ಇಂಡಿಯಾ ಫಾರ್ಮಾ 2018 ಉದ್ಘಾಟಿಸಿದ ಅನಂತ ಕುಮಾರ್

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 15: ಆರೋಗ್ಯ ರಕ್ಷಣೆಯ ಕೈಗೆಟಕುವಿಕೆಯನ್ನು ಅಭಿವೃದ್ಧಿ ಪಡಿಸಲು ಉನ್ನತ ಗುಣಮಟ್ಟದ ಜೆನರಿಕ್ ಔಷಧಿಗಳ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಭಾರತ ಪ್ರಬಲಗೊಳ್ಳಬೇಕಿದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೇಳಿದರು.

ಬೆಂಗಳೂರಿನ ಇಂಟರ್ನ್ಯಾಶ್ನಲ್ ಎಗ್ಸಿಬಿಶನ್ ಸೆಂಟರ್ ನಲ್ಲಿ ನಡೆಯುತ್ತಿರುವ ಮೂರು ದಿನಗಳ, 3 ನೇ ಆವೃತ್ತಿಯ ಇಂಡಿಯಾ ಫಾರ್ಮಾ 2018 ಮತ್ತು ಇಂಡಿಯಾ ಮೆಡಿಕಲ್ ಡಿವೈಸ್ 2018 ಅನ್ನು ಇಂದು(ಫೆ.15) ಉದ್ಘಾಟಿಸಿದ ಅವರು ಮಾತನಾಡಿದರು.

ಇ-ಗ್ರಂಥಾಲಯ ಸ್ಥಾಪನೆ 1 ಕೋಟಿ ರು ನೀಡಿದ ಸಂಸದ ಅನಂತಕುಮಾರ್

ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯನ್ನು ಒದಗಿಸುವ ಸರ್ಕಾರದ ಗುರಿಗೆ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯಿಂದ ಪುಷ್ಟಿ ಸಿಕ್ಕಿದೆ. ಅದರ ಪರಿಣಾಮಕಾರಿ ಅನುಷ್ಠಾನಕ್ಕೆ, ಫಾರ್ಮಾ ಮತ್ತು ವೈದ್ಯಕೀಯ ಸಾಧನ ಉದ್ಯಮ ಸೇರಿದಂತೆ ಎಲ್ಲಾ ಪಾಲುದಾರರ ಒಗ್ಗೂಡುವಿಕೆ ಅಗತ್ಯವಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ ಕುಮಾರ್ ಹೇಳಿದರು.

Anath Kumar inaugurates 3 days Indian Pharma exhibition 2018 in Bengaluru

ಕಾರ್ಯಕ್ರಮವನ್ನು ಅನಂತ್ ಕುಮಾರ್ ಅವರೊಂದಿಗೆ ಮನ್ಸುಖ್ ಎಲ್ ಮಾಂಡವಿಯಾ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಅಪೇಕ್ಷಿತರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಇಬ್ಬರೂ ಗೈರಾದರು.

Anath Kumar inaugurates 3 days Indian Pharma exhibition 2018 in Bengaluru

ಈ ಕಾರ್ಯಕ್ರಮದಲ್ಲಿ ವಿದೇಶಗಳಿಂದ 50 ಪ್ರತಿನಿಧಿಗಳು, 10,000 ಕ್ಕೂ ಹೆಚ್ಚು ವ್ಯಾಪಾರ ಪ್ರವಾಸಿಗರು ಭಾಗವಹಿಸಲಿದ್ದು, 300 ಕ್ಕೂ ಹೆಚ್ಚು ಕಂಪನಿಗಳು, 50ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಅವರ ಔತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union Minister Ananth Kumar and other industry and government dignitaries inaugurate the three-day Indian Pharma 2018- An International Exhibition & Conference on Pharmaceutical Industry at Bengaluru international exhibition centre, in Bengaluru on Feb 15th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ