ಸಿಕ್ಕಿದ್ದು 90 ಲಕ್ಷ, ಲೆಕ್ಕ ತೋರಿಸಿದ್ದ 9 ಲಕ್ಷ!

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 05 : ಸಿಸಿಬಿ ಪೊಲೀಸರ ಅವ್ಯವಹಾರಗಳ ಪಟ್ಟಿ ಮುಗಿಯುವಂತೆ ಕಾಣುತ್ತಿಲ್ಲ. ಮೊನ್ನೆ ತಾನೆ ಪೊಲೀಸ್ ಕೇಂದ್ರ ಕಚೇರಿಯಿಂದಲೇ 3 ಕೋಟಿ ದೋಚಿದ್ದ ಪ್ರಕರಣ ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಠಿಸಿದ್ದ ಬೆನ್ನಲ್ಲೆ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ನವೆಂಬರ್ 9ರಂದು ನಗರದ ಮಡಿವಾಳದಲ್ಲಿ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು 90 ಲಕ್ಷ ಹಣ ವಶಪಡಿಸಿಕೊಂಡಿದ್ದರು, ಆದರೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾಗ ತೋರಿಸಿದ್ದು 9 ಲಕ್ಷ ರೂಪಾಯಿ ಮಾತ್ರ. 81 ಲಕ್ಷ ರೂಪಾಯಿ ಹಣವನ್ನು ದಾಳಿ ಮಾಡಿದ್ದ ಪೊಲೀಸರೆ ನುಂಗಿ ನೀರು ಕುಡಿದಿದ್ದರು.

Another case of cash missing, complaint against CCB police

ದಾಳಿ ಸಮಯದಲ್ಲಿ ಬಂಧಿಸಿದ್ದ ಆಂಧ್ರದ ಎಂ.ಎಲ್.ಸಿ ಅವರ ಸಂಬಂಧಿಗಳನ್ನು ಪ್ರಕರಣದಿಂದ ಹೊರಗಿಡಲು 35 ಲಕ್ಷ ರೂಪಾಯಿ ಬೇಡಿಕೆಯನ್ನೂ ಸಿಸಿಬಿ ಪೊಲೀಸರು ಇಟ್ಟಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

ಸಿಸಿಬಿ ಪೊಲೀಸರ ಖಜಾನೆ ಕಳವು ಪ್ರಕರಣ ಬೆಳಕಿಗೆ ಬಂದ ಮೇಲೆ ಧೈರ್ಯ ಮಾಡಿದ ಎಂಎಲ್‌ಸಿ ಸಂಬಂಧಿಗಳು ಕಮಿಷನರ್ ಗೆ ಮೋರೆ ಹೋಗಿದ್ದಾರೆ. ಕಮಿಷನರ್ ಅವರು ದೂರಿನ ತನಿಖೆ ಮಾಡಲು ಜಂಟಿ ಪೊಲೀಸ್ ಆಯುಕ್ತರಿಗೆ ಸೂಚಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In Madivala, CCB police raids on a gambling center and seized 90 lakh, but they said in court that only 9 lakh was seized. now accused complaint to commissioner about the issue, commissioner orders to enquiry.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ