ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಿ ಇತಿಹಾಸ ನಿರ್ಮಿಸಿದ್ದ ಅನಂತ್

|
Google Oneindia Kannada News

'ಸನ್ಮಾನ್ಯ ಅಧ್ಯಕ್ಷರೇ ಮತ್ತು ವಿಶ್ವದ ನನ್ನ ಪ್ರೀತಿಯ ಸಹೋದರ, ಸಹೋದರಿಯರೇ... ನಿಮ್ಮೆಲ್ಲರಿಗೂ ನನ್ನ ಮುಂಜಾವಿನ ಶುಭಾಶಯಗಳು...'

ವಿಶ್ವಸಂಸ್ಥೆಯ 67 ನೇ ಸಾಮಾನ್ಯ ಸಭೆಯಲ್ಲಿ ಹೀಗೆ ಕನ್ನಡದಲ್ಲಿ ಮಾತು ಆರಂಭಿಸಿದ್ದವರು ಬೇರಾರೂ ಅಲ್ಲ, ಇಂದು ನಮ್ಮನ್ನಗಲಿದ ಅನಂತ್ ಕುಮಾರ್!

ಕರ್ನಾಟಕದ ಜನಪ್ರಿಯ ನಾಯಕ ಅನಂತ್ ಕುಮಾರ್ (59) ವಿಧಿವಶ ಕರ್ನಾಟಕದ ಜನಪ್ರಿಯ ನಾಯಕ ಅನಂತ್ ಕುಮಾರ್ (59) ವಿಧಿವಶ

ಅದು 2012ರ ಅಕ್ಟೋಬರ್ 15. ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆಯ 67 ನೇ ಸಾಮಾನ್ಯ ಸಭೆ ನಡೆಯುತ್ತಿದ್ದ ಸಮಯ. ಸಂಸದರಾಗಿದ್ದ ಅನಂತ್ ಕುಮಾರ್ ಕನ್ನಡದಲ್ಲೇ ಭಾಷಣ ಆರಂಭಿಸಿ, ಅಲ್ಲಿ ನೆರೆದಿದ್ದವರ ಹುಬ್ಬೇರಿಸಿದರು. ಈ ಮೂಲಕ ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ ಮೊದಲಿಗರು ಎಂದು ಇತಿಹಾಸದ ಪುಟಗಳಲ್ಲಿ ಅಜರಾಮರವಾದರು.

Ananth Kumar, first man who speaks Kannada in UN general assembly

ವಿಶ್ವಸಂಸ್ಥೆಯಲ್ಲಿ ಕನ್ನಡ ಕಂಪು ಹರಿಸಿದ ಅನಂತ್ ಕುಮಾರ್

ಕನ್ನಡದ ಮೇಲಿನ ಅವರ ಅಭಿಮಾನ, ಪ್ರೀತಿ ಅಂಥದ್ದು. ಕನ್ನಡ ರಾಜ್ಯೋತ್ಸವವನ್ನು ಮೊನ್ನೆ ಮೊನ್ನೆ ತಾನೇ ಆಚರಿಸಿ, ಕನ್ನಡ ಮಾಸವನ್ನು ಸಂಭ್ರಮಿಸುತ್ತೊರುವ ಹೊತ್ತಲ್ಲಿ 'ಅನಂತ್ ಕುಮಾರ್ ಇನ್ನಿಲ್ಲ' ಎಂಬ ಸುದ್ದಿಯೊಂದು ಬರಸಿಡಿಲಿನಂತೇ ಎರಗಿದೆ.

ಶಾಶ್ವತವಾಗಿ ನಮ್ಮನ್ನಗಲಿದ ಸ್ನೇಹ ಜೀವಿ, ಜನಾನುರಾಗಿ ಅನಂತ್ ಕುಮಾರ್ಶಾಶ್ವತವಾಗಿ ನಮ್ಮನ್ನಗಲಿದ ಸ್ನೇಹ ಜೀವಿ, ಜನಾನುರಾಗಿ ಅನಂತ್ ಕುಮಾರ್

ನಾಡು-ನುಡಿಯ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಅನಂತ್ ಕುಮಾರ್ ಅವರನ್ನು ಕನ್ನಡ ಮಾಸದಲ್ಲೇ ಕಳೆದುಕೊಂಡಿದ್ದು ದುರದೃಷ್ಟ. 59 ಸಾಯುವ ವಯಸ್ಸಲ್ಲವೇ ಅಲ್ಲ. ಆದರೆ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಅವರು ಇಹಲೋಕ ತ್ಯಜಿಸಿದ್ದಾರೆ.

'ನೀಲಿಕಣ್ಣಿನ ಹುಡುಗ'ನ ಒಡನಾಟದ ಬಗ್ಗೆ ದಿನೇಶ್ ಅಮಿನ್ ಮಟ್ಟು ಭಾವುಕ ಮಾತುಗಳು...'ನೀಲಿಕಣ್ಣಿನ ಹುಡುಗ'ನ ಒಡನಾಟದ ಬಗ್ಗೆ ದಿನೇಶ್ ಅಮಿನ್ ಮಟ್ಟು ಭಾವುಕ ಮಾತುಗಳು...

ಈ ಹೊತ್ತಲ್ಲಿ ವಿಶ್ವ ಸಂಸ್ಥೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಿದ್ದ ಅವರ ಕನ್ನಡಾಭಿಮಾನ, ಅವರಿಗಿದ್ದ ಕನ್ನಡದ ಅಸ್ಮಿತೆ ನೆನಪಾಗುತ್ತಿದೆ. ಅವರ ಅಗಲಿಕೆ ರಾಜಕೀಯದಲ್ಲಿ ಮಾತ್ರವಲ್ಲ, ಕನ್ನಡ ಭಾಷಾ ಕ್ಷೇತ್ರದಲ್ಲೂ ನಿರ್ವಾತ ಸೃಷ್ಟಿಸಿರುವುದು ಸುಳ್ಳಲ್ಲ.

English summary
Union minister Ananth Kumar was given his speech in 67th United Nations general assembly in Kannada Language. He was the first man who gave speech in Kannada in UNGA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X