ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಲವೇ ದಿನಗಳಲ್ಲಿ ಬರಲಿದೆ ಪ್ರವಾಹ ಮುನ್ಸೂಚನೆ ನೀಡುವ app!

|
Google Oneindia Kannada News

ಬೆಂಗಳೂರು, ಜೂನ್ 08: ಪ್ರವಾಹ ಮುನ್ಸೂಚನೆ ನೀಡುವ appವೊಂದು ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಗೆ ಲಗ್ಗೆ ಇಡಲಿದೆ. ಮಳೆಗಾಲದಲ್ಲಿ ನಿಮ್ಮ ಏರಿಯಾದಲ್ಲಿ ಪರಿಸ್ಥಿತಿ ಹೇಗಿದೆ, ರಸ್ತೆಯಲ್ಲಿ ನೀರು ನಿಂತಿದೆಯಾ? ಸಂಚಾರ ಅಸ್ತವ್ಯಸ್ಥವಾಗಿದೆಯಾ ಎಂಬೆಲ್ಲ ಮಾಹಿತಿಯನ್ನೂ ಈ app ನೀಡಲಿದೆ.

ಕರಾವಳಿ, ಮಲೆನಾಡಿನಲ್ಲಿ ಇನ್ನಷ್ಟು ಜೋರಾಗಲಿದೆ ಮಳೆಕರಾವಳಿ, ಮಲೆನಾಡಿನಲ್ಲಿ ಇನ್ನಷ್ಟು ಜೋರಾಗಲಿದೆ ಮಳೆ

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ(ಕೆಎಸ್ ಎಸ್ ಡಿಎಂಸಿ) ಮತ್ತು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿಗಳು ಜಂಟಿಯಾಗಿ ನಿರ್ಮಿಸುತ್ತಿರುವ ಈ app ಮಳೆಗಾಲದಲ್ಲಿ ನಿಮ್ಮ ನೆರವಿಗೆ ಅವಶ್ಯವಾಗಿ ಬರಲಿದೆ.

An app which sends flood alerts during rain will be comming soon

ಈ ಕುರಿತು ಬಿಬಿಎಂಪಿಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಕೆಎಸ್ ಎಸ್ ಡಿಎಂಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ. ಯಾವುದೇ ನಿರ್ದಿಷ್ಟ ಏರಿಯಾದಲ್ಲಿ ಭಾರೀ ಮಳೆ ಸುರಿಯುತ್ತಿದ್ದರೆ, ನೀರು ತುಂಬಿದ್ದರೆ ಆ ಮಾಹಿತಿಯನ್ನು ಈ app ನೀಡಲಿದೆ. ಈ app ಯಶಸ್ವಿಯಾದಲ್ಲಿ ಭಾರತದ 10 ಪ್ರಮುಖ ನಗರಗಳಲ್ಲಿ ಈ app ಅನ್ನು ಕೆಲವು ಅಗತ್ಯ ಬದಲಾವಣೆಯೊಂದಿಗೆ ಪರಿಚಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

English summary
Monsoon 2018: Karnataka State Natural Disaster Monitoring Centre (KSNDMC) and IISc scientists are developing an app to equip users with crucial information, particularly during monsoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X