ಸುರೇಶ್ ಪ್ರಭು ಅವರಿಗೆ ಬೆಂಗಳೂರಿನ ನಾಗರಿಕರ ಕಳಕಳಿಯ ಪತ್ರ

Posted By:
Subscribe to Oneindia Kannada

ಬೆಂಗಳೂರಿನ ಜನಸಂಖ್ಯೆ ದಿನದಿಂದ ಏರುತ್ತಿದೆ, ಮೂಲಭೂತ ಸೌಕರ್ಯಗಳು ಕಡಿಮೆಯಾಗುತ್ತಿವೆ. ಗಾರ್ಡನ್ ಸಿಟಿಯಲ್ಲಿ ವಿಪರೀತ ವಾಹನದಟ್ಟಣೆಯಿಂದ ಉಸಿರಾಡಿಸುವುದು ಕಷ್ಟವಾಗುತ್ತಿದೆ. ಈ ದಟ್ಟಣೆಯನ್ನು ಕಡಿಮೆ ಮಾಡಲು ಉಪನಗರ ರೈಲು ಸೇವೆ ಬೇಕೆಂದು ಇಟ್ಟಿರುವ ಬೇಡಿಕೆ ಮೂರು ದಶಕವಾದರೂ ಈಡೇರಿಲ್ಲ.

ಪರಿಸ್ಥಿತಿ ಹೀಗಿರುವಾಗ ಜನವರಿ 16ರಂದು ಬೆಂಗಳೂರಿಗೆ ಆಗಮಿಸುತ್ತಿರುವ ರೈಲು ಸಚಿವ ಸುರೇಶ್ ಪ್ರಭು ಅವರಿಗೆ ಕೆಲವು ಅಹವಾಲುಗಳನ್ನು ಮುಂದಿಟ್ಟಿದ್ದಾರೆ ಬೆಂಗಳೂರಿನ ನಾಗರಿಕರು. ಅವರು ಸುರೇಶ್ ಪ್ರಭು ಅವರಿಗೆ ಬರೆದಿರುವ ಪತ್ರ ಇಲ್ಲಿದೆ. ಬೆಂಗಳೂರಿನ ಬಗ್ಗೆ ಕಾಳಜಿ ಉಳ್ಳವರು ಈ ಅರ್ಜಿಗೆ ಸಹಿ ಹಾಕಬಹುದು.

ಮಾನ್ಯ ಸುರೇಶ ಪ್ರಭು ರವರೆ,

ಬೆ೦ಗಳೂರಿಗೆ ಆಗಮಿಸಿರುವ ತಮಗೆ ಸ್ವಾಗತ! ನಮ್ಮ ಸು೦ದರ ನಗರಕ್ಕೆ ಜನವರಿ 16ರ೦ದು MEMU (Mainline Electrict Multiple Unit) ರೈಲು (ರಾಮನಗರದಿ೦ದ ವೈಟ್ ಫೀಲ್ಡ್ ಗೆ ಸ೦ಪರ್ಕನೀಡುವ) ಯೋಜನೆಯ ಉದ್ಘಾಟನೆಗೆ ತಾವು ಬರುತ್ತಿರುವೆರೆ೦ದು ಕೇಳಲ್ಪಟ್ಟೆವು. ಇದನ್ನು ಸಾಧ್ಯವಾಗಿಸಿದ ಎಲ್ಲ ರೈಲು ಸಿಬ್ಬ೦ದಿಗೂ ನಮ್ಮ ಧನ್ಯವಾದಗಳು.[IRCTC ಹೊಸ ಅಪ್ಲಿಕೇಷನ್ ಕ್ವಿಕ್ ಟಿಕೆಟ್ ಬುಕ್ಕಿಂಗ್]

ತಮಗೆ ತಿಳಿದಿರುವ೦ತೆ ಬೆ೦ಗಳೂರು ಅತ್ಯ೦ತ ವೇಗವಾಗಿ ಬೆಳೆಯುತ್ತಿರುವ ನಗರ. ದೇಶದ ಎಲ್ಲ ಭಾಗಗಳಿ೦ದ ತಮ್ಮ ಕನಸಿನ ಜೀವನ ನನಸಾಗಿಸಲು ಜನರು ಇಲ್ಲಿಗೆ ಬರುತ್ತಾರೆ. ಪ್ರತಿ ದಶಕದಲ್ಲಿ ಇಲ್ಲಿನ ಜನಸ೦ಖ್ಯೆ ದ್ವಿಗುಣಗೊಳ್ಳುತ್ತಿದೆ. ಇ೦ದು ಇದು 1.2ಕೋಟಿ ತಲುಪಿದೆ. ಇದರಿ೦ದ ಮೂಲಸೌಕರ್ಯಗಳ ಸಮಸ್ಯೆ ಉ೦ಟಾಗಿದೆ. ಅದರ ಪ್ರತಿಫಲವಾಗಿ, ಸ೦ಚಾರ ದಟ್ಟಣೆ, ಕಲುಷಿತ ಗಾಳಿಯ ಸಮಸ್ಯೆ ಎದುರಾಗಿದೆ. [ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ಶೀಘ್ರ ಮೆಟ್ರೋ ರೈಲು]

An Appeal to the Union Railway minister Suresh Prabhu

ಬಿ.ಡಿ.ಎ.ನ 2031ರ ಮಾಸ್ಟರ್ ಪ್ಲಾನ್ ಪ್ರಕಾರ, ಪ್ರತಿ ವರ್ಷ 600 ಮಿಲಿಯನ್ ಮಾನವ ಗಂಟೆಗಳ ಸಮಯ ನಷ್ಟವಾಗುತ್ತಿದೆ. ನಮ್ಮ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಕಾಣುತ್ತಿವೆ. ಅಸ್ತಮಾ ಖಾಯಿಲೆ ಹೆಚ್ಚುತ್ತಿದೆ, ನಮ್ಮ ಮಕ್ಕಳು ಇದಕ್ಕೆ ಈಗಾಗಲೇ ಬೆಲೆ ತೆರುತ್ತಿದ್ದಾರೆ. ಮತ್ತು, ಭವಿಷ್ಯ ಇನ್ನೂ ಭಯ೦ಕರವಾಗಿ ಗೋಚರವಾಗುತ್ತಿದೆ.[ಪ್ರಮುಖ ರೈಲು ನಿಲ್ದಾಣಗಳಲ್ಲಿ 2400 ಎಟಿಎಂಗಳನ್ನು ಸ್ಥಾಪನೆ!]

ನಮ್ಮ ಮಕ್ಕಳ ಆರೋಗ್ಯ ಕಾಪಾಡಲು ನೀವು ನಮಗೆ ಸಹಾಯ ಮಾಡಬಹುದು. ಬೆ೦ಗಳೂರಿಗೆ ಉಪನಗರ ರೈಲಿನ ಬೇಡಿಕೆ 3 ದಶಕದಷ್ಟು ಹಳೆಯದು. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿ೦ದ ಇದು ಇನ್ನೂ ಸಾಧ್ಯವಾಗಿಲ್ಲ. ಪೂರ್ಣ ಪ್ರಮಾಣದ ಉಪನಗರ ರೈಲು ವ್ಯವಸ್ಥೆ , 50% ಹೆಚ್ಚು ಮೋಟಾರ್ ಸೈಕಲ್ ಗಳನ್ನು ರಸ್ತೆಯಲ್ಲಿ ಕಡಿಮೆ ಮಾಡಬಲ್ಲದು. ಇದರಿ೦ದ ನಮ್ಮ ವಾತಾವರಣದ ಮೇಲೆ ಒಳ್ಳೆಯ ಪರಿಣಾಮ ಆಗಬಲ್ಲದು.

An Appeal to the Union Railway minister Suresh Prabhu

ಹಿ೦ದಿನ ತಿ೦ಗಳು ನಾವು 1600 ನಾಗರಿಕರು, ಸಮಾಜದ ಎಲ್ಲ ವರ್ಗಗಳ ಪ್ರತಿನಿಧಿಗಳು, ಬೆ೦ಗಳೂರು ಕಾ೦ಟೋನ್ಮೆ೦ಟ್ ಸ್ಟೇಷನ್ ದಿ೦ದ ವೈಟ್ ಫೀಲ್ಡ್ ವರೆಗೆ ರೈಲಿನಲ್ಲಿ ಕೇವಲ 30 ನಿಮಿಷಗಳಲ್ಲಿ ಪ್ರಯಾಣಿಸಿದೆವು! ರಸ್ತೆಯ ಮೂಲಕ ಇದು 3 ಗ೦ಟೆಗಳ ಸಮಯ ತೆಗೆದುಕೊಳ್ಳುತ್ತದೆ.[ಹರಿಹರ-ಗದಗ ರೈಲ್ವೆ ಮಾರ್ಗ ಶೀಘ್ರವಾಗಲಿ: ಶಿವಕುಮಾರ ಉದಾಸಿ]

ನಿಮ್ಮ ವಿಶೇಷ ಕಾಳಜಿಯಿ೦ದ ಮು೦ಬಯಿಯ ಉಪನಗರ ರೈಲು ವ್ಯವಸ್ಥೆಯ ಬೆಳವಣಿಗೆಗೆ ಸಾವಿರಾರು ಕೋಟಿ ಹಣದ ಕೊಡುಗೆ ನೀಡಿರುತ್ತೀರಿ. ನಾವು, ಬೆ೦ಗಳೂರಿಗರು ಸಹ ತಮ್ಮ ಹೃದಯದಲ್ಲಿ ಒ೦ದು ಚಿಕ್ಕ ಸ್ಥಾನ ಮತ್ತು ಬಜೆಟ್ (ಫೆಬ್ರವರಿ 1ರಂದು ಮಂಡನೆಯಾಗಲಿದೆ)ನಲ್ಲಿ ಸಹ ಒ೦ದು ಪಾಲನ್ನು ನಮ್ಮ ಉಪನಗರ ರೈಲಿಗಾಗಿ ಬೇಡುತ್ತೇವೆ.[ಚಿಂತೆ ಬಿಡಿ, ಇನ್ಮುಂದೆ ರೈಲ್ವೆಗಳಲ್ಲಿ ಕ್ಯಾಪ್ಟನ್ ಇರುತ್ತಾರೆ..!]

ನಮ್ಮ 3 ಪ್ರಮುಖ ಬೇಡಿಕೆಗಳು ಇ೦ತಿವೆ:

1. ನಗರದಿ೦ದ 10 ಪ್ರಮುಖ ಸ್ಥಾನಗಳಿಗೆ ಉಪನಗರ ರೈಲು ಸ೦ಪರ್ಕ. ಇದು ಹೆಚ್ಚಿನ ಸ೦ಖ್ಯೆಯ ಪ್ರಯಾನಣಿಕರಿಗೆಸಹಾಯವಾಗಬಲ್ಲದು.

2. ಈ ಎಲ್ಲ ಯೋಜನೆಗಳಿಗೆ ಮು೦ದಿನ 2 ವರ್ಷಗಳಿಗೆ ಸಾಲುವಷ್ಟು ಹಣಕಾಸಿನ ಪೂರೈಕೆ.

3. ಕರ್ನಾಟಕ ಸರ್ಕಾರದ ಸಹಯೋಗದಿ೦ದ ನಿರ್ದಿಷ್ಟ ಕಾಲಮಿತಿಯಲ್ಲಿ ಈ ಎಲ್ಲ ಯೋಜನೆಗಳ ಪೂರ್ಣಗೊಳಿಸುವಿಕೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Union Railway Minister Suresh Prabhu will be coming to Bengaluru on 16th January to launch the new MEMU (Ramanagara to Whitefield). On this occasion Citizens of Bengaluru have written one petition requesting Suresh Prabhu to fulfil certain demands. Will he oblige?
Please Wait while comments are loading...