13 ನಿಮಿಷದಲ್ಲಿ ರಾಮಯ್ಯ ಆಸ್ಪತ್ರೆ ತಲುಪಿದ ಜೀವಂತ ಹೃದಯ!

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 28 : ಬೆಂಗಳೂರು ಟ್ರಾಫಿಕ್ ಪೊಲೀಸರು ನಿರ್ಮಿಸಿದ ಸಿಗ್ನಲ್ ರಹಿತ ಹಸಿರು ಕಾರಿಡಾರ್ ನಿಂದಾಗಿ 11 ಕಿ.ಮೀ. ದೂರವನ್ನು ಕೇವಲ 13 ನಿಮಿಷದಲ್ಲಿ ಕ್ರಮಿಸಿ ಜೀವಂತ ಹೃದಯವನ್ನು ಬುಧವಾರ ಸಂಜೆ ರವಾನಿಸಲಾಗಿದೆ.

ಹಲಸೂರಿನ ಎಚ್‌ಸಿಜಿ ಆಸ್ಪತ್ರೆಯಿಂದ ವಿದ್ಯಾರಣ್ಯಪುರದಲ್ಲಿರುವ ಎಂಎಸ್ ರಾಮಯ್ಯ ಆಸ್ಪತ್ರೆಗೆ ಕಸಿಗಾಗಿ ಜೀವಂತ ಹೃದಯವನ್ನು ರವಾನಿಸಲಾಗಿದೆ. ಸಂಜೆ 7.21ಕ್ಕೆ ಹೊರಟ ಜೀವಂತ ಹೃದಯ 13 ನಿಮಿಷದಲ್ಲಿ ಎಂಎಸ್ ರಾಮಯ್ಯ ಆಸ್ಪತ್ರೆಯನ್ನು ತಲುಪಿದೆ. [ಬೆಂಗಳೂರಲ್ಲಿ ಮಿಡಿದ ಮತ್ತೊಂದು ಜೀವಂತ ಹೃದಯ]

Another LIVE heart transported in Bengaluru

ಜೀವಂತ ಹೃದಯವನ್ನು ಸಾಗಿಸಲು ಸಹಕಾರ ನೀಡಿದ್ದಕ್ಕಾಗಿ ಹೃದಯ ವೈಶಾಲ್ಯತೆಯನ್ನು ಮೆರೆದ ಬೆಂಗಳೂರಿನ ರಸ್ತೆ ಸಂಚಾರಿಗಳಿಗೆ ಧನ್ಯವಾದಗಳನ್ನು ಹೆಚ್ಚುವರಿ ಪೊಲೀಸ್ ಆಯಕ್ತ(ಸಂಚಾರ)ರಾಗಿರುವ ಆರ್ ಹಿತೇಂದ್ರ ಅವರು ಅರ್ಪಿಸಿದ್ದಾರೆ. ಇದನ್ನು ಸಾಧ್ಯವಾಗಿಸಿದ ಸಂಚಾರಿ ಪೊಲೀಸರಿಗೆ ಅನಂತ ಧನ್ಯವಾದಗಳು.

ಸುಸಜ್ಜಿತ ಪೆಟ್ಟಿಗೆಯಲ್ಲಿ ಜೀವಂತ ಹೃದಯ ಎನ್ಆರ್ ಸ್ಕ್ವೇರ್, ಕೆಜಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಸಿಐಡಿ ಕೆಳಸೇತುವೆ, ಬಸವೇಶ್ವರ ವೃತ್ತ, ಹಳೆ ಹೈಗ್ರೌಂಡ್ ಜಂಕ್ಷನ್, ವಿಂಡ್ಸರ್ ಮ್ಯಾನರ್ ಹೋಟೆಲ್, ಪಿಜಿ ಹಳ್ಳಿ, ಮೇಖ್ರಿ ವೃತ್ತ ಎಡತಿರುವು, ಸಿವಿ ರಾಮನ್ ರಸ್ತೆ, ಸದಾಶಿವನಗರ ಟ್ರಾಫಿಕ್ ಪೊಲೀಸ್ ಸ್ಟೇಷನ್ ಬಲತಿರುವು, ನ್ಯೂ ಬಿಇಎಲ್ ರಸ್ತೆಯಲ್ಲಿ ಸಾಗಿ ಎಂಎಸ್ ರಾಮಯ್ಯ ಆಸ್ಪತ್ರೆ ತಲುಪಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Another LIVE heart transported in Bengaluru on 28th September evening from HCG Hospital in Halasuru to MS Ramaiah hospital, in just 13 minutes, through signal free green corridor. Thanks to the donor and Bengaluru traffic police.
Please Wait while comments are loading...