ಘನತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆಗೆ ಮುಂದಾದ ಬಿಬಿಎಂಪಿ

Posted By:
Subscribe to Oneindia Kannada

ಅನೇಕಲ್, ಅಕ್ಟೋಬರ್ 24: ಆನೇಕಲ್‌ ತಾಲೂಕಿನ ಚಿಕ್ಕನಾಗಮಂಗಲದಲ್ಲಿ ಘನತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಸ್ಥಾಪಿಸಲು ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮುಂದಾಗಿದ್ದು ಫ್ರಾನ್ಸಿನ 3 ವೇಜ್‌ ಎನರ್ಜಿ ಕಂಪೆನಿಯು ಉತ್ಸಾಹ ತೋರಿಸಿದೆ.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವದ ಕುರಿತು ಚರ್ಚಿಸಲಾಯಿತು. ಕಸದಿಂದ ವಿದ್ಯುತ್‌ ತಯಾರಿಕೆ ಕುರಿತು ಕಂಪೆನಿಯ ಪ್ರತಿನಿಧಿಗಳು ವಿವರಿಸಿದರು.

Anekal : French firm keen on waste-to-energy plant, Chikkanagamangala

'2,260 ಕೋಟಿ ರು ವೆಚ್ಚದಲ್ಲಿ 500 ಟನ್‌ ಘನತ್ಯಾಜ್ಯ ಸಾಮರ್ಥ್ಯದ ಘಟಕವನ್ನು ಕಂಪೆನಿ ಸ್ಥಾಪಿಸಲಿದೆ. ಇದಕ್ಕೆ ಪಾಲಿಕೆಯು ಯಾವುದೇ ಖರ್ಚು ಮಾಡುವುದಿಲ್ಲ. ಘಟಕದಲ್ಲಿ ತಯಾರಾಗುವ ವಿದ್ಯುತ್‌ ಅನ್ನು ಬೆಸ್ಕಾಂ ಖರೀದಿ ಮಾಡಲಿದೆ. ಬೆಸ್ಕಾಂ ಒಂದು ಯೂನಿಟ್‌ಗೆ 7.09 ರು ನೀಡಲಿದೆ' ಎಂದು ಬಿಬಿಎಂಪಿ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ಹೇಳಿದರು.

'ಪ್ರತಿದಿನ 500 ಟನ್‌ ಕಸವನ್ನು ಪಾಲಿಕೆಯಿಂದಲೇ ಪಡೆಯಲು ಸಾಧ್ಯವಿಲ್ಲ. 300 ಟನ್‌ ಕಸವನ್ನು ಪಾಲಿಕೆಯಿಂದ, 200 ಟನ್‌ ಕಸವನ್ನು ಖಾಸಗಿಯವರಿಂದ ಪಡೆಯುತ್ತೇವೆ. ಶೇ 90ರಷ್ಟು ಕಸವನ್ನು ವಿದ್ಯುಚ್ಛಕ್ತಿಯನ್ನಾಗಿ, ಉಳಿದ ಕಸವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುತ್ತೇವೆ ಎಂದು ಕಂಪೆನಿಯವರು ಪ್ರಸ್ತಾವದಲ್ಲಿ ತಿಳಿಸಿದ್ದಾರೆ' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A French company has expressed interest in building a waste-to-energy plant at Chikkanagamangala in Anekal taluk.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ