ನಮ್ದುಕೆ ಟೆಕ್ಕಿಗಳ ಕಥೆ ವ್ಯಥೆ ತಿಳಿಸುವ ಅಣ್ತಮ್ಮ ಸಾಂಗ್

Posted By:
Subscribe to Oneindia Kannada

ಯಶ್ ಅಭಿನಯದ ಮಿ ಅಂಡ್ ಮಿಸೆಸ್ ರಾಮಾಚಾರಿ ಚಿತ್ರದ 'ಹಂಗೂ ಹಿಂಗೂ ಹೆಂಗೋ ಇದ್ದೆ ನಾನು.. ಯಾರಿಗೆ ಗೊತ್ತಿಲ್ಲ ಹೇಳಿ.. ಈ ಜನಪ್ರಿಯ ಹಾಡಿನ ಸಾಲಿಗೆ ಅಣಕು ಸಾಹಿತ್ಯ ರಚಿಸಿ, ಹಾಡಿ ಸಕತ್ ಮಜಾ ಕೊಡುತ್ತಿದ್ದಾರೆ ನಮ್ದುಕೆ ತಂಡ.

ಬಹುತೇಕ ಟೆಕ್ಕಿಗಳನ್ನೇ ಹೊಂದಿರುವ ನಮ್ದು ಕೆ ತಂಡದ ಕಣ್ಣು ಈಗ ಸಾಫ್ಟ್ ವೇರ್ ತಂತ್ರಜ್ಞರ ಮೇಲೆ ಬಿದ್ದಿದೆ. ಆನ್ ಸೈಟ್(ವಿದೇಶಕ್ಕೆ ಕಾರ್ಯ ನಿಮಿತ್ತ ನಿಯೋಜನೆಗೊಳ್ಳುವುದು) ಹೋಗುವ ಟೆಕ್ಕಿಗಳು, ಇಲ್ಲೇ ಇರುವ ಆಫ್ ಶೋರ್ ಉದ್ಯೋಗಿಗಳ ಪರದಾಟ, ಸಂಬಳ, ಕ್ಲೈಂಟು, ಕೋಡು, ಡೆವಲಪರ್, ಹೀಗೆ ಟೆಕ್ಕಿಗಳ ಪ್ರಪಂಚದ ಕಥೆ ವ್ಯಥೆಯನ್ನು ಹಾಡಿನ ಮೂಲಕ ಬಿಚ್ಚಿಡಲಾಗಿದೆ. [ಅಣಕು ವಿಡಿಯೋ: ಎಕ್ಸಾಂ ಹಾಲ್ ನಲ್ಲಿ ಕನ್ನಡ ಸಾಂಗ್ಸ್ ]

Annthamma song Spoof About Onsite Techies by Namduk team

Onsite ಅಲ್ಲಿ ಇರೋ ಹುಡುಗರ ಕೈಯಿಂದ ಮೊಬೈಲ್ ತರ್ಸ್ತೀರಾ, ಎಣ್ಣೆ ಗಿಫ್ಟ್ ಕೊಡಿಸ್ಕೊತೀರಾ, ಬಂದಾಗ ಅವರ ಬ್ಲೇಡ್ ಹಾಕ್ತೀರಾ..ಆದ್ರೆ foreign ಹೋಗಿರೋ ನಮ್ software ಅಣ್ಣತಮ್ಮಂದಿರ ನಿಜವಾದ ಕಥೆ- ವ್ಯಥೆ ನಮ್ಮ ಈ ಸಲದ video " ಅಣ್ಣತಮ್ಮ@foreign(kathe-vyathe)song spoof ...ನೋಡಿ ಆನಂದಿಸಿ ಎಂದು ನಮ್ದುಕೆ ತಂಡದ ಶ್ರವಣ್ ನಾರಾಯಣ್ ಹೇಳುತ್ತಿದ್ದಾರೆ. [ನಮ್ದುಕೆ ನಿಮ್ದುಕೆ ಅವರ್ದುಕೆ ನೋಡ್ಬೇಕಾದ್ ವಿಡಿಯೋ]

ಈ ಅಣಕು ಗೀತೆಯಲ್ಲಿ ಸಕತ್ ಪಂಚಿಂಗ್ ಸಾಲುಗಳಿವೆ.. ಅಣ್ತಮ್ಮ ಸಾಂಗ್ ಸಾಹಿತ್ಯಕ್ಕೆ ಮಂಜುನಾಥ್ ಮಹದೇವಯ್ಯ, ರಾಜಶೇಖರ್ ಬಸವರಾಜು ಅವರ ಸಾಹಿತ್ಯವಿದ್ದರೆ, ಶ್ರವಣ್ ಅವರ ನಿರ್ದೇಶನವಿದೆ.

Annthamma song Spoof About Onsite Techies by Namduk team

ಮೈಸೂರು, ಅರಸೀಕೆರೆ, ಮಂಡ್ಯ ಮೂಲದ ಟೆಕ್ಕಿಗಳು ನಾರ್ವೆ, ಜಪಾನ್ ,ಯುಎಸ್ ನಲ್ಲಿ ಈ ಹಾಡು ಕೇಳಿ ಕಣ್ಣೀರಿಡುವಂಥ ದೃಶ್ಯಗಳನ್ನು ಸೃಷ್ಟಿಸಲಾಗಿದೆ. ಹೊಡೆಸ್ಕೊಂಡು ಹೋಯ್ತು ರೇಟಿಂಗ್ ಗುರೂ, ವೇರಿಯಬಲ್ ಪೇ ಜೀರೋ ಗುರು..ಡೆವಲಪರ್ ನ ಪೇಯ್ನ್ ಕಸ್ಟಮರ್ ಗೇನು ಗೊತ್ತು ಎಂಬ ಸಾಲುಗಳನ್ನು ಕೇಳಿದ ನಮ್ಮ ಟೆಕ್ಕಿಗಳು ಹೌದೌದು ಎಂದು ಮೆಚ್ಚುವಂತಿದೆ. ಸಾಂಗ್ ಕೇಳಿ ಎನ್ ಜಾಯ್ ಮಾಡಿ...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Anthamma @ Foriegn (Kathe-Vaythe) a Song Spoof of popular song from Mr and Mrs Ramachari is here. In this spoof video and lyrics Software Techie's offshore and onsite problems explained. Enjoy the song
Please Wait while comments are loading...