತ್ರಿ ಪಡಿಸಿದ್ದಾರೆ. ಅದರ ಮರುದಿನ ಬೆಳ್ಳಂದೂರಿನ ಮೇರಿಯಟ್ ಹೋಟೆಲ್ ನಲ್ಲಿ ಉಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯನ್ನು ಹುಡುಕಲು ಸಹಾಯ ಮಾಡಿ: ಐರಿಷ್ ವ್ಯಕ್ತಿಯ ಮನವಿ

ಏಪ್ರಿಲ್ ಆರರಂದು ಮೇರಿಯಟ್ ಹೋಟೆಲ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಆಕೆ ಅಲ್ಲಿಂದ ಹೊರಟಿರುವ ದೃಶ್ಯ ಸೆರೆಯಾಗಿದೆ. ಜತೆಗೆ ಯಾರೂ ಇರಲಿಲ್ಲ ಎಂಬುದು ಕೂಡ ತಿಳಿದುಬಂದಿದೆ ಎನ್ನುತ್ತಾರೆ ತನಿಖಾಧಿಕಾರಿ. ಏಪ್ರಿಲ್ ನಾಲ್ಕರಂದು ಅತ್ರೇಯಿಯನ್ನು ಅವರ ತಂದೆ ವಿಮಾನ ನಿಲ್ದಾಣದಿಂದ ಮನೆಗೆ ಕರೆತಂದಿದ್ದಾರೆ. ಅಲ್ಲಿಂದ ಬಂದ ಆಕೆ ರೂಮಿಗೆ ಹೋಗಿ ಮಲಗಿದ್ದಾರೆ.

Atreyee

ಕೈಯಲ್ಲಿ ಪರ್ಸ್ ತೆಗೆದುಕೊಂಡು ರಾತ್ರಿ ಒಂಬತ್ತು ಗಂಟೆಗೆ ಮನೆಯಿಂದ ತೆರಳಿದ ಅತ್ರೇಯಿ ಹಿಂತಿರುಗಿಲ್ಲ ಎಂದು ಪೋಷಕರು ತಿಳಿಸಿದ್ದಾರೆ. ಅತ್ರೇಯಿ ಬಗ್ಗೆ ಮಾಹಿತಿ ಕಲೆ ಹಾಕಲು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಾಕಲಾಗಿದೆ. ಅತ್ರೇಯಿ ತನ್ನ ಮೊಬೈಲ್ ಫೋನ್ ಕೂಡ ತೆಗೆದುಕೊಂಡು ಹೋಗಿಲ್ಲ ಆದ್ದರಿಂದ ಪತ್ತೆ ಕಾರ್ಯ ಇನ್ನಷ್ಟು ಕಷ್ಟವಾಗಿದೆ.

ಅತ್ರೇಯಿ ಬೆಂಗಳೂರಿನ ಲಾ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದವರು. ಯೇಲ್ ವಿ.ವಿಯಲ್ಲಿ ಕೂಡ ಅಧ್ಯಯನ ಮಾಡಿದ್ದು, ಆಂಡ್ರೂ ಡಬ್ಲ್ಯು ಮೆಲನ್ ಫೌಂಡೇಷನ್ ನ ಫೆಲೋಷಿಪ್ ನಲ್ಲಿ ಸಂಶೋಧನಾ ಅಧ್ಯಯನದಲ್ಲಿ ತೊಡಗಿದ್ದರು. ಒಂದು ವೇಳೆ ಅತ್ರೇಯಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮೊಬೈಲ್ ಸಂಖ್ಯೆ 9845261515 ಅಥವಾ 9448290990 ಸಂಪರ್ಕಿಸಲು ಕೋರಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Atreyee Majumder (35), anthropologist and a resident of Bellandur in Bengaluru, has been missing for five days and search teams formed by her colleagues and friends are desperately trying to find her.Atreyee went missing on April 4, the day she arrived in Bengaluru from Toronto.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ