ಅಂತೂ ಪತ್ತೆಯಾದರು ಟೊರೆಂಟೊದಿಂದ ಬೆಂಗ್ಳೂರಿಗೆ ಬಂದಿದ್ದ ಅತ್ರೇಯಿ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 11: ಕಳೆದ ಒಂದು ವಾರದಿಂದ ನಾಪತ್ತೆ ಆಗಿದ್ದ ಮಾನವ ಶಾಸ್ತ್ರಜ್ಞೆ, ಬೆಳ್ಳಂದೂರಿನ ನಿವಾಸಿ, ಮೂವತ್ತೈದು ವರ್ಷದ ಅತ್ರೇಯಿ ಅಂತೂ ಪತ್ತೆಯಾಗಿದ್ದಾರೆ. ಆಕೆ ನಾಪತ್ತೆ ಆದ ದಿನದಿಂದ ಸಹೋದ್ಯೋಗಿಗಳು, ಸ್ನೇಹಿತರು ಪತ್ತೆ ಕಾರ್ಯ ಶುರು ಮಾಡಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಆಕೆಯ ಪತ್ತೆಗೆ ನೆರವಾಗುವಂತೆ ಮನವಿ ಮಾಡುತ್ತಿದ್ದರು.

ನಾಪತ್ತೆಯಾಗಿರುವ ಅತ್ರೇಯಿಗಾಗಿ ಹುಡುಕಾಡುತ್ತಿರುವ ಪೋಷಕರಿಗೆ ನೆರವಾಗಿ

ಪಿ.ಎಚ್ ಡಿ ವಿದ್ಯಾರ್ಥಿನಿ ಅತ್ರೇಯಿ ಮಜುಂದಾರ್ ಕಳೆದ ಬುಧವಾರದಿಂದ ನಾಪತ್ತೆಯಾಗಿದ್ದರು. ಕೆನಡಾದಿಂದ ಬೆಂಗಳೂರಿನ ಬೆಳ್ಳಂದೂರಿನಲ್ಲಿ ಇರುವ ತನ್ನ ಪೋಷಕರ ಮನೆಗೆ ಆಕೆ ಬಂದಿದ್ದರು. ಬಂದ ದಿನದಂದು ಪರ್ಸ್ ತೆಗೆದುಕೊಂಡು ಮನೆಯಿಂದ ಆಚೆ ಹೋಗಿದ್ದವರು ಹಿಂತಿರುಗಿರಲಿಲ್ಲ. ನಾಪತ್ತೆ ಆದ ಬಗ್ಗೆ ಮಾರತ್ ಹಳ್ಳಿಯ ಪೊಲೀಸ್ ಠಾಣೆಯಲ್ಲಿ ಅತ್ರೇಯಿ ಪೋಷಕರು ದೂರು ನೀಡಿದ್ದರು.

Anthropologist Atreyee missing for a week, found after huge search in Bengaluru

ವರದಿ ಪ್ರಕಾರ, ಅತ್ರೇಯಿ ಬೆಂಗಳೂರಿನ ಹೋಟೆಲ್ ವೊಂದರಲ್ಲಿ ಉಳಿದುಕೊಂಡಿದ್ದರು. ಹೋಟೆಲ್ ನ ಸಿಬ್ಬಂದಿಯು ಪೊಲೀಸರಿಗೆ ಅತ್ರೇಯಿ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅತ್ರೇಯಿ ಫೋಟೋಗಳನ್ನು ಹಾಕಿದ್ದನ್ನು ಗಮನಿಸಿದ ಸಿಬ್ಬಂದಿ, ಆಕೆಯನ್ನು ಗುರುತಿಸಿ, ಮಾಹಿತಿಯನ್ನು ನೀಡಿದ್ದಾರೆ.ಅತ್ರೇಯಿ ಅಂತೂ ಪತ್ತೆಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Atreyee Majumdar, the 35-year-old anthropologist who went missing from Bengaluru on April 4, has now been found. She is reportedly staying at a hotel in the city. The hotel staff informed the police that Atreyee was there. They recognised her from all the pictures of her that were being shared by her friends and family on social media.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ